/newsfirstlive-kannada/media/media_files/2025/09/27/og-cinema-collection-2025-09-27-12-52-58.jpg)
OG ಸಿನಿಮಾದಿಂದ 100 ಕೋಟಿಗೂ ಹೆಚ್ಚು ಗಳಿಕೆ!
ಆಂಧ್ರಪ್ರದೇಶದ ಹಾಲಿ ಉಪಮುಖ್ಯಮಂತ್ರಿಯೂ ಆದ ನಟ ಪವನ್ ಕಲ್ಯಾಣ್ ನಟನೆಯ ದೇ ಕಾಲ್ ಹೀಮ್ ಓಜಿ ಸಿನಿಮಾ ಬಿಡುಗಡೆಯಾದ ಎರಡೇ ದಿನದಲ್ಲಿ ಭಾರತದಲ್ಲಿ ನೂರು ಕೋಟಿ ರೂಪಾಯಿಗಿಂತ ಹೆಚ್ಚಿನ ಗಳಿಕೆಯನ್ನು ಕಂಡಿದೆ. ಈ ಮೂಲಕ 2025 ರಲ್ಲಿ ದೊಡ್ಡ ಗಳಿಕೆ ಕಂಡ ಸಿನಿಮಾ ಆಗಿ ಹೊರಹೊಮ್ಮಿದೆ
ದೇ ಕಾಲ್ ಹೀಮ್ ಓಜಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ದಾಖಲೆಯನ್ನೇ ನಿರ್ಮಿಸಿದೆ.
ಗ್ಯಾಂಗಸ್ಟರ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಆದ ಓಜಿ, ರಜನಿಕಾಂತ್ ಅವರ ಕೂಲಿ ಸಿನಿಮಾದ ದಾಖಲೆಯನ್ನು ಮುರಿದಿದೆ. ತೆಲುಗು ಸಿನಿಮಾ ಇಂಡಸ್ಟ್ರೀಯಲ್ಲಿ ಏಳನೇ ಅತಿ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಆಗಿದೆ. ಭಾರತದ ಸಿನಿಮಾ ಇಂಡಸ್ಟ್ರೀಯಲ್ಲಿ ದೊಡ್ಡ ಓಪನಿಂಗ್ ಪಡೆದ 8ನೇ ಸಿನಿಮಾ ಆಗಿದೆ.
ಓಜಿ ಸಿನಿಮಾವು ಮೊದಲ ದಿನವೇ ಪ್ರೀಮೀಯರ್ ಷೋ ಸೇರಿದಂತೆ ಬರೋಬ್ಬರಿ 90 ಕೋಟಿ ರೂಪಾಯಿ ಬಾಚಿಕೊಂಡಿದೆ. ಆದರೇ, ಎರಡನೇ ಓಜಿ ಸಿನಿಮಾ 19.6 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನದ ಗಳಿಕೆಯೂ ಮೊದಲ ದಿನಕ್ಕೆ ಹೋಲಿಸಿದರೇ, ಶೇ.69 ರಷ್ಟು ಕುಸಿತವಾಗಿದೆ. ಆದರೂ ಮೊದಲ ಎರಡು ದಿನಗಳಲ್ಲೇ 104.35 ಕೋಟಿ ರೂಪಾಯಿ ಗಳಿಕೆ ಕಂಡಿರುವುದು ವಿಶೇಷ.
ಇನ್ನೂ ಓಜಿ ಸಿನಿಮಾವು ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಮೊದಲ ದಿನ ಒಟ್ಟಾರೆಯಾಗಿ 144 ಕೋಟಿ ರೂಪಾಯಿ ಗಳಿಸಿದೆ. ಮೊದಲ ದಿನದ ಗಳಿಕೆಯಲ್ಲಿ ಪ್ರಭಾಸ್ ನಟನೆಯ ಸಾಹೋ ಸಿನಿಮಾವನ್ನು ಹಿಂದಿಕ್ಕಿದೆ.
ಓಜಿ ಸಿನಿಮಾದಲ್ಲಿ ಡಿಸಿಎಂ ಪವನ್ ಕಲ್ಯಾಣ್ ಓಜಾಸ್ ಗಂಭೀರ್ ಪಾತ್ರದಲ್ಲಿ ನಟಿಸಿದ್ದರು. ಇದು ಗ್ಯಾಂಗಸ್ಟರ್ ಪಾತ್ರ. ತನ್ನ ಸಾಮ್ರಾಜ್ಯವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪವನ್ ಕಲ್ಯಾಣ್ ಹೋರಾಡುತ್ತಾರೆ. ಓಮಿ ಬಹೂ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಪಾತ್ರದಲ್ಲಿ ನಟಿಸಿದ್ದಾರೆ. ಓಮಿ ಬಹೂ ಪಾತ್ರದಲ್ಲಿ ನಟ ಇಮ್ರಾನ್ ಹಶ್ಮಿ ನಟಿಸಿದ್ದಾರೆ. ಇದು ಇಮ್ರಾನ್ ಹಶ್ಮಿಗೆ ಮೊದಲ ತೆಲುಗು ಸಿನಿಮಾ.
ಇನ್ನೂ ಸಿನಿಮಾದಲ್ಲಿ ಪ್ರಕಾಶ್ ರಾಜ್, ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್, ಶ್ರೀಯಾರೆಡ್ಡಿ, ಜಾಕಿ ಶ್ರಾಫ್ ನಟಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.