/newsfirstlive-kannada/media/media_files/2025/09/22/pak-airstrike-over-kp-2025-09-22-16-32-19.jpg)
ಖೈಬರ್ ಫಕುನುತಾವ್ ಪ್ರಾಂತ್ಯದ ಮೇಲೆ ಪಾಕ್ ಮಿಲಿಟರಿ ಬಾಂಬ್ ದಾಳಿ!
ಪಾಕಿಸ್ತಾನಕ್ಕೆ ಯಾವುದೇ ವೈರಿ ರಾಷ್ಟ್ರವನ್ನು ಸೋಲಿಸುವ ಶಕ್ತಿ ಇಲ್ಲ. ತಾಲಿಬಾನ್ ಗಳ ಜೊತೆ ಸ್ನೇಹ ಈಗ ಮುರಿದು ಬಿದ್ದಿದೆ. ಇರಾನ್ ಜೊತೆಗಿನ ಸಂಘರ್ಷವೂ ಮುಂದುವರಿದಿದೆ. ಇದರ ಮಧ್ಯೆಯೇ ಪಾಕಿಸ್ತಾನ, ತನ್ನದೇ ದೇಶದ ನಾಗರಿಕರ ಮೇಲೆ ಏರ್ ಸ್ಟ್ಪೈಕ್ ನಡೆಸಿದೆ. ಪಾಕಿಸ್ತಾನದ ಮೇಲೆ ಪಾಕಿಸ್ತಾನವೇ ಏರ್ ಸ್ಟ್ರೈಕ್ ನಡೆಸಿದೆ ಅಂತ ಹೇಳಿದರೇ, ಅಚ್ಚರಿಯಾಗಬಹುದು. ಆದರೇ, ಇದು ಸತ್ಯ. ವೈರಿ ರಾಷ್ಟ್ರದ ಮೇಲೆ ಯಾವುದೇ ರಾಷ್ಟ್ರವಾಗಲಿ ಏರ್ ಸ್ಟ್ರೈಕ್ ನಡೆಸಿದರೇ, ಅಚ್ಚರಿ ಇಲ್ಲ. ಆದರೇ, ಪಾಕ್ ನಲ್ಲಿ ಮಾತ್ರ ಎಲ್ಲವೂ ಉಲ್ಟಾ.
ಪಾಕಿಸ್ತಾನದ ಖೈಬರ್ ಫಕುನುತಾವ್ ಪ್ರಾಂತ್ಯದಲ್ಲಿ ಇಂದು ಮುಂಜಾನೆ ಏರ್ ಸ್ಟ್ರೈಕ್ ನಡೆಸಿ, 30 ಜನರನ್ನು ಕೊಂದಿದೆ. ಚೀನಾದ ಜೆ-17 ಫೈಟರ್ ಜೆಟ್ ಗಳ ಮೂಲಕ ಚೀನಾದ ಎಲ್‌ಎಸ್-6 ಬಾಂಬರ್ ಗಳನ್ನು ಖೈಬರ್ ಫಕುನುತಾವ್ ಪ್ರಾಂತ್ಯದ ಹಳ್ಳಿಯ ಮೇಲೆ ಹಾಕಿದೆ. ತೀರಾತ್ ವ್ಯಾಲಿಯಲ್ಲಿರುವ ಗ್ರಾಮವೊಂದರ ಮೇಲೆ ಪಾಕಿಸ್ತಾನದ ಸೇನೆಯೇ ಬಾಂಬ್ ಹಾಕಿದೆ.
ಖೈಬರ್ ಫಕುನುತಾವ್ ಪಾಂತ್ಯ ಸೇರಿದಂತೆ ಪಾಕಿಸ್ತಾನದಲ್ಲಿ ಅಂತರಿಕ ಭಯೋತ್ಪಾದನೆ ಇತ್ತೀಚಿನ ವರ್ಷಗಳಲ್ಲಿ ಮಿತಿ ಮೀರಿ ಹೋಗಿದೆ. ಕಳೆದ ವಾರ ಸ್ವಾಟ್ ವ್ಯಾಲಿಯ ಮಿನೋಗ್ರಾದಲ್ಲಿ ಜನರು ಭದ್ರತೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಈಗ ಪಾಕ್ ಸೇನೆಯಿಂದಲೇ ಪಾಕ್ ನಾಗರಿಕರ ಮೇಲೆ ಬಾಂಬ್ ದಾಳಿ ನಡೆದಿದೆ. ತನ್ನ ನಾಗರಿಕರನ್ನು ದಾಳಿಗಳಿಂದ ರಕ್ಷಿಸಬೇಕಾದ ಪಾಕಿಸ್ತಾನದ ಸೇನೆಯ ತನ್ನದೇ ನಾಗರಿಕರ ಮೇಲೆ ಬಾಂಬ್ ದಾಳಿ ಮಾಡಿದೆ.
ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷ, ತೆಹ್ರಿಕ್ ಇ ಇನ್ಸಾಫ್ ಪಕ್ಷವು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ದುಃಖ ಮತ್ತು ನೋವು ಅನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ಡ್ರೋನ್ ದಾಳಿ ಮತ್ತು ಬಾಂಬಿಂಗ್ ನಿಂದ ದ್ವೇಷದ ಬೀಜವನ್ನು ಬಿತ್ತಲಾಗಿದೆ. ಯಾವುದು ಉಳಿದಿಲ್ಲ.
ನಾಗರಿಕರನ್ನು ಸಾಯಿಸಿರುವುದು, ಪಾಕಿಸ್ತಾನದ ಇಂಟಲಿಜೆನ್ಸ್ ಮತ್ತು ಭಯೋತ್ಪಾದನಾ ನಿಗ್ರಹದ ಸಾಮರ್ಥ್ಯ, ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ.
ಇನ್ನೂ ಪಾಕಿಸ್ತಾನ ಮಿಲಿಟರಿಯು, ಇಂಟಲಿಜೆನ್ಸ್ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ಉಗ್ರರು ನಾಗರಿಕ ಪ್ರದೇಶಗಳನ್ನು ತಮ್ಮ ರಕ್ಷಾಕವಚವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಪಾಕ್ ಸೇನೆ ಹೇಳಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ತಮ್ಮ ದೇಶದ ನಾಗರಿಕರು ಹಾಗೂ ಅವರ ಆಸ್ತಿಪಾಸ್ತಿ ರಕ್ಷಿಸಲು ವಿಫಲವಾಗಿದ್ದಾರೆ ಎಂದು ಜನರು ಟೀಕೆ ಮಾಡುತ್ತಿದ್ದಾರೆ. ಅಮ್ನೆಸ್ಟಿ ಸಂಘಟನೆ ಕೂಡ ಪಾಕಿಸ್ತಾನದಲ್ಲಿ ನಾಗರಿಕರ ಜೀವಕ್ಕೆ ಯಾವುದೇ ಬೆಲೆ ಇಲ್ಲ ಎಂದು ಟೀಕಿಸಿದೆ.
ಖೈಬರ್ ಫಕುನುತಾವ್ ಪ್ರಾಂತ್ಯದಲ್ಲಿ ತೆಹ್ರಿಕ್ ಇ ತಾಲಿಬಾನ್ ಉಗ್ರಗಾಮಿ ಸಂಘಟನೆಯು ಬಾಂಬ್ ತಯಾರಿಕಾ ಘಟಕ ಹೊಂದಿತ್ತು. ಅದನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಲಾಗಿತ್ತು ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.