/newsfirstlive-kannada/media/media_files/2025/09/30/hindustan-ambassador-car-2025-09-30-18-40-05.jpg)
ಹೊಸ ವಿನ್ಯಾಸ್, ಲುಕ್ ನೊಂದಿಗೆ ರಸ್ತೆಗಿಳಿಯುವ ಅಂಬಾಸಿಡರ್ ಕಾರ್!
ಭಾರತದ ರಸ್ತೆಗಳ ರಾಜ ಎಂದು ಅಂಬಾಸಿಡರ್ ಕಾರ್ ಅನ್ನು ಕರೆಯುತ್ತೇವೆ. ಆದರೇ, ಹತ್ತು ವರ್ಷಗಳ ಹಿಂದೆ ಬೇಡಿಕೆಯ ಕುಸಿತದ ಕಾರಣದಿಂದಾಗಿ ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯು ಅಂಬಾಸಿಡರ್ ಕಾರ್ ಗಳ ಉತ್ಪಾದನೆಯನ್ನೇ 2014 ರ ಮೇ ತಿಂಗಳಿನಲ್ಲಿ ಸ್ಥಗಿತಗೊಳಿಸಿತ್ತು. ಆದರೇ, ಈಗ ಮತ್ತೆ ಅಂಬಾಸಿಡರ್ ಕಾರ್ ಭಾರತದಲ್ಲಿ ರಸ್ತೆಗೆ ಇಳಿಯಲು ಸಿದ್ದವಾಗಿದೆ. ಹಿಂದೂಸ್ತಾನ್ ಅಂಬಾಸಿಡರ್ ಹೆಸರಿನಲ್ಲಿ ಹೊಸ ರೂಪದಲ್ಲಿ, ಹೊಸ ಟೆಕ್ನಾಲಜಿಗೆ ತಕ್ಕಂತೆ ಲುಕ್ ನಲ್ಲಿ ಬದಲಾವಣೆಯೊಂದಿಗೆ ಅಂಬಾಸಿಡರ್ ಕಾರ್ ಭಾರತದ ರಸ್ತೆಗೆ ಇಳಿಯಲಿದೆ.
ಭಾರತದಲ್ಲಿ ಅಂಬಾಸಿಡರ್ ಕಾರ್ ದಂತಕಥೆಯ ಕಾರ್. ಹೊಸ ಮಾಡೆಲ್ ಕಾರ್ ನಲ್ಲಿ ಐಕಾನಿಕ್ ರೆಟ್ರೋ ಚಾರ್ಮ್ ಮತ್ತು ಆಧುನಿಕ ಪಿಚ್ಚರ್ ಗಳು ಇರಲಿವೆ. ಹೊಸ ಹಿಂದೂಸ್ತಾನ್ ಅಂಬಾಸಿಡರ್ ಕಾರ್, ಕ್ಲಾಸಿಕ್ ಕಾರ್ ಲವ್ವರ್ ಗಳು ಮತ್ತು ಹೊಸ ತಲೆಮಾರಿನ ಕಾರ್ ಲವ್ವರ್ ಗಳನ್ನು ತನ್ನ ವಿಶಿಷ್ಟತೆಯ ಕಾರಣದಿಂದಾಗಿ ತನ್ನತ್ತ ಸೆಳೆಯಲಿದೆ.
ಹಿಂದೂಸ್ತಾನ್ ಅಂಬಾಸಿಡರ್ 2025 ಐಕಾನಿಕ್ ಲುಕ್ ಅನ್ನು ಹಾಗೆ ಉಳಿಸಿಕೊಂಡಿದೆ. ಜೊತೆಗೆ ಕೆಲವೊಂದು ಮಾರ್ಡನ್ ಟ್ವಿಸ್ಟ್ ಗಳನ್ನು ನೀಡಿದೆ. ಹೊಸ ಮಾಡೆಲ್ ಕಾರಿನಲ್ಲಿ ಎಲ್‌ಇಡಿ ಹೆಡ್ ಲ್ಯಾಂಪ್ ಇರಲಿದೆ. ಮುಂಭಾಗದಲ್ಲಿ ಕ್ರೋಮ್ ಗ್ರಿಲ್, ಬಂಪರ್, ಪ್ರೀಮಿಯಮ್ ಅಲೋಯ್ ವೀಲ್ಹ್ ಗಳು ಇರಲಿವೆ. ರೆಟ್ರೋ ಲುಕ್ ಮತ್ತು ಸಮಕಾಲೀನ ಸ್ಟೈಲ್ ಅನ್ನು ಮಿಕ್ಸ್ ಮಾಡಿ ಹೊಸ ಮಾಡೆಲ್ ಅನ್ನು ವಿನ್ಯಾಸ ಮಾಡಲಾಗಿದೆ.
