/newsfirstlive-kannada/media/media_files/2025/10/03/insurance-murder-accused02-2025-10-03-18-03-07.jpg)
ಕೊಲೆಯಾದ ಗಂಗಾಧರ್ ಕೇಸ್ ಭೇಧಿಸಿದ ಪೊಲೀಸರು
ಇನ್ಸೂರೆನ್ಸ್ ಹಣಕ್ಕಾಗಿ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ವ್ಯಕ್ತಿಯನ್ನ ಎಕ್ಸೆಲ್ ಬೈಕ್ ಮೇಲೆ ಕೂರಿಸಿ ಕಾರಿನಿಂದ ಗುದ್ದಿ ಆರೋಪಿಗಳು ಪರಾರಿಯಾಗಿದ್ದರು. ಹೊಸಪೇಟೆ ನಗರದ ಸಂಡೂರು ರಸ್ತೆಯಲ್ಲಿ ಕೊಲೆ ನಡೆದಿತ್ತು.
ಗಂಗಾಧರ ಎನ್ನುವ ವ್ಯಕ್ತಿಯೇ ಕೊಲೆಗೀಡಾದ ಹೊಸಪೇಟೆ ನಗರದ ಕೌಲ್ ಪೇಟೆ ನಿವಾಸಿ.
ಇನ್ಸೂರೆನ್ಸ್ ಹಣಕ್ಕಾಗಿ ಕೊಲೆ ಮಾಡಿ ಅದನ್ನು ಅಪಘಾತ ಎಂದು ಬಿಂಬಿಸಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ಪತ್ತೆಹಚ್ಚಿದ್ದೇ ರೋಚಕ. ಕೊಲೆಯಾದ ಗಂಗಾಧರನ ಹೆಂಡತಿ ಶಾರದಾ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಘಟನೆ ನಡೆದ 24 ಗಂಟೆಯಲ್ಲೇ ಹೊಸಪೇಟೆ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಓರ್ವ ಮಹಿಳೆ ಸೇರಿದಂತೆ 6 ಜನರ ಬಂಧಿಸಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿ ಕೃಷ್ಣಪ್ಪ, ಕೊಪ್ಪಳ ಜಿಲ್ಲೆಯ ಹೊಸಲಿಂಗಾಪುರ ಗ್ರಾಮದ ನಿವಾಸಿ ರವಿ ಗೋಸಂಗಿ, ವಿಜಯನಗರ ಜಿಲ್ಲೆಯ ಹೊಸಪೇಟೆ ನಿವಾಸಿಗಳಾದ ಅಜೆಯ, ರಿಯಾಜ್, ಯೋಗರಾಜ್ ಸಿಂಗ್, ಹಾಗೂ ನಕಲಿ ಹೆಂಡತಿ ಹುಲಿಗೆಮ್ಮ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು, ಬೈಕ್ ವಶಪಡಿಸಿಕೊಳ್ಳಲಾಗಿದೆ.
ಹೊಸಪೇಟೆ ವಿಭಾಗದ ಡಿವೈಎಸ್ಪಿ ಮಂಜುನಾಥ, ಸಂಚಾರಿ ಠಾಣೆ ಸಿಪಿಐ ಹುಲಗಪ್ಪ, ಹೊಸಪೇಟೆ ನಗರ ಠಾಣೆ ಸಿಪಿಐ ಲಖನ್ ಮುಸಗುಪ್ಪಿ ತಂಡದ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ವಿಜಯನಗರ ಎಸ್ಪಿ ಎಸ್. ಜಾಹ್ನವಿ ಬಹುಮಾನ ಘೋಷಿಸಿದ್ದಾರೆ.
ಗಂಗಾಧರ್‌ನ ನಕಲಿ ಹೆಂಡತಿ ಹುಲಿಗೆಮ್ಮ, ಮಾಸ್ಟರ್ ಮೈಂಡ್ ಕೃಷ್ಣಪ್ಪ ಈಗ ಬಂಧನ
ಇನ್ಸೂರೆನ್ಸ್ .. ಕೊಲೆಗೆ ಪ್ಲ್ಯಾನ್ ಮಾಡಿದ್ದು ಹೇಗೆ? ಸಿಕ್ಕಿಬಿದ್ದಿದ್ದು ಹೇಗೆ?
