/newsfirstlive-kannada/media/media_files/2025/08/01/rahul-gandhi-padayatra-2025-08-01-07-41-00.jpg)
ರಾಜ್ಯ ರಾಜಕೀಯ ಬೃಹತ್ ಹೋರಾಟವೊಂದಕ್ಕೆ ಅಣಿ ಆಗ್ತಿದೆ. ವೋಟರ್ಲಿಸ್ಟ್ ಕಳ್ಳತನ ಆರೋಪ ಸಂಬಂಧ ಕಾಂಗ್ರೆಸ್ ಕದನಕ್ಕೆ ನಿಲ್ತಿದೆ. ಆಗಸ್ಟ್ 5 ರಂದು ಬೆಂಗಳೂರಿಗೆ ರಾಹುಲ್ ಆಗಮಿಸ್ತಿದ್ದು, ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆಯ ಕಹಳೆ ಮೊಳಗಿಸ್ತಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ. ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಕೆಲ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ದಾಖಲೆ ಇದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹದೇವಪುರದಿಂದ ಚುನಾವಣಾ ಆಯೋಗದ ಕಚೇರಿವರೆಗೂ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆಯಲ್ಲಿ ಕೈ ನಾಯಕ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಡಿಕೆಶಿ ಹೊರಗಿಟ್ಟು CM ಸಭೆ; ಸಿದ್ದು ಎದುರಲ್ಲೇ ರಾಜಣ್ಣ- ಗುಬ್ಬಿ ಶಾಸಕ ಶ್ರೀನಿವಾಸ್ ಜಟಾಪಟಿ..!
ಮತಕಳ್ಳತನ ವಿರುದ್ಧ ಹೋರಾಟ!
ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಭಟನೆ ರೂಪರೇಷೆ ಕುರಿತು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಎಐಸಿಸಿ ಕಾರ್ಯದರ್ಶಿಗಳು ಭಾಗಿ ಆಗಿದ್ರು. ಬಹಿರಂಗ ಸಭೆ ಬಳಿಕ ಚುನಾವಣಾ ಆಯೋಗದ ಕಚೇರಿವರೆಗೆ ಕಾಲ್ನಡಿಗೆ ಹೊರಡಲು ತೀರ್ಮಾನಿಸಲಾಗಿದೆ. ಬಳಿಕ ಚುನಾವಣಾ ಆಯೋಗ ಅಧ್ಯಕ್ಷರಿಗೆ ರಾಹುಲ್ ಗಾಂಧಿ ದೂರು ನೀಡಲಿದ್ದಾರೆ. ಎಐಸಿಸಿ ಅಧ್ಯಕ್ಷ ಖರ್ಗೆ, ಸಿಎಂ, ಡಿಸಿಎಂ ಮತ್ತು ಎಐಸಿಸಿ ಪದಾಧಿಕಾರಿಗಳು ಸಾಥ್ ನೀಡಲಿದ್ದಾರೆ.
ಮತಗಳವಿನ ಬಗ್ಗೆ ಆಘಾತಕಾರಿ ವರದಿಗಳು ಆಗಸ್ಟ್ 5ರಂದು ಬಹಿರಂಗಗೊಳ್ಳಲಿವೆ ಅಂತ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ. ಮತದಾರರ ಹಕ್ಕನ್ನ ಕದೀಯೋದು ಬಹಳ ಗಂಭೀರ ವಿಷಯ. ಇದು ಪ್ರಜಾಪ್ರಭುತ್ವ ಕಗ್ಗೊಲೆ.. ಈಗ ಕಾಂಗ್ರೆಸ್ ಹೋರಾಟಕ್ಕೆ ಅಣಿ ಆಗ್ತಿದೆ.. ಆಗಸ್ಟ್ ಐದರಂದು ರಾಹುಲ್ ಗಾಂಧಿ ಏನೆಲ್ಲಾ ದಾಖಲೆಗಳನ್ನ ರಿಲೀಸ್ ಮಾಡ್ತಾರೆ ಅನ್ನೋದು ಕಾದು ನೋಡಬೇಕು.
ಇದನ್ನೂ ಓದಿ: ಕೈಮುಗಿದು ನ್ಯಾಯಾಧೀಶರ ಮುಂದೆ ನಿಂತಿದ್ದ ಪ್ರಜ್ವಲ್ ರೇವಣ್ಣ.. ಆಗಸ್ಟ್ 1ಕ್ಕೆ ತೀರ್ಪು ಪ್ರಕಟ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