ಇನ್ನೂ ಕಾರಿನ ಇಂಟಿರೀಯರ್ ಅನ್ನು ನೋಡುವುದಾದರೇ, ಪ್ಲಾಶ್ ಸೀಟಿಂಗ್ ಮತ್ತು ಹೈಕ್ವಾಲಿಟಿ, ಪ್ರೀಮಿಯಂ ಫಿನಿಶ್ ನೀಡಲಾಗಿದೆ. ಕ್ಯಾಬಿನ್ ವಿಶಾಲವಾಗಿದ್ದು, ಹೆಚ್ಚಿನ ಲೆಗ್ ರೂಮು ಮತ್ತು ಹೆಡ್ ರೂಮು ಪ್ರಯಾಣಿಕರಿಗೆ ಸಿಗಲಿದೆ. ಇದರಿಂದಾಗಿ ಸೆಡಾನ್ ಕಾರ್ ಗಳಲ್ಲೇ ಇದು ಅತ್ಯಂತ ಹೆಚ್ಚು ಕಂಫರ್ಟಬಲ್ ಕಾರ್ ಆಗಲಿದೆ.
ಹಿಂದೂಸ್ತಾನ್ ಅಂಬಾಸಿಡರ್ ಕಾರ್ ಸಂಪೂರ್ಣ ಸ್ಮಾರ್ಟ್ ಫಿಚ್ಚರ್ ಗಳನ್ನು ಹೊಂದಿರಲಿದೆ. ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸಪ್ಲೇ , ವೈರ್ ಲೆಸ್ ಆ್ಯಂಡ್ರೋಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಜೊತೆಗೆ 12 ಇಂಚು ಇನ್ಪೋಟೈನ್ ಮೆಂಟ್ ಸಿಸ್ಟಮ್ , ಕನೆಕ್ಟೆಡ್ ಕಾರ್ ಟೆಕ್ ಅನ್ನು ಹೊಂದಿರಲಿದೆ.
ಆಟೊಮ್ಯಾಟಿಕ್ , ಮ್ಯಾನ್ಯುಯಲ್ ಡ್ರೈವಿಂಗ್ ಮೋಡ್ ನಲ್ಲಿ ಕಾರ್ ಲಭ್ಯವಿರಲಿದೆ. ಅಡ್ವಾನ್ಸಡ್ ವಾಯ್ಸ್ ಕಂಟ್ರೋಲ್ ಹೊಂದಿರಲಿದೆ.
ಇನ್ನೂ 1.5 ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್, 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದ್ದು, ಸಿಟಿ ಮತ್ತು ಹೈವೇಗೆ ಹೇಳಿ ಮಾಡಿಸಿದ ಕಾರ್ ಆಗಿರಲಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 18 ಕಿ.ಮೀ. ಮೈಲೇಜ್ ನೀಡುವ ನಿರೀಕ್ಷೆ ಇದೆ.
ಹಿಂದೂಸ್ತಾನ್ ಅಂಬಾಸಿಡರ್ 2025ರ ಹೈಲೈಟ್ಸ್
ಐಕಾನಿಕ್ ಅಂಬಾಸಿಡರ್ ಡಿಸೈನ್ ಉಳಿಸಿಕೊಂಡು ಮಾರ್ಡನ್ ಸ್ಟೈಲಿಂಗ್ ಅಪ್ ಡೇಟ್
ಹೆಚ್ಚು ವಿಶಾಲವಾದ ಕಾರ್ ಕ್ಯಾಬಿನ್, ಪ್ರೀಮಿಯಂ ಸೀಟ್ ವ್ಯವಸ್ಥೆ, ಕಂಫರ್ಟ್ ಫಿಚ್ಚರ್
ವೈರ್ ಲೆಸ್ ಕನೆಕ್ಟಿವಿಟಿಯೊಂದಿಗೆ ಸ್ಮಾರ್ಟ್ 12 ಇಂಚು ಇನ್ಪೋಟೈನ್ ಮೆಂಟ್ ಸಿಸ್ಟಮ್
ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆ 1.5 ಟರ್ಬೋ ಪೆಟ್ರೋಲ್ ಇಂಜಿನ್
6 ಏರ್ ಬ್ಯಾಗ್ ಜೊತೆಗೆ ಅಡ್ವಾನ್ಸಡ್ ಸೇಫ್ಟಿ , ಎಬಿಎಸ್ ಮತ್ತು ಇಎಸ್‌ಸಿ
ಇನ್ನೂ ಹಿಂದೂಸ್ತಾನ್ ಅಂಬಾಸಿಡರ್ ಕಾರ್ ರೇಟ್ 10 ರಿಂದ 15 ಲಕ್ಷ ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದೆ. ಲಾಂಚ್ ಡೇಟ್ ಇನ್ನೂ ಘೋಷಿಸಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.