ಪ್ರಜ್ವಲ್ ರೇವಣ್ಣ ಬಗ್ಗೆ ನ್ಯಾಯಾಲಯವು ಕೊಟ್ಟ ತೀರ್ಪಿನ ಬಗ್ಗೆ ಮೈತ್ರಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ನವರು ಉತ್ತರ ಕೊಡಬೇಕು.ನಾವು ಮಾತನಾಡಿದರೆ ರಾಜಕೀಯ ಎಂದು ಹೇಳುತ್ತಾರೆ. ಯಾವಾಗಲೂ ಕಾನೂನಿಗೆ ಗೌರವ ಕೊಡಬೇಕು. ಮೈತ್ರಿ ಪಕ್ಷದ ಆರ್. ಅಶೋಕ್ ಯಾಕೆ ಮಾತನಾಡುತ್ತಿಲ್ಲ. ಬಿಎಸ್ ಯಡಿಯೂರಪ್ಪ, ವಿಜಯೇಂದ್ರ, ಸಿಟಿ ರವಿ ಅವರು ಮಾತನಾಡಬೇಕು. ಮೈತ್ರಿ ಪಕ್ಷದವರನ್ನು ಈ ಬಗ್ಗೆ ಕೇಳಿದರೆ ಅವರಿಗೆ ಉತ್ತರ ಕೊಡುವ ಶಕ್ತಿ, ಸಾಮರ್ಥ್ಯ ಎಲ್ಲವೂ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.