/newsfirstlive-kannada/media/media_files/2025/10/18/hsn_hasanambe-1-2025-10-18-07-04-18.jpg)
ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಜನಸಾಗರ
ಹಾಸನದ ಅಧಿದೇವತೆ ಹಾಸನಾಂಬೆ ದರ್ಶನೋತ್ಸವ 9ನೇ ದಿನಕ್ಕೆ ಕಾಲಿಟ್ಟಿದೆ. ಇನ್ನು ಇರೋದು ನಾಲ್ಕೇ ದಿನ.. ಹೀಗಾಗಿ ಇವತ್ತು ಹಾಸನಾಂಬೆ ದೇಗುಲಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು.. ಜನಸಾಗರವನ್ನು ನಿಯಂತ್ರಿಸಲು ಪೊಲೀಸರು ಸುಸ್ತಾದ್ರು.. ಇದೇ ವೇಳೆ ಗಣ್ಯಾತಿಗಣ್ಯರು ಆಗಮಿಸಿ ಹಾಸನಾಂಬೆಯ ದರ್ಶನ ಪಡೆದಿದ್ದಾರೆ..
ಹಾಸನಾಂಬೆ.. ದಕ್ಷಿಣ ಭಾರತದ ಪವಿತ್ರ ಶಕ್ತಿ ಪೀಠಗಳಲ್ಲಿ ಒಂದು.. ಸಪ್ತಮಾತೃಕೆ, ಅಂಬಾದೇವಿ, ಮಹಾದೇವಿ ಅಂತೆಲ್ಲಾ ಆರಾಧಿಸಲ್ಪಡುವ ಹಾಸನಾಂಬೆ ವರ್ಷಕ್ಕೊಮ್ಮೆ ಬಾಗಿಲು ತೆರೆದು ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ.. ಕಣ್ಣು ಹಾಯಿಸಿದಷ್ಟೂ ಜನ.. ಹಾಸನಾಂಬೆಯ ದೇಗುಲ ಭಕ್ತರಿಂದ ತುಂಬಿ ತುಳುಕುತ್ತಿದೆ..
ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಭಕ್ತರ ದಂಡು!
ವಾರಾಂತ್ಯ.. ಸಾಲು ಸಾಲು ರಜೆ.. ಭಕ್ತ ಸಾಗರ!
ಆಕ್ಟೋಬರ್ 23ರವರೆಗೆ ದರ್ಶನ ನೀಡಲಿರುವ ಹಾಸನದ ಅಧಿದೇವತೆ ದರ್ಶನಕ್ಕೆ ಇರೋದು ಇನ್ನು ನಾಲ್ಕೇ ದಿನ.. ಸಾಲು ಸಾಲು ರಜೆ, ವೀಕೆಂಡ್​​ನಲ್ಲಿ ಹಾಸನದತ್ತ ಭಕ್ತಸಾಗರವೇ ಹರಿದು ಬರ್ತಿದೆ.. ಇವತ್ತು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತರು ಹಾಸನಾಂಬೆಯ ದರ್ಶನ ಪಡೆದ್ರು.. ಜಗದಂಬೆಯ ದರ್ಶನಕ್ಕೆ ಮುಗಿಬಿದ್ರು.. ಸರತಿ ಸಾಲಲ್ಲಿ ನೂಕುನುಗ್ಗಲು ಕೂಡ ಆಯ್ತು..
ವೀಕೆಂಡ್​​ನಲ್ಲಿ ಅಪಾರ ಭಕ್ತರು ಬರುವ ಮುನ್ಸೂಚನೆ ಇದ್ದ ಕಾರಣ ಖುದ್ದು ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ್ರೇ ಪರಿಸ್ಥಿತಿಯನ್ನು ಮಾನಿಟರ್ ಮಾಡಿದ್ರು. ರಾತ್ರಿಯೇ ದೇವಾಲಯಕ್ಕೆ ಆಗಮಿಸಿದ್ದ ಸಚಿವ ಕೃಷ್ಣಬೈರೇಗೌಡ ಖುದ್ದು ಪರಿಶೀಲನೆ ನಡೆಸಿದ್ರು.. ಮೈಕ್ ಹಿಡಿದು ಗರ್ಭಗುಡಿ ಬಳಿ ನಿಂತು ಭಕ್ತರ ಸುಗಮ ದರ್ಶನಕ್ಕೆ ಅನುಕೂಲ ಮಾಡಿಕೊಟ್ರು..
ಇವತ್ತು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಸನಾಂಬೆ ದರ್ಶನ ಪಡೆದಿದ್ದಾರೆ. ಕುಟುಂಬಸ್ಥರ ಜೊತೆ ಬಂದು ಪ್ರೋಟೋಕಾಲ್ ಪ್ರಕಾರ ದರ್ಶನ ಪಡೆದಿದ್ದಾರೆ
ಹಾಸನಾಂಬೆ ದರ್ಶನ ಪಡೆದ ಪ್ರೀತಂಗೌಡ!
ಇನ್ನು ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಕುಟುಂಬ ಸಮೇತ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಪತ್ನಿ, ಮಗ ಹಾಗೂ ಕುಟುಂಬಸ್ಥರ ಜೊತೆ ಆಗಮಿಸಿ ದರ್ಶನ ಪಡೆದಿದ್ದಾರೆ.. ಬಳಿಕ ಮಾತನಾಡಿದ ಪ್ರೀತಂಗೌಡ ಜಿಲ್ಲೆ , ರಾಜ್ಯ ಹಾಗೂ ದೇಶಕ್ಕೆ ಒಳಿತಾಗಲಿ ಅಂತ ಪ್ರಾರ್ಥನೆ ಮಾಡಿದ್ದೀನಿ ಎಂದ್ರು.
ಈ ನಡುವೆ ಮಾಜಿ ಸಚಿವ ಸುನೀಲ್ ಕುಮಾರ್ ಹಾಗೂ ದೇವಿಯ ದರ್ಶನ ಪಡೆದಿದ್ದಾರೆ.. ದರ್ಶನಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆ ಅಂತ ಶ್ಲಾಘಿಸಿದ್ದಾರೆ..
ಇನ್ನು ಇದೇ ವೇಳೆ ಬಿಜೆಪಿ ಎಂಎಲ್​ಸಿ ರವಿಕುಮಾರ್ ಹಾಗೂ ಮಾಜಿ ಸಚಿವ ಕೆ.ಎನ್.ರಾಜಣ್ಣ ಪುತ್ರ ಎಂಎಲ್​ಸಿ ರಾಜೇಂದ್ರ ಕೂಡ ಹಾಸನಾಂಬೆ ದರ್ಶನ ಪಡೆದಿದ್ದಾರೆ..
ಒಟ್ಟಾರೆ, ನಿನ್ನೆ ಹಾಗೂ ಇವತ್ತು ಎರಡು ದಿನಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ. ನಾಳೆಯಿಂದ ಅಕ್ಟೋಬರ್ 22ರವರೆಗೂ ದರ್ಶನಕ್ಕೆ ಅವಕಾಶ ಇದ್ದು ಲಕ್ಷಾಂತರ ಭಕ್ತರು, ಗಣ್ಯರು ದೇವಿಯ ಬರ್ತಿರೋದು ನಿಜಕ್ಕೂ ಒಂದು ದಾಖಲೆಯಾಗಿದೆ..
ಕಿರಣ್, ನ್ಯೂಸ್​​​ಫಸ್ಟ್​​, ಹಾಸನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