Advertisment

ರೈಲ್ವೇಯಿಂದ ಸೆಕ್ಷನ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಆಹ್ವಾನ: ಮಾಸಿಕ 35 ಸಾವಿರ ಸಂಬಳ

ರೈಲ್ವೇ ಇಲಾಖೆಯು ವಿವಿಧ ವಲಯಗಳಲ್ಲಿ ಖಾಲಿ ಇರುವ ಸೆಕ್ಷನ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಮಾಸಿಕ 35,400 ರೂಪಾಯಿ ಸಂಬಳ ನೀಡುತ್ತೆ. ರೈಲ್ವೇ ಇಲಾಖೆಯಲ್ಲಿ 368 ಸೆಕ್ಷನ್ ಕಂಟ್ರೋಲರ್ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗೆ ಈಗ ಅರ್ಜಿ ಆಹ್ವಾನಿಸಲಾಗಿದೆ. ನಿರುದ್ಯೋಗಿಗಳಿಗೆ ಇದು ಒಳ್ಳೆ ಅವಕಾಶ.

author-image
Chandramohan
RAILWAY SECTION CONTROLLER

ರೈಲ್ವೇಯಿಂದ ಸೆಕ್ಷನ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಆಹ್ವಾನ

Advertisment
  • ರೈಲ್ವೇಯಿಂದ 368 ಸೆಕ್ಷನ್ ಕಂಟ್ರೋಲರ್ ಹುದ್ದೆಗೆ ಅರ್ಜಿ ಆಹ್ವಾನ
  • ಆಕ್ಟೋಬರ್ 16, 2025 ಅರ್ಜಿ ಸಲ್ಲಿಕೆಗೆ ಕೊನೆಯ ದಿನ
  • ಮಾಸಿಕ 35,400 ರೂಪಾಯಿ ವೇತನ ನೀಡು ರೈಲ್ವೇ ಇಲಾಖೆ

ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರೋ ಅಭ್ಯರ್ಥಿಗಳಿಗೆ ಗುಡ್​ನ್ಯೂಸ್​ ಒಂದಿದೆ. ಹೆಚ್ಚು ಓದಿ ಯಾವುದೇ ಕೆಲಸ ಇಲ್ಲದೇ ಮನೆಯಲ್ಲಿ ಕುಳಿತಿರೋ ಯಾರೇ ಆಗಲಿ ಕೇಂದ್ರ ಸರ್ಕಾರದ ಈ ಉದ್ಯೋಗಗಳನ್ನ ಪಡೆಯಬಹುದು. 33 ವರ್ಷದ ಒಳಗಿನ ಉದ್ಯೋಗಾಕಾಂಕ್ಷಿಗಳಿಗೆ ಇದು ಒಂದು ಒಳ್ಳೆಯ ಅವಕಾಶ ಎಂದೇ ಹೇಳಬಹುದು.
ಹೌದು, ರೈಲ್ವೆ ರೆಕ್ರೂಟ್​ಮೆಂಟ್​ ಬೋರ್ಡ್​​ ಅಂದ್ರೆ RRB. RRBಯಿಂದ ಈ ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಪ್ಲೇ ಮಾಡಬಹುದು. 300ಕ್ಕೂ ಅಧಿಕ ಉದ್ಯೋಗಗಳು ಇದ್ದು, ಆಯ್ಕೆ ಆದವರನ್ನು ದೇಶದ ವಿವಿಧ ರೈಲ್ವೆ ಜೋನಾಲ್​ಗಳಿಗೆ ನೇಮಕ ಮಾಡಲಾಗುತ್ತದೆ. 

Advertisment

indian railway



ಇನ್ನು ಹುದ್ದೆಗಳ ಹೆಸರೇನು? ಎಷ್ಟು ಹುದ್ದೆಗಳಿವೆ? ಎಲ್ಲೆಲ್ಲಿ ಖಾಲಿ ಇವೆ ಅಂತಾ ನೋಡೋದಾದ್ರೆ

ಉದ್ಯೋಗದ ಹೆಸರು ವಿಭಾಗ ನಿಯಂತ್ರಕ ಅಂದ್ರೆ Section Controller. ಒಟ್ಟು 368 ಹುದ್ದೆಗಳು ಇವೆ. ಭಾರತದ ವಿವಿಧ ರಾಜ್ಯಗಳಲ್ಲಿ ಖಾಲಿ ಇವೆ. ಮಾಸಿಕ ವೇನತ 35,400 ರೂಪಾಯಿಗಳು ಇದ್ದು, ಶೈಕ್ಷಣಿಕ ಅರ್ಹತೆ ಡಿಗ್ರಿ ಮಾಡಿರಬೇಕು. ವಯಸ್ಸಿನ ಮಿತಿ 20 ವರ್ಷದಿಂದ 33 ವರ್ಷ ಇರಬೇಕು. 
ಅರ್ಜಿ ಶುಲ್ಕ ಎಷ್ಟು ಇದೆ? ಅಂತಾ ನೋಡೋದಾದ್ರೆ..!
ಎಸ್​ಸಿ, ಎಸ್​ಟಿ, ವಿಶೇಷ ಚೇತನ, ಮಹಿಳಾ, ಒಬಿಸಿ, ಮಾಜಿ ಸೈನಿಕ, ತೃತೀಯ ಲಿಂಗಿ ಸಮುದಾಯದವರಿಗೆ 250 ರೂಪಾಯಿ ಇದೆ. ಉಳಿದ ಎಲ್ಲ ಅಭ್ಯರ್ಥಿಗಳು 500 ರೂಪಾಯಿ ಅಪ್ಲಿಕೇಷನ್​​ ಫೀಸ್​ ಕಟ್ಟಬೇಕು. ಆನ್​ಲೈನ್​ ಮೂಲಕ ಹಣ ಪಾವತಿ ಮಾಡಬೇಕು. 
ಆಯ್ಕೆ ಪ್ರಕ್ರಿಯೆ ಹೇಗೆ? ಅಂತಾ ನೋಡೋದಾದ್ರೆ..!
ಕಂಪ್ಯೂಟರ್ ಆಧಾರಿತ ಪರೀಕ್ಷೆ ಇರಲಿದೆ. ದಾಖಲೆ ಪರಿಶೀಲನೆ ಇರಲಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಸಂದರ್ಶನ ಇರುತ್ತದೆ. ಸಂದರ್ಶನದಲ್ಲಿ ಪಾಸ್​ ಆದವರಿಗೆ ಕೆಲಸ ಸಿಗಲಿದೆ. 
ಅರ್ಜಿ ಸಲ್ಲಿಕೆ ಈಗಾಗಲೇ ಶುರುವಾಗಿದೆ. ಇನ್ನೂ ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 16 ಅಕ್ಟೋಬರ್ 2025 ಆಗಿದೆ. ಹಣ ಪಾವತಿ ಮಾಡಲು ಕೊನೆಯ ದಿನಾಂಕ 16 ಅಕ್ಟೋಬರ್ 2025 ಆಗಿದೆ. ಆಸಕ್ತರು ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬಹುದು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

railway, railway jobs, jobs, Central government jobs
Advertisment
Advertisment
Advertisment