/newsfirstlive-kannada/media/media_files/2025/10/28/tejaswi-surya-and-dk-shivakumar-2025-10-28-14-14-26.jpg)
ಬೆಂಗಳೂರಿನಲ್ಲಿ ಟನಲ್ ರಸ್ತೆ ಮಾಡ್ಬೇಕು ಅನ್ನೋದು ಡಿಸಿಎಂ ಡಿಕೆಶಿ ಕನಸು.. ಟನಲ್ ಕೊರೆಯೋದ್ರಿಂದ ಪ್ರಕೃತಿಗೆ ಪೆಟ್ಟು ಬೀಳುತ್ತೆ ಅನ್ನೋದು ಸಂಸದ ತೇಜಸ್ವಿ ಸೂರ್ಯ ವಾದ. ಈ ಇಬ್ಬರ ವಾದ- ವಾಗ್ವಾದ ಇದೀಗ ಬೇರೆಯದ್ದೇ ಸ್ವರೂಪ ಪಡೆದುಕೊಂಡಿದೆ. ಸಂಸದ ಅಂತ್ಲೂ ಮರೆತು ಡಿಕೆಶಿ ಎಳೆಸು ಅಂತ ಪದ ಪ್ರಯೋಗ ಮಾಡ್ಬಿಟ್ಟಿದ್ದಾರೆ. ಅತ್ತ, ಸಾಲು ಸಾಲು ವಿಘ್ನ ಬಂದ್ರೂ ಪಟ್ಟು ಬಿಡದ ಸರ್ಕಾರ ಟನಲ್ ಕಾಮಗಾರಿಗೆ ಕೈ ಹಾಕೇ ಬಿಟ್ಟಿದೆ..
WHO IS HE? ಅವನ್ಯಾರು ಹೇಳೋಕೆ.. ಅವನಿನ್ನೂ ಎಳೆಸು ಕಣ್ರೀ.. ಅಬ್ಬಬ್ಬಾ ಡಿಸಿಎಂ ಸಾಹೇಬ್ರು ಈ ಮಾತುಗಳನ್ನ ಹಾಡ್ತಿರೋದು ಯಾರೋ ಸಾಮಾನ್ಯ ವ್ಯಕ್ತಿಗಲ್ಲ.. ಓರ್ವ ಸಂಸದರಿಗೆ.. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯಗೆ ಅನ್ನೋದೇ ಈಗ ಚರ್ಚೆಗೆ ಕಾರಣ ಆಗಿದೆ.
ಟನಲ್ ರಸ್ತೆ ವಿಚಾರ.. ತೇಜಸ್ವಿ & ಡಿಕೆಶಿ ಮಧ್ಯೆ ‘ಎಳಸು’ ಟಾಕ್​ಫೈಟ್
ಯೋಜನೆ ಬೇಡ ಅಂತ ತೇಜಸ್ವಿ, ಅವನ್ಯಾರು ಹೇಳೋಕೆ ಎಂದ DCM
ಹೌದು.. ಟನಲ್ ರಸ್ತೆ ವಿಚಾರವಾಗಿ ಡಿಸಿಎಂ ತೇಜಸ್ವಿ ಮಧ್ಯೆ ಶುರುವಾದ ಜಟಾಪಟಿ ಮತ್ತೊಂದು ಹಂತ ತಲುಪಿದೆ. ಮೊನ್ನೆಮೊನ್ನೆಯಷ್ಟೇ ಡಿಸಿಎಂ ಸಾಹೇಬ್ರನ್ನ ಮೀಟ್ ಮಾಡಿದ್ದ ತೇಜಸ್ವಿ, ಟನಲ್ ರೋಡ್​ಗೆ ಇರೋ ಪರ್ಯಾಯ ಮಾರ್ಗವನ್ನ ತಿಳಿಸಿದ್ರು.. ಇಷ್ಟಾದ್ರು ಇದೀಗ ಇಬ್ಬರ ಮಧ್ಯೆ ಟಾಕ್ ಫೈಟ್ ಜೋರಾಗಿದೆ. ಟನಲ್ ಯೋಜನೆ ನಿಲ್ಲಿಸ್ತೀವಿ ಅಂತ ಅಂದ್ರೆ, ಮತ್ತೊಂದ್ಕಡೆ, ಅಯ್ಯೋ ಅವನಿನ್ನೂ ಎಳಸು.. ಅವನ್ಯಾರು ಹೇಳೋಕೆ ಅಂತ ಡಿಕೆಶಿ ಕೌಂಟರ್ ಕೊಟ್ಟಿದ್ದಾರೆ.
