/newsfirstlive-kannada/media/media_files/2025/09/29/jarakiholi-versus-katti-family-2025-09-29-16-24-41.jpg)
ಚುನಾವಣೆಯಲ್ಲಿ ಗೆದ್ದು ಮೀಸೆ ತಿರುವಿದ ರಮೇಶ್ ಕತ್ತಿ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಹುಕ್ಕೇರಿ ಗ್ರಾಮೀಣಾ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಬೇರೆ ಬೇರೆ ಕಾರಣಗಳಿಂದ ಭಾರಿ ಕುತೂಹಲ ಕೆರಳಿಸಿತ್ತು. ಒಂದೆಡೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಇಡೀ ಕುಟುಂಬ ಮತ್ತೊಂದೆಡೆ ರಮೇಶ್ ಕತ್ತಿ, ನಿಖಿಲ್ ಕತ್ತಿ ನಿಂತು ಪರಸ್ಪರರ ವಿರುದ್ಧ ಹೋರಾಟ ನಡೆಸಿದ್ದರು. ಕತ್ತಿ ಕುಟುಂಬ ಹಾಗೂ ಜಾರಕಿಹೊಳಿ ಕುಟುಂಬಗ ನಡುವೆ ಪ್ರತಿಷ್ಠೆಯ ಕಣವಾಗಿ ಹುಕ್ಕೇರಿ ