/newsfirstlive-kannada/media/media_files/2025/10/20/mits-pharma-company-mk-bhatia02-2025-10-20-17-56-09.jpg)
ಈ ಭಾರಿ ಲಕ್ಷುರಿ ಸ್ಕಾರ್ಪಿಯೋ ಕಾರ್ ಗಿಫ್ಟ್ ನೀಡಿದ ಎಂ.ಕೆ.ಭಾಟಿಯಾ!
ಹಬ್ಬದ ವೇಳೆ ಸೂರತ್‌ನ ಡೈಮಂಡ್ ಬ್ಯುಸಿನೆಸ್ ಮೆನ್ ದೌಲಕಿಯಾ ತಮ್ಮ ಕಂಪನಿಯ ಸಿಬ್ಬಂದಿಗಳಿಗೆ ಕಾರ್ ಗಿಫ್ಟ್ ನೀಡುವುದನ್ನು ನೋಡಿದ್ದೇವು. ಈಗ ಚಂಡೀಘಡದ ಫಾರ್ಮಾ ಕಂಪನಿಯ ಮಾಲೀಕರೊಬ್ಬರು ತಮ್ಮ ಕಂಪನಿಯ ಉದ್ಯೋಗಿಗಳಿಗೆ 51 ಲಕ್ಷುರಿ ಕಾರ್ ಗಳನ್ನು ದೀಪಾವಳಿ ಹಬ್ಬದ ಉಡುಗೊರೆಯಾಗಿ ನೀಡಿದ್ದಾರೆ. MITS ಫಾರ್ಮಾ ಕಂಪನಿಯ ಸ್ಥಾಪಕ, ಅಧ್ಯಕ್ಷ ಎಂ.ಕೆ.ಭಾಟಿಯಾ ಸ್ಕಾರ್ಪಿಯೋ ಎಸ್‌ಯುವಿ ಕಾರ್ ಗಳ ಕೀಗಳನ್ನು ತಮ್ಮ ಕಂಪನಿಯ 51 ಉದ್ಯೋಗಿಗಳಿಗೆ ನೀಡಿದ್ದಾರೆ. MITS ಫಾರ್ಮಾ ಕಂಪನಿಯಲ್ಲಿ ಅತ್ಯುತ್ತಮ ಕೆಲಸ ಮಾಡಿದ ಆಯ್ದ 51 ಉದ್ಯೋಗಿಗಳಿಗೆ ಎಂ.ಕೆ.ಭಾಟಿಯಾ ಲಕ್ಷುರಿ ಎಸ್‌ಯುವಿ ಕಾರ್ ಗಳನ್ನು ವಿತರಿಸಿದ್ದಾರೆ. ಈ ಹಿಂದೆಯೂ ಎಂ.ಕೆ.ಭಾಟಿಯಾ ಅವರು ತಮ್ಮ ಕಂಪನಿಯ ಉದ್ಯೋಗಿಗಳಿಗೆ ಕಾರ್ ಗಳನ್ನು ಗಿಫ್ಟ್ ನೀಡಿದ್ದರಂತೆ. ಈ ವರ್ಷವೂ ಕಾರ್ ಗಿಫ್ಟ್ ನೀಡುವುದನ್ನು ಮುಂದುವರಿಸಿದ್ದಾರೆ.
51 cars (including SUVs, Scorpios) gifted to staff of a Pharma company in Chandigarh on the occasion of Diwali!
— Keh Ke Peheno (@coolfunnytshirt) October 20, 2025
Why didn't we get such employers?😭 pic.twitter.com/RgKI9fvj8K
ಕಾರ್ ಗಿಫ್ಟ್ ನೀಡುವುದನ್ನು ನೋಡಿದ ಅನೇಕ ಮಂದಿ, ನಮ್ಮ ಕಂಪನಿಗಳಲ್ಲೂ ಹೀಗೆ ಕಾರ್ ಗಳನ್ನು ಗಿಫ್ಟ್ ನೀಡಲಿ ಎಂದು ಆಶಿಸಿದ್ದಾರೆ.