ನಿರ್ಗತಿಕ, ಆರೋಗ್ಯ ಕ್ಷೀಣವಾದವರನ್ನ ಹುಡುಕಿ ಅವರ ಹೆಸರಿನ ಮೇಲೆ ಈ ಗ್ಯಾಂಗ್ ಕೋಟಿಗಟ್ಟಲೇ ಹಣವನ್ನು ಇನ್ಸೂರೆನ್ಸ್ ಮಾಡಿಸುತ್ತಿತ್ತು. ಬಜಾಜ್ ಇನ್ಶೂರೆನ್ಸ್ ಲೈಫ್ ಟೈಂ ಕವರೇಜ್, ಮಾಗಮಾ ಎನ್ನುವ ಅಪಘಾತ ವಿಮೆ ಸೇರಿದಂತೆ ಬೇರೆ ಬೇರೆ ಇನ್ಶುರೆನ್ಸ್ ಕಂಪನಿಗಳಿಂದ ವಿಮೆಯನ್ನು ಈ ಗ್ಯಾಂಗ್ ಮಾಡಿಸುತ್ತಿತ್ತು. ಮೃತ ಗಂಗಾಧರನ ಇನ್ಶುರೆನ್ಸ್ ಹೆಸರಲ್ಲಿ 5.5 ಕೋಟಿ ರೂಪಾಯಿ ವಿಮೆಯನ್ನು ಈ ಗ್ಯಾಂಗ್ ಮಾಡಿಸಿತ್ತು.
ಹೆಂಡತಿಯಿಂದ ದೂರವಿದ್ದ ಗಂಗಾಧರನಿಗೆ ಕೈಗೆ ಸ್ಟ್ರೋಕ್ ಹೊಡೆದಿತ್ತು. ಅದನ್ನೇ ಬಂಡವಾಳ ಮಾಡಿಕೊಂಡ ಗ್ಯಾಂಗ್ ಆತನ ಹೆಸರ ಮೇಲೆ ಇನ್ಶೂರೆನ್ಸ್ ಮಾಡಿಸಿ, ಆತನಿಗೆ ಎರಡನೇ ನಕಲಿ ಮದುವೆ ಮಾಡಿ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ರಿಜಿಸ್ಟರ್ ಸಹ ಮಾಡಿಸಿದ್ದರು. ಹಣದ ಆಮಿಷ ತೋರಿಸಿ ಹೊಟೇಲ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಹುಲಿಗೆಮ್ಮ ಎಂಬ ಮಹಿಳೆಯನ್ನ ಕರೆತಂದು ಗಂಗಾಧರನಿಗೆ ಈ ಗ್ಯಾಂಗ್ ಮದುವೆ ಮಾಡಿಸಿತ್ತು. ಎರಡನೇ ನಕಲಿ ಹೆಂಡತಿ ಹುಲಿಗೆಮ್ಮ ಹೆಸರಲ್ಲಿ ನಾಮಿನಿ ಮಾಡಿಸಿ, ಗಂಗಾಧರನ ಕೊಲೆ ಮಾಡಿ ಅಪಘಾತವೆಂಬಂತೆ ಈ ಖತರ್ನಾಕ್ ಗ್ಯಾಂಗ್ ಬಿಂಬಿಸಿತ್ತು.
ಆದರೇ, ಖತರ್ನಾಕ್ ಗ್ಯಾಂಗ್ ನ ಮಾಸ್ಟರ್ ಪ್ಲ್ಯಾನ್ ಹೊಸಪೇಟೆ ಪೊಲೀಸರು ಈಗ ಉಲ್ಟಾ ಪಲ್ಟಾ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿ ಕೃಷ್ಣಪ್ಪ, ಕೊಪ್ಪಳ ಜಿಲ್ಲೆಯ ಹೊಸಲಿಂಗಾಪುರ ಗ್ರಾಮದ ನಿವಾಸಿ ರವಿ ಗೋಸಂಗಿ, ವಿಜಯನಗರ ಜಿಲ್ಲೆಯ ಹೊಸಪೇಟೆ ನಿವಾಸಿಗಳಾದ ಅಜೆಯ, ರಿಯಾಜ್, ಯೋಗರಾಜ್ ಸಿಂಗ್, ಹಾಗೂ ನಕಲಿ ಹೆಂಡತಿ ಹುಲಿಗೆಮ್ಮರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳದ ಗಂಗಾವತಿಯ ನಿವಾಸಿ ಕೃಷ್ಣಪ್ಪ, ಸರ್ಕಾರಿ ಕಾಲೇಜು ಪದವಿ ಪೂರ್ವ ಕಾಲೇಜಿನಲ್ಲಿ ಉಪ ಪ್ರಾಚಾರ್ಯನಾಗಿ ಕೆಲಸ ನಿರ್ವಹಿಸುತ್ತಿದ್ದು, ಈತನೇ ಇನ್ಶೂರೆನ್ಸ್ ಮರ್ಡರ್ ಈ ಕೃತ್ಯದ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ..ಇದೇ ತರಹ ಪ್ರಕರಣಗಳನ್ನ ಬೇರೆ ಎಲ್ಲಿಯಾದರೂ ಮಾಡಿಲಾಗಿದೆಯಾ ಎನ್ನುವ ಕುರಿತು ಹೊಸಪೇಟೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.