/newsfirstlive-kannada/media/media_files/2025/08/01/prajwal-revanna-2025-08-01-14-26-50.jpg)
ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಆಘಾತ ಎದುರಾಗಿದೆ. ಅ*ತ್ಯಾಚಾರ ಆರೋಪ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.
ಇದನ್ನೂ ಓದಿ:ಕೋರ್ಟ್ ಹಾಲ್ನಲ್ಲೇ ಪ್ರಜ್ವಲ್ ರೇವಣ್ಣ ಕಣ್ಣೀರು.. ಎಷ್ಟು ವರ್ಷ ಜೈಲು ಶಿಕ್ಷೆ..?
ಕೋರ್ಟ್ ತನ್ನ ತೀರ್ಪಿನಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ 4 ಕೇಸ್ಗಳ ಪೈಕಿ ಇಂದು ಒಂದು ಪ್ರಕರಣದ ತೀರ್ಪು ಮಾತ್ರ ಪ್ರಕಟವಾಗಿದೆ. ಮನೆ ಕೆಲಸದಾಕೆ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಈ ಪ್ರಕರಣದಲ್ಲಿ ಪ್ರಜ್ವಲ್ ದೋಷಿ ಎಂದು ಕೋರ್ಟ್ ಹೇಳಿದೆ. ಕೋರ್ಟ್ ತೀರ್ಪು ಹೊರಬೀಳ್ತಿದ್ದಂತೆ ಪ್ರಜ್ವಲ್ ರೇವಣ್ಣ ಜಡ್ಜ್ ಮುಂದೆ ಕಣ್ಣೀರಿಟ್ಟಿದ್ದಾರೆ.
ಬರೋಬ್ಬರಿ 14 ತಿಂಗಳ ಕಾಲ ಪರಪ್ಪನ ಅಗ್ರಹಾರದಲ್ಲಿದ್ದ ಪ್ರಜ್ವಲ್ ರೇವಣ್ಣ ಈಗ ಹೇಗಾಗಿದ್ದಾರೆ ನೋಡಿ. ತಮ್ಮ ಮೇಲೆ ಆರೋಪ ಬರುತ್ತಿದ್ದಂತೆ ವಿದೇಶಕ್ಕೆ ಓಡಿ ಹೋಗಿದ್ದರು ಪ್ರಜ್ವಲ್ ರೇವಣ್ಣ. ಪರಪ್ಪನ ಅಗ್ರಹಾರ ಜೈಲಿಗೆ ಹೋಗುತ್ತಿದ್ದಾಗ ಪ್ರಜ್ವಲ್ ರೇವಣ್ಣ ಕಟ್ಟುಮಸ್ತಾದ ಬಾಡಿ ಇತ್ತು. ಆದ್ರೆ 14 ತಿಂಗಳ ಬಳಿಕವೂ ಅವರು ಹಾಗೇ ಇದ್ದಾರೆ. ಮುಖದಲ್ಲಿ ಗಡ್ಡ ಬಂದಿದೆ ಬಿಟ್ಟರೆ ಪ್ರಜ್ವಲ್ ರೇವಣ್ಣ ಒಂಚೂರು ಕುಗ್ಗಿಲ್ಲ. ಹಣೆಗೆ ಕೆಂಪು ಹಾಗೂ ಹಳದಿ ತಿಲಕವನ್ನು ಇಟ್ಟುಕೊಂಡು ಕೋರ್ಟ್ ಆವರಣದಲ್ಲಿ ವಕೀಲರ ಜೊತೆಗೆ ಪ್ರಜ್ವಲ್ ರೇವಣ್ಣ ನಿಂತಿದ್ದ ಫೋಟೋ ಲಭ್ಯವಾಗಿದೆ.
/filters:format(webp)/newsfirstlive-kannada/media/media_files/2025/08/01/prajwal-revanna-crying-2025-08-01-14-05-21.jpg)
ಆ ಫೋಟೋದಲ್ಲಿ ತಿಳಿ ನೀಲಿ ಬಣ್ಣದ ಚೆಕ್ಸ್ ಟೀ ಶರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಖದ ತುಂಬಾ ಆತಂಕ ಮನೆ ಮಾಡಿತ್ತು. ಇನ್ನು, ನಾಳೆ ಶಿಕ್ಷೆಯ ಪ್ರಮಾಣದ ಬಗ್ಗೆ ವಾದ- ಪ್ರತಿವಾದವನ್ನ ಕೋರ್ಟ್ ಆಲಿಸಲಿದೆ. ಗರಿಷ್ಠ ಶಿಕ್ಷೆ ವಿಧಿಸಬೇಕು ಅಂತ ಪ್ರಾಸಿಕ್ಯೂಷನ್ ಪರ ವಕೀಲರ ವಾದ ಮಂಡಿಸುವ ಸಾಧ್ಯತೆ ಇದೆ. ಕಡಿಮೆ ಶಿಕ್ಷೆ ನೀಡಿ ಅಂತ ಪ್ರಜ್ವಲ್ ರೇವಣ್ಣ ಪರ ವಕೀಲರು ಮನವಿ ಮಾಡುವ ಸಾಧ್ಯತೆಯೂ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