/newsfirstlive-kannada/media/media_files/2025/08/16/actor-darshan-pavithra-photos-2025-08-16-18-09-36.jpg)
ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಪವಿತ್ರಾಗೌಡ
ನಟ ದರ್ಶನ್ ಅವರು ನೀಡಿರುವ ಹೇಳಿಕೆ ಗಮನಿಸಿದರೆ ಅವರ ಪ್ರಾಣಕ್ಕೆ ಅಪಾಯ ಇರಬಹುದು. ನಟ ದರ್ಶನ್ ಅವರಿಗೆ ಸೂಕ್ತ ಮನೋರೋಗ ಚಿಕಿತ್ಸೆ ಅಗತ್ಯವಿದೆ ಎಂದು ಮೈಸೂರಿನ ಮನೋರೋಗ ತಜ್ಞ ಡಾಕ್ಟರ್ ಅಭಿಜಿತ್ ಹನಗೋಡು ಹೇಳಿದ್ದಾರೆ.
ಈ ರೀತಿ ಹೇಳುವವರು ಆತ್ಮಹತ್ಯೆಗೆ ಯತ್ನಿಸಬಹುದು ಎಂದು ಮೈಸೂರಲ್ಲಿ ನ್ಯೂಸ್ ಫಸ್ಟ್ ಗೆ ಹಿರಿಯ ಮನೋರೋಗ ತಜ್ಞ ಡಾ.ಅಭಿಜಿತ್ ಹನಗೋಡು ಹೇಳಿದ್ದಾರೆ . ನಟ ದರ್ಶನ್ ಅವರ ಹೇಳಿಕೆ ಗಮನಿಸಿದಾಗ ಜೈಲಿನಲ್ಲಿ ಅವರಿಗೆ ಕಿರುಕುಳ ಆಗುತ್ತಿರಬಹುದು. ಜೈಲಿನ ಮನೋರೋಗ ತಜ್ಞರಿಂದ ಚಿಕಿತ್ಸೆಯ ಅಗತ್ಯವಿದೆ. ಜೈಲಿನ ವಾತಾವರಣ ಅವರಿಗೆ ಈ ರೀತಿ ಹೇಳಿಕೆ ಹೇಳಿಸಲು ಕಾರಣವಾಗಿರಬಹುದು. ಮೊದಲು ಹಾಗು ಎರಡನೇ ಬಾರಿಗೂ, ಈಗಿನ ಸ್ಥಿತಿಗೂ ಅವರಿಗೆ ಭಿನ್ನತೆ ಇದೆ. ದರ್ಶನ್ ವಿಷಕೊಡಿ ಎಂದಿರುವುದರಿಂದ ಬೇಲ್ ಸಿಗುತ್ತೆ, ರಿಲ್ಯಾಕ್ಸ್ ಸಿಗುತ್ತೆ ಅಂತಲ್ಲ. ಅವರಿಗೆ ಜೈಲಿನೊಳಗೆ ಒಂದಷ್ಟು ಪ್ರತ್ಯೇಕ ಚಿಕಿತ್ಸೆಗೆ ಅವಕಾಶ ಸಿಗಬಹುದು ಎಂದು ಮನೋರೋಗ ತಜ್ಞ ಡಾಕ್ಟರ್ ಅಭಿಜಿತ್ ಹನಗೋಡು, ನ್ಯೂಸ್ ಫಸ್ಟ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.