‘ಅವನಿನ್ನೂ ಎಳಸು...’
ಕಾರು ಬಿಟ್ಟು ಆಟೋ ರಿಕ್ಷಾದಲ್ಲೇ ಓಡಾಡಲಿ.. ಡಿಕೆಶಿ ಕೌಂಟರ್​
ಮೊದ ಮೊದಲು ಸ್ಮೂತಾಗೇ ಇದ್ದ ಇವರಿಬ್ಬರ ಟಾಕ್ ಫೈಟ್.. ಈಗ ಬೇರೆಯದ್ದೇ ರೂಪ ಪಡ್ಕೊಂಡಿದೆ. ತೇಜಸ್ವಿಗೆ ಕೌಂಟರ್​ ಕೊಟ್ಟ ಡಿಸಿಎಂ, ಕಾರು ಬಿಟ್ಟು, ಆಟೋ ರಿಕ್ಷಾದಲ್ಲೇ ಓಡಾಡೋಕೆ ಆಗುತ್ತಾ? ಮಕ್ಕಳನ್ನ ಮೆಟ್ರೋದಲ್ಲಿ ಸ್ಕೂಲ್​ಗೆ ಕಳಿಸೋಕಾಗುತ್ತಾ? ಅಂತ ಡಿಸಿಎಂ ಚಾಟಿ ಬೀಸಿದ್ರು..
1 ಕಿ.ಮೀ ‘ಸುರಂಗ’ ನಿರ್ಮಾಣಕ್ಕೆ ಪ್ಲಾನ್!
ಜಟಾಪಟಿ ಜೋರಾಗಿದ್ರೂ ಸರ್ಕಾರ ಟನಲ್ ನಿರ್ಮಾಣಕ್ಕೆ ಪ್ಲಾನ್
1 ಕಿಲೋ ಮೀಟರ್​ ಮಾತ್ರ ಟನಲ್ ರೋಡ್ ನಿರ್ಮಿಸಲು ಪ್ಲಾನ್
ಈ ಹಿಂದೆ ಒಂದೇ ಬಾರಿಗೆ ಕಾಮಗಾರಿ ಮುಗಿಸಬೇಕೆಂದಿದ್ದ ಜಿಬಿಎ
ಹೆಬ್ಬಾಳ - ಸಿಲ್ಕ್ ಬೋರ್ಡ್​ವರೆಗೆ ಟನಲ್ ​ ನಿರ್ಮಿಸಲು ಸಿದ್ಧತೆ
ಆರಂಭಿಕವಾಗಿ 1 ಕಿಲೋ ಮೀಟರ್​ ಸುರಂಗ ನಿರ್ಮಿಸಲು ತಯಾರಿ
ಎಸ್ಟೀಮ್ ಮಾಲ್- ಪಶುವೈದ್ಯಕೀಯ ಆಸ್ಪತ್ರೆಗೆ ಟನಲ್​ಗೆ ಪ್ಲಾನ್
(ಇಷ್ಟೇಲ್ಲಾ ಮಾತಿನ ಜಟಾಪಟಿ ಜೋರಾಗಿದ್ರೂ ಸರ್ಕಾರ ಟನಲ್ ನಿರ್ಮಾಣಕ್ಕೆ ಕೈ ಹಾಕಿದೆ. ಪ್ರಾಯೋಗಿಕವಾಗಿ ಒಂದು ಕಿಲೋ ಮೀಟರ್​ ಮಾತ್ರ ಟನಲ್ ರೋಡ್ ನಿರ್ಮಿಸಲು ಪ್ಲಾನ್ ಮಾಡಲಾಗಿದೆ. ಈ ಹಿಂದೆ ಒಂದೇ ಬಾರಿಗೆ ಕಾಮಗಾರಿ ಮುಗಿಸಬೇಕೆಂದು ಜಿಬಿಎ ಅಂದುಕೊಂಡಿತ್ತು. ಒಂದೇ ಬಾರಿಗೆ ಅಂದ್ರೆ, ಹೆಬ್ಬಾಳ ಟೂ ಸಿಲ್ಕ್ ಬೋರ್ಡ್ ಜಂಕ್ಷನ್​ವರೆಗೆ 16 