ಎಂ.ಕೆ. ಭಾಟಿಯಾ ಅವರ ಈ ಉದಾರತೆ ಬೇರೆ ಯಶಸ್ವಿ ಕಂಪನಿಯಗಳ ಮಾಲೀಕರಿಗೂ ಆದರ್ಶವಾಗಿದೆ. ಕಂಪನಿಗಳ ಬೆಳವಣಿಗೆಗೆ ಕಾರಣರಾದ ಉದ್ಯೋಗಿಗಳ ಶ್ರಮವನ್ನು ಗುರುತಿಸಿ, ಗೌರವಿಸುವ, ಪೋತ್ಸಾಹಿಸುವ ಈ ಕ್ರಮ ಶ್ಲಾಘನೀಯ. ಆದರೇ, ಇದೇ ಎಂ.ಕೆ.ಭಾಟಿಯಾ 2002 ರಲ್ಲಿ ಆರ್ಥಿಕವಾಗಿ ದಿವಾಳಿಯಾಗಿದ್ದರು. ಇಂದು ಎಂಐಟಿಎಸ್ ಗ್ರೂಪ್ ಚೇರ್ ಮೆನ್ ಆಗಿರುವ ಎಂ.ಕೆ.ಭಾಟಿಯಾ ಈ ಹಿಂದೆ ಮೆಡಿಕಲ್ ಸ್ಟೋರ್ ಆರಂಭಿಸಿದ್ದರು. ಆದರೇ, ಅದು ಭಾರಿ ನಷ್ಟದಲ್ಲಿ ಮುಳುಗಿತ್ತು. ಆದರೇ, ಸೋಲು ಅನ್ನು ಯಶಸ್ಸಿನ ಮೆಟ್ಟಿಲಾಗಿ ಆಗಿ ಪರಿವರ್ತಿಸಿದ್ದು ಎಂ.ಕೆ.ಭಾಟಿಯಾ, 2015 ರ ವೇಳೆಗೆ ಎಂಐಟಿಎಸ್ ಕಂಪನಿ ಸ್ಥಾಪಿಸಿ ಯಶಸ್ಸು ಅನ್ನು ಕಂಡರು. ಈಗ ಎಂ.ಕೆ.ಭಾಟಿಯಾ 12 ಕಂಪನಿಗಳ ಮಾಲೀಕರಾಗಿದ್ದಾರೆ.
ಈಗ ತಮ್ಮ ಕಂಪನಿಯ ಉದ್ಯೋಗಿಗಳಿಗೆ ಕಾರ್ ಗಿಫ್ಟ್ ನೀಡುವ ಮೂಲಕ ಕಂಪನಿಯ ಯಶಸ್ಸಿಗೆ ಕಾರಣರಾದ ಉದ್ಯೋಗಿಗಳಿಗೆ ಕೃತಜ್ಞತೆ, ಧನ್ಯವಾದ ಸಲ್ಲಿಸಿದ್ದಾರೆ.
ಈ ಹಿಂದಿನ ವರ್ಷಗಳಲ್ಲೂ ಕಾರ್ ಗಿಫ್ಟ್ ನೀಡಿರುವ ಎಂ.ಕೆ.ಭಾಟಿಯಾ
ಎಂ.ಕೆ.ಭಾಟಿಯಾ ಅವರು ತಮ್ಮ ಕಂಪನಿಯ ಉದ್ಯೋಗಿಗಳಿಗೆ ಕಾರ್ ಗಿಫ್ಟ್ ನೀಡುತ್ತಿರುವುದನ್ನು ಇಂಟರ್ ನೆಟ್ ವಿಡಿಯೋದಲ್ಲಿ ನೋಡಿದ ಜನರು ಶಾಕ್ ಆಗಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಮೆಚ್ಚಿಕೊಂಡರೇ, ಮತ್ತೊಬ್ಬರು ನಮಗೂ ನಮ್ಮ ಕಂಪನಿ ಇದೇ ರೀತಿ ಕಾರ್ ಗಿಫ್ಟ್ ನೀಡಲಿ ಎಂದಿದ್ದಾರೆ. ಮತ್ತೊಬ್ಬರು ಈ ಕಾರ್ ಗಳ ಇಎಂಐ ಅನ್ನು ಅವರ ಸಂಬಳದಿಂದ ಕಟ್ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.