/newsfirstlive-kannada/media/media_files/2025/08/30/prasara-bharati-appointment03-2025-08-30-12-21-27.jpg)
ದೂರದರ್ಶನ, ಆಕಾಶವಾಣಿಯಲ್ಲಿ ಖಾಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ಕೇಂದ್ರ ಸರ್ಕಾರದ ಅಧೀನದಲ್ಲಿರೋ ಪ್ರಸಾರ ಭಾರತಿಯು ತನ್ನ ಸಿಬ್ಬಂದಿ ಸಮಸ್ಯೆ ಪರಿಹರಿಸಲು ಮುಂದಾಗಿದೆ. ಇದರ ಭಾಗವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ ಹೊಸ ಹುದ್ದೆಗಳ ಸೃಷ್ಟಿಗೆ ಪ್ರಸಾರ ಭಾರತಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಇನ್ನೂ ಪ್ರಸಾರ ಭಾರತಿ ಎಷ್ಟು ಸಾವಿರ ಹುದ್ದೆಗಳ ಭರ್ತಿಗೆ ಮುಂದಾಗಿದೆ ಅಂತಾ ನೋಡೋದಾದ್ರೆ
ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ ನಿರ್ವಹಿಸೋ ಪ್ರಸಾರ ಭಾರತಿ ಒಟ್ಟು 45,791 ಅನುಮೋದಿತ ಸಿಬ್ಬಂದಿಯನ್ನು ಹೊಂದಿದೆ. ಪ್ರಸ್ತುತ 30,000ಕ್ಕೂ ಹೆಚ್ಚು ಖಾಲಿ ಹುದ್ದೆಗಳು ಇದ್ದು, ಇವುಗಳ ಭರ್ತಿಗೆ ಪ್ರಸಾರ ಭಾರತಿ ಮುಂದಾಗಿದೆ. ದೂರದರ್ಶನದಲ್ಲಿ 13,970 ಹುದ್ದೆಗಳು ಮತ್ತು ಆಲ್ ಇಂಡಿಯಾ ರೇಡಿಯೊದಲ್ಲಿ 16,251 ಹುದ್ದೆಗಳು ಖಾಲಿ ಇವೆ.
ಮಿನಿಸ್ಟ್ರಿ ಆಫ್ ಇನ್ಫಾರ್ಮೇಷನ್ ಅಂಡ್ ಬ್ರಾಡ್ಕಾಸ್ಟಿಂಗ್ ಆಫ್ ಇಂಡಿಯಾ ಅಡಿಯಲ್ಲಿ ಬರೋ ಸ್ವಾಯತ್ತ ಶಾಸನಬದ್ಧ ಸಂಸ್ಥೆ ಪ್ರಸಾರ ಭಾರತಿ. ಈ ಪ್ರಸಾರ ಭಾರತಿ ದೀರ್ಘಕಾಲದ ಸಿಬ್ಬಂದಿ ಸಮಸ್ಯೆ ಎದುರಿಸುತ್ತಿದೆ. ಈಗ ಮಾನವ ಸಂಪನ್ಮೂಲ ಪುನರ್ ರಚನೆಗೆ ಮುಂದಾಗಿದ್ದು, ಸದ್ಯದಲ್ಲೇ ನೇಮಕಾತಿ ಆಗಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ಯಾವ್ಯಾವ ಹುದ್ದೆಗಳ ಭರ್ತಿ ಆಗಲಿದೆ ಅಂತಾ ನೋಡೋದಾದ್ರೆ
ಮೊದಲು 14,902 ಹುದ್ದೆಗಳ ಸೃಷ್ಟಿಯಾಗಲಿದೆ. ಎಂಜಿನಿಯರ್ಸ್, ಚಾಲಕರು ಮತ್ತು ಭದ್ರತಾ ಸಿಬ್ಬಂದಿ ಹುದ್ದೆಗಳ ಸೃಷ್ಟಿ ಆಗಲಿದೆ. ಅಷ್ಟೇ ಅಲ್ಲ ಎಲ್ಲಾ ಟೆಲಿವಿಷನ್ ಮತ್ತು ರೇಡಿಯೋ ಕೇಂದ್ರಗಳಲ್ಲಿ ಕಾರ್ಯಾಚರಣೆಗಳನ್ನು ನಿರ್ವಹಿಸಲು ಶಿಫಾರಸುಗಳನ್ನು ಮೀರಿ 8,000 ಹೆಚ್ಚುವರಿ ಸಿಬ್ಬಂದಿ ನೇಮಕವಾಗಲಿದೆ. ವಿಭಾಗೀಯ ಮುಖ್ಯಸ್ಥರು ಪ್ರತ್ಯೇಕವಾಗಿ 2,784 ಹೆಚ್ಚಿನ ಹುದ್ದೆಗಳನ್ನು ಕೋರಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ನೇಮಕಾತಿಯನ್ನು ಏಪ್ರಿಲ್ 2026 ಮತ್ತು ಡಿಸೆಂಬರ್ 2026ರ ನಡುವೆ ಮೂರು ಹಂತಗಳಲ್ಲಿ ಮಾಡಿಕೊಳ್ಳಲಾಗುವುದು. ನಿವೃತ್ತಿ ಮತ್ತು ಸಾಂಸ್ಥಿಕ ಅಗತ್ಯಗಳನ್ನು ನೋಡಿ ಉಳಿದ ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುತ್ತದೆ.
ವಿದ್ಯಾರ್ಹತೆ ಮತ್ತು ಇತರೆ ವಿವರಗಳು ಏನು ಅಂತಾ ನೋಡೋದಾದ್ರೆ
ಸಂವಹನ ಮತ್ತು ಪತ್ರಿಕೋದ್ಯಮ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೊಮ ಶಿಕ್ಷಣ ಪಡೆದಿರಬೇಕು. ಇಂಜಿನಿಯರಿಂಗ್ ಮತ್ತು ಟೆಕ್ನಿಕಲ್ ಕೋರ್ಸ್ ಮಾಡಿದವರಿಗೂ ಅವಕಾಶ ಇದೆ. ಗರಿಷ್ಠ 45 ವರ್ಷ ವಯಸ್ಸು ಮೀರಿರಬಾರದು. ಅಭ್ಯರ್ಥಿಗೆ ಹಿಂದಿ, ಇಂಗ್ಲಿಷ್ ಜೊತೆಗೆ ಸ್ಥಳೀಯ ಭಾಷೆ ಅರಿವಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ? ಅಂತಾ ನೋಡೋದಾದ್ರೆ
ಈ ಹುದ್ದೆಗಳಿಗೆ ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅದಕ್ಕೆ ವೆಬ್ ವಿಳಾಸ application.prasarbharati.org ಗೆ ಭೇಟಿ ನೀಡಬೇಕು. ಆಧಾರ್ ಕಾರ್ಡ್, ಎಲ್ಲಾ ಶೈಕ್ಷಣಿಕ ಅಂಕಪಟ್ಟಿ, ಪದವಿ / ಪಿಜಿ / ಪಿಜಿ ಡಿಪ್ಲೊಮ ಸಂವಹನ ಮತ್ತು ಪತ್ರಿಕೋದ್ಯಮ ಶಿಕ್ಷಣದ ಪ್ರಮಾಣಪತ್ರಗಳು ಕಡ್ಡಾಯವಾಗಿ ಸಲ್ಲಿಸಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.