/newsfirstlive-kannada/media/media_files/2025/09/02/loka-cinema-dialogue-2025-09-02-12-43-18.jpg)
ಲೋಕ ಸಿನಿಮಾದಲ್ಲಿ ಆಕ್ಷೇಪಾರ್ಹ ಡೈಲಾಗ್
ಬೆಂಗಳೂರು ಯುವತಿಯರನ್ನ ನಾನು ಮದುವೆಯಾಗಲ್ಲ, ಇಲ್ಲಿರೋರೆಲ್ಲಾ ಡಗಾ*** ಗಳು! ಇದು ಮಲಯಾಳಂ ಸಿನಿಮಾ ಲೋಕಃ ನಲ್ಲಿರುವ ಒಂದು ಡೈಲಾಗ್. ಈ ಡೈಲಾಗ್ ಈಗ ಬೆಂಗಳೂರು ಜನರು ಮಲಯಾಳಂ ಈ ಸಿನಿಮಾದ ವಿರುದ್ಧ ರೊಚ್ಚಿಗೇಳುವಂತೆ ಮಾಡಿದೆ. ಇಡೀ ಬೆಂಗಳೂರಿನ ಯುವತಿಯರನ್ನೇ ಈ ಡೈಲಾಗ್ ಮೂಲಕ ನಿಂದಿಸಲಾಗಿದೆ. ಸಿನಿಮಾದಿಂದ ಈ ಡೈಲಾಗ್ ಅನ್ನು ತೆಗೆದು ಹಾಕಬೇಕು. ಸಿನಿಮಾದಲ್ಲಿ ಬೆಂಗಳೂರಿನ ಯುವತಿಯರ ಮಾನ ಹರಣ ಮಾಡಲಾಗಿದೆ. ಬೆಂಗಳೂರಿನ ಯುವತಿಯರನ್ನು ಕ್ಯಾರೆಕ್ಟರ್ ಲೆಸ್ ಎಂಬಂತೆ ಬಿಂಬಿಸಲಾಗಿದೆ. ಬೆಂಗಳೂರು ಯುವತಿಯರನ್ನ ಕೆಟ್ಟದಾಗಿ ಮಲಯಾಳಂ ಸಿನಿಮಾ ಲೋಕಃನಲ್ಲಿ ಬಿಂಬಿಸಲಾಗಿದೆ ಎಂದು ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು ಯುವತಿಯರನ್ನ ಕೆಟ್ಟದಾಗಿ ಬ್ರ್ಯಾಂಡ್ ಮಾಡಲಾಗಿದೆ ಎಂಬ ಟೀಕೆ ಕೇಳಿ ಬಂದಿದೆ. ಮಲಯಾಳಂ ಚಿತ್ರದ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಮಲಯಾಳಂ ಭಾಷೆಯ ಲೋಕಃ ಚಿತ್ರದ ವಿರುದ್ಧ ಬೆಂಗಳೂರಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದಲ್ಲಿ ಬೆಂಗಳೂರನ್ನ ಡ್ರಗ್ಸ್ ಸಿಟಿ ಎನ್ನುವ ರೀತಿ ತೋರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತವಾಗಿದೆ. ಬೆಂಗಳೂರು ಯುವತಿಯರನ್ನ ಸಾಮೂಹಿಕವಾಗಿ ನಿಂದಿಸಿರುವಂತೆ ಸಂಭಾಷಣೆ ಇದೆ ಎಂದು ಟೀಕೆ ಮಾಡಲಾಗುತ್ತಿದೆ. ಲೋಕಃ ಸಿನಿಮಾ ಮೊಟ್ಟ ಮೊದಲ ಸೂಪರ್ ವುಮನ್ ಸಿನಿಮಾ ಎಂಬ ಖ್ಯಾತಿ ಗಳಿಸಿದೆ. ಆದರೇ, ಮಹಿಳೆಯರು, ಯುವತಿಯರನ್ನೇ ನಿಂದಿಸುವ ಮೂಲಕ ವಿವಾದಕ್ಕೆ ಗುರಿಯಾಗಿದೆ.
ಸನ್ನಿವೇಶವೊಂದರಲ್ಲಿ ಬೆಂಗಳೂರು ಯುವತಿಯರನ್ನ ನಾನು ಮದುವೆಯಾಗಲ್ಲ, ಇಲ್ಲಿರೋರೆಲ್ಲಾ ಡಗಾ*** ಗಳು ಎಂದು ಮದುವೆಯಾಗಬೇಕಾದ ಹುಡುಗ ಗೌಡ ಎಂಬಾತನ ಬಾಯಿಂದ ಡೈಲಾಗ್ ಹೇಳಿಸಲಾಗಿದೆ. ಬೆಂಗಳೂರನ್ನ ಡ್ರಗ್ಸ್ ಸಿಟಿ ಎನ್ನುವ ರೀತಿ ಬ್ರ್ಯಾಂಡ್ ಮಾಡಲಾಗಿದೆ ಎಂದು ಟೀಕೆಯನ್ನು ಬೆಂಗಳೂರಿನ ಜನರು ಮಾಡುತ್ತಿದ್ದಾರೆ. ಮತ್ತೊಬ್ಬ ನೆಟ್ಟಿಗ ನಮ್ಮ ನಗರದ ಯುವತಿಯರನ್ನ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ದುಲ್ಕಾರ್ ಸಲ್ಮಾನ್ ನಿರ್ಮಾಣದ ಚಿತ್ರ ಲೋಕಃ ಇಡೀ ಚಿತ್ರದ ಕಥೆ ಬೆಂಗಳೂರಿನಲ್ಲೇ ಸಾಗುತ್ತದೆ. ಕಲ್ಯಾಣಿ ಪ್ರಿಯದರ್ಶನ್ ಸೂಪರ್ ಹೀರೋ ಪಾತ್ರದಲ್ಲಿ ನಟಿಸಿದ್ದಾರೆ. ಲೋಕಃ ಸಿನಿಮಾದ ಡೈಲಾಗ್ ಗೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಖಂಡನೆ ವ್ಯಕ್ತಪಡಿಸಿದ್ದಾರೆ. ಚಿತ್ರತಂಡ ಕೂಡಲೇ ಕ್ಷಮೆ ಕೇಳಬೇಕು .ಇಲ್ಲ ಕೇರಳಕ್ಕೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟ ರಾಜ್ ಬಿ ಶೆಟ್ಟಿ ಈ ಬಗ್ಗೆ ಪೋಸ್ಟ್ ಅನ್ನು ಟ್ಯಾಗ್ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಬೆಂಗಳೂರು ನಗರವನ್ನು ಪಬ್ ಸಿಟಿ, ಡ್ರಗ್ಸ್ ಸಿಟಿ ಎಂಬಂತೆ ಬಿಂಬಿಸಿರುವುದು ಕೂಡ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮಲಯಾಳಿಗಳು ಬೆಂಗಳೂರಿಗೆ ಬಂದು ಉದ್ಯೋಗ ಕಂಡುಕೊಂಡು ನೆಲೆ ಕಂಡುಕೊಂಡಿದ್ದಾರೆ. ಆದರೇ, ಸಿನಿಮಾದಲ್ಲಿ ಮಾತ್ರ ಬೆಂಗಳೂರು ಅನ್ನು ನಿಂದಿಸುವ, ಕನ್ನಡಿಗ ಯುವತಿಯರನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.