/newsfirstlive-kannada/media/media_files/2025/10/20/deviramma-temple-jatre-2025-10-20-12-17-09.jpg)
ದೇವೀರಮ್ಮ ಬೆಟ್ಟ ಹತ್ತಲು, ಇಳಿಯಲು ಅವಕಾಶ
ದೇವೀರಮ್ಮನ ಜಾತ್ರೆ ಹಿನ್ನೆಲೆ, ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಬಿಂಡಿಗದಲ್ಲಿರುವ ದೇವೀರಮ್ಮನ ಬೆಟ್ಟದಲ್ಲಿ ದೇವೀರಮ್ಮನ ಜಾತ್ರಾ ಮಹೋತ್ಸವದ ಸಂಭ್ರಮ ಮನೆಮನೆಮಾಡಿದೆ. ಈ ಹಿನ್ನಲೆ ಜಿಲ್ಲಾಡಳಿತವು ನಿನ್ನೆ ಮತ್ತು ಇಂದು ಬೆಟ್ಟ ಹತ್ತಲು ಅವಕಾಶ ನೀಡಿದೆ. ಹೀಗಾಗಿ ಸಮುದ್ರ ಮಟ್ಟದಿಂದ 3800 ಅಡಿ ಎತ್ತರದಲ್ಲಿರುವ ದೇವೀರಮ್ಮನ ದೇವಸ್ಥಾನದಕ್ಕೆ ಜನರು ಮಳೆಯ ನಡುವೆಯೂ ಭೇಟಿ ನೀಡ್ತಿದ್ದಾರೆ . ಸದ್ಯ ರಾಜ್ಯದ ಮೂಲೆ ಮೂಲೆಗಳಿಂದ ಬಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಎಚ್ಚರಿಕೆಯನ್ನ ವಹಿಸಿದೆ.
ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಮುತ್ತ ಧಾರಕಾರವಾಗಿ ಮಳೆಯಾಗ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು, ಎರಡನೇ ದಿನವಾದ ಇಂದು ಮಲ್ಲೇನಹಳ್ಳಿಯಲ್ಲಿ ಬೆಟ್ಟ ಭಕ್ತರು ಹತ್ತಲಿದ್ದಾರೆ. ಆದ್ರೆ ಮಲ್ಲೇನಹಳ್ಳಿ ಸುತ್ತಮುತ್ತಲಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಭಕ್ತರು ಕಂಗಾಲಾಗಿದ್ದಾರೆ. ಸದ್ಯ ಜಿಲ್ಲಾಡಳಿತವು ಅಕ್ಟೋಬರ್ 23ರ ವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ..
Deviramma Temple Festival Celebration at Chikkamagalur! pic.twitter.com/Xler6DHf40
— Srihari Karanth (@sriharikaranth) October 20, 2025
ಇನ್ನೂ ದೇವೀರಮ್ಮ ಬೆಟ್ಟ ಹತ್ತುವಾಗ ಓರ್ವ ಯುವತಿ ಸುಸ್ತಾಗಿ ಬಿದ್ದಿದ್ದಳು. ಆಕೆಯನ್ನು ಸ್ಥಳೀಯ ಪೊಲೀಸರು ರಕ್ಷಿಸಿ, ಬೆಟ್ಟದಿಂದ ಕೆಳಕ್ಕೆ ಸುರಕ್ಷಿತವಾಗಿ ಕರೆ ತಂದಿದ್ದಾರೆ. ಬರಿಗಾಲಲ್ಲಿ ಈ ಬೆಟ್ಟ ಹತ್ತಿ ದೇವರ ದರ್ಶನ ಪಡೆಯಬೇಕು. ದೀಪಾವಳಿ ಹಬ್ಬದ ವೇಳೆ ಮಾತ್ರ ವರ್ಷಕ್ಕೊಮ್ಮೆ ದೇವಸ್ಥಾನದ ಬಾಗಿಲು ತೆಗೆಯಲಾಗುತ್ತೆ. ಕೈಯಲ್ಲಿ ಕೋಲು ಹಿಡಿದು ಬೆಟ್ಟ ಹತ್ತಲು ಅವಕಾಶ ಇದೆ. ಆ ಕೋಲು ಅನ್ನು ಬೆಟ್ಟದ ಮೇಲೆಯೇ ಎಸೆದು ಬರಬೇಕು.
Deviramma Temple on top a hill in Chikkamagalur, opens only once a year during Deepawali.
— Srihari Karanth (@sriharikaranth) October 19, 2025
Lakhs of devotees undertake a 7.5 km uphill (and back) barefoot trek to seek the goddess’s blessings.
This year, night trekking is banned, and devotees can visit on October 19th and… pic.twitter.com/a3UZZaCc3C
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.