/newsfirstlive-kannada/media/media_files/2025/11/18/elephant-rescue-operation03-2025-11-18-14-57-07.jpg)
ಕಾವೇರಿ ನಾಲೆಗೆ ಬಿದ್ದಿದ್ದ ಕಾಡಾನೆ ರಕ್ಷಣಾ ಕಾರ್ಯಾಚರಣೆ ಯಶಸ್ವಿ
ಮಂಡ್ಯ ಜಿಲ್ಲೆಯ ಶಿವನಸಮುದ್ರ ಬಳಿ ನಾಲೆಗೆ ಬಿದ್ದಿದ್ದ ಆನೆಯನ್ನು ಮೇಲೇತ್ತುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ನಾಲೆಗೆ ಬಿದ್ದು ನಾಲೆಯೊಳಗೆ ಓಡಾಡುತ್ತಿದ್ದ ಕಾಡಾನೆಗೆ ಮೊದಲಿಗೆ ಅರವಳಿಕೆ ಚುಚ್ಚುಮದ್ದು ನೀಡಲಾಯಿತು. ಇದರಿಂದ ಕಾಡಾನೆ ನಿತ್ರಾಣಗೊಂಡು ಕುಸಿದು ಬಿತ್ತು. ಅಷ್ಟರಲ್ಲಾಗಲೇ, ನಾಲೆಯೊಳಗೆ ಮರದ ಪಟ್ಟಿಯನ್ನು ಬಿಡಲಾಗಿತ್ತು. ಕಾಡಾನೆ, ಅರವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಕುಸಿದು ಬಿದ್ದ ಬಳಿಕ ಕ್ರೇನ್ ಹಗ್ಗದ ಸಹಾಯದಿಂದ ಆನೆಯನ್ನು ಎತ್ತಿ ಮರದ ಪಟ್ಟಿಯ ಮೇಲೆ ಮಲಗಿಸಲಾಯಿತು. ಬಳಿಕ ಮರದ ಪಟ್ಟಿಯನ್ನು ಕ್ರೇನ್ ಸಹಾಯದಿಂದ ಎತ್ತಿ ಸೀದಾ ತೆರೆದ ಟ್ರಕ್‌ಗೆ ಹಾಕಲಾಯಿತು. ಬಳಿಕ ಟ್ರಕ್ ನಲ್ಲಿ ಕಾಡಾನೆಯನ್ನು ತೆಗೆದುಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ಹೋಗಿದ್ದಾರೆ. ಶಿವನಸಮುದ್ರದ ಬಳಿಯ ಕಾಡಿಗೆ ಈ ಕಾಡಾನೆಯನ್ನು ಮತ್ತೆ ಬಿಡಲಾಗುತ್ತೆ. ಆನೆಗೆ ಪ್ರಜ್ಞೆ ಬರುವವರೆಗೂ ಅರಣ್ಯ ಇಲಾಖೆ ಅಧಿಕಾರಿಗಳು , ತಜ್ಞ ವೈದ್ಯರು ಚಿಕಿತ್ಸೆ ನೀಡುವರು. ಕಾಡಾನೆ ಸೊಂಡಿಲು, ಕಾಲು ಭಾಗದಲ್ಲಿ ಏನಾದರೂ ಫಂಗಸ್ ಆಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವರು.
ಸತತ 3 ಗಂಟೆಗಳ ಕಾಲ ಕಾಡಾನೆಯ ರಕ್ಷಣೆಗೆ ಅಪರೇಷನ್ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳ ಪ್ರಯತ್ನ, ಶ್ರಮ ಯಶಸ್ವಿಯಾಗಿದೆ. ಕಾಡಾನೆಯನ್ನು ಸುರಕ್ಷಿತವಾಗಿ ಮೇಲೇತ್ತುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
/filters:format(webp)/newsfirstlive-kannada/media/media_files/2025/11/18/elephant-rescue-operation02-2025-11-18-14-42-43.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us