/newsfirstlive-kannada/media/media_files/2025/09/08/sunroof-car-accident-2025-09-08-12-37-02.jpg)
ಬಾಲಕನ ತಲೆಗೆ ಹೊಡೆದಿದ್ದ ಎತ್ತರ ನಿರ್ಬಂಧ ಬ್ಯಾರಿಯರ್
ಕಾರಿನ ಸನ್ ರೂಫ್ ನಲ್ಲಿದ್ದ ಬಾಲಕನಿಗೆ ಕಬ್ಬಿಣದ ಕಮಾನು ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಪೊಲೀಸರು … ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಬಾಲಕನ ಪೋಷಕರ ಮೇಲೆಯೇ ಪ್ರಕರಣ ದಾಖಲು… ಮಾಡಿದ್ದಾರೆ. ಬಾಲಕನ ಪೋಷಕರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡು ಯಲಹಂಕ ಟ್ರಾಫಿಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರಿನ ನಂಬರ್ ಆಧಾರದ ಮೇಲೆ ಕಾರು ಚಲಾಯಿಸ್ತಿದ್ದವರ ಮೇಲೆ ಎಫ್ಐಆರ್ ದಾಖಲಾಗಿದೆ. ಘಟನೆ ವೇಳೆ ಕಾರು ಚಲಾಯಿಸ್ತಿದ್ದ ಬಾಲಕನ ತಾತ ಮುನ್ನಾಚಾರ್ಯ… ಮೇಲೆ ಎಫ್ಐಆರ್ ದಾಖಲಾಗಿದೆ. ಬಾಲಕನ ತಂದೆ ಕೃಷ್ಣಮೂರ್ತಿ ಅವರ ಹೆಸರಿನಲ್ಲಿ ಕಾರು ನೋಂದಾಣಿಯಾಗಿದೆ. KA 50 ME 2848 ವಾಹನದ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ಕಳೆದ ಭಾನುವಾರ ಬೆಂಗಳೂರಿನ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಕಾರ್ ಸನ್ ರೂಫ್ ತೆರೆದು ಬಾಲಕ ನಿಂತಿದ್ದ ವೇಳೆ ರಸ್ತೆಯ ಮೇಲ್ಬಾಗ ಅಳವಡಿಸಿದ್ದ ಎತ್ತರ ನಿರ್ಬಂಧದ ಬ್ಯಾರಿಯರ್‌ಗೆ ಬಾಲಕನ ತಲೆ ಹೊಡೆದಿತ್ತು. ಎತ್ತರ ನಿರ್ಬಂಧದ ಬ್ಯಾರಿಯರ್ ಹೊಡೆದಿದ್ದರಿಂದ ಬಾಲಕ ತಕ್ಷಣವೇ ಕುಸಿದು ಬಿದ್ದಿದ್ದ. ಈ ದೃಶ್ಯ ಹಿಂಭಾಗದಲ್ಲಿ ಬರುತ್ತಿದ್ದ ಮತ್ತೊಂದು ಕಾರಿನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿತ್ತು. ಥರ್ಡ್ ಐ ಟ್ವೀಟರ್ ಅಕೌಂಟ್ ನಲ್ಲಿ ವಿಡಿಯೋ ಪೋಸ್ಟ್ ಆಗಿತ್ತು.
ವೀಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಸ್ಥಳೀಯ ಪೊಲೀಸರು, ಬಾಲಕನ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು. ಬಾಲಕನ ತಂದೆ ಕೃಷ್ಣಮೂರ್ತಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದರು. ನಂತರ ಸಾರ್ವಜನಿಕರ ಜಾಗೃತಿ ಹಿನ್ನೆಲೆಯಲ್ಲಿ, ಸುಮೋಟೋ ಕೇಸ್ ದಾಖಲಿಸಿಕೊಂಡು ಯಲಹಂಕ ಟ್ರಾಫಿಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.