ಕಿಲೋ ಮೀಟರ್​ ಟನಲ್ ನಿರ್ಮಿಸಲು ಪ್ಲಾನ್ ಆಗಿತ್ತು. ಆದ್ರೆ, ಇದೀಗ ಆರಂಭಿಕವಾಗಿ ಒಂದು ಕಿಲೋ ಮೀಟರ್​ ಸುರಂಗ ಮಾತ್ರ ಮಾಡೋಕೆ ತಯಾರಿ ಮಾಡಲಾಗ್ತಿದೆ. ಹೆಬ್ಬಾಳದ ಎಸ್ಟೀಮ್ ಮಾಲ್​ನಿಂದ ಪಶುವೈದ್ಯಕೀಯ ಆಸ್ಪತ್ರೆವರೆಗೆ ಟನಲ್ ಮಾಡೋಕೆ ಪ್ಲಾನ್ ರೆಡಿಯಾಗಿದೆ.)
ಮೊದಲು ಕಾಮಗಾರಿ ಆರಂಭಿಸಿ ಮುಂದಿನ ಹಂತದಲ್ಲಿ ವಿಸ್ತರಣೆ ಮಾಡೋ ಲೆಕ್ಕಾಚಾರ ಹೂಡಿರುವ ಜಿಬಿಎ, ಟನಲ್ ಯೋಜನೆ ಸಾಧಕ ಬಾಧಕಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಮುಂದುವರೆಯೋ ಪ್ಲಾನ್​ನಲ್ಲಿದೆ ಜಿಬಿಎ..
ಏನೇ ಹೇಳಿ.. ಟನಲ್ ನಿರ್ಮಾಣಕ್ಕೆ ಅದೆಷ್ಟೇ ವಿಘ್ನಗಳು ಎದುರಾದ್ರೂ.. ಸರ್ಕಾರ ಮಾಡೇ ತೀರ್ತೀವಿ ಅಂತ ಕಾಮಗಾರಿಗೆ ಕೈ ಹಾಕಿದೆ. ಮತ್ತೊಂದ್ಕಡೆ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನಾವ್ ಅಧಿಕಾರಕ್ಕೆ ಬರೋಕೂ ಮುಂಚೆಯೇ ಯೋಜನೆ ಫುಲ್​ಸ್ಟಾಪ್ ಇಡ್ತೀವಿ ಅಂತ ಪಣತೊಟ್ಟಿದ್ದಾರೆ. ಈ ಟನಲ್ ಕಾಮಗಾರಿ ಆರಂಭದಲ್ಲೇ ಹೀಗಾಂದ್ರೆ, ಮುಂದೇಗೆ ಅನ್ನೋದನ್ನ ಆ ದೇವರೇ ಬಲ್ಲ.
/filters:format(webp)/newsfirstlive-kannada/media/media_files/2025/08/26/bangalore-tunnel-road-project-2025-08-26-17-14-04.jpg)
ಗಣಪತಿ, ನ್ಯೂಸ್​ಫಸ್ಟ್, ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us