/newsfirstlive-kannada/media/media_files/2025/10/24/bescom-and-mescom-2025-10-24-12-49-46.jpg)
ಎಲ್ಲ ಎಸ್ಕಾಂಗಳಲ್ಲಿ ಇಂದು, ನಾಳೆ ಆನ್ ಲೈನ್ ಸೇವೆ ಸ್ಥಗಿತ
ಇಂದು ನಾಳೆ ಎಲ್ಲಾ ಎಸ್ಕಾಂಗಳಲ್ಲಿ ಆನ್ ಲೈನ್ ಸೇವೆಗಳು ಸ್ಥಗಿತಗೊಳ್ಳಲಿವೆ. 2 ದಿನ ಐದು ಎಸ್ಕಾಂಗಳಲ್ಲಿ ಆನ್‌ಲೈನ್ ಸೇವೆಗಳು ಸಿಗಲ್ಲ. ಮಾಹಿತಿ ಮತ್ತು ತಂತ್ರಜ್ಞಾನ ವ್ಯವಸ್ಥೆಯ ತುರ್ತು ನಿರ್ವಹಣೆ ಹಿನ್ನಲೆ ಎಲ್ಲಾ ಅನ್ ಲೈನ್ ಸೇವೆಗಳು ಸ್ಥಗಿತಗೊಳ್ಳುತ್ತಿವೆ ಎಂದು ಎಸ್ಕಾಂಗಳು ತಿಳಿಸಿದೆ. ಇಂದು ರಾತ್ರಿ 8 ಗಂಟೆಯಿಂದ ಅಕ್ಟೋಬರ್ 25 ರ ಮಧ್ಯಾಹ್ನ 1 ಗಂಟೆವರೆಗೆ ಆನ್‌ಲೈನ್ ಸೇವೆಗಳು ಅಲಭ್ಯವಾಗಲಿವೆ.
Attention BESCOM Consumers
— Namma BESCOM | ನಮ್ಮ ಬೆಸ್ಕಾಂ (@NammaBESCOM) October 24, 2025
Temporary Unavailability of online Services
From October 24, 8 PM to October 25, 1 PM, 2025
Complaints or any information dial BESCOM 24/7 Helpline: 1912 pic.twitter.com/2BD4BSo8Ii
ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ, ಹೊಸ ಸಂಪರ್ಕ ಸೇರಿ ಎಲ್ಲಾ ರೀತಿಯ ಅನ್ ಲೈನ್ ಸೇವೆ ಸ್ಥಗಿತವಾಗುತ್ತಿವೆ. ಬೆಸ್ಕಾಂ, ಜೆಸ್ಕಾಂ, ಸೆಸ್ಕಾ, ಮೆಸ್ಕಾಂ, ಹೆಸ್ಕಾಂ ನಲ್ಲಿ ಆನ್ ಲೈನ್ ಸೇವೆ ಸಿಗೋದಿಲ್ಲ . ಆದ್ರೆ ಈ ವೇಳೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ . ರಾಜ್ಯಾದ್ಯಂತ ಎಲ್ಲಾ ಎಸ್ಕಾಂಗಳ ಆನ್‌ಲೈನ್ ಸೇವೆ ಪೂರ್ತಿ ಸ್ಥಗಿತವಾಗಲಿದೆ ಎಂದು ಬೆಸ್ಕಾಂ ಸೇರಿದಂತೆ ಎಸ್ಕಾಂಗಳು ತಿಳಿಸಿವೆ.
/filters:format(webp)/newsfirstlive-kannada/media/media_files/2025/10/24/bescom-and-mescom-2025-10-24-12-51-13.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us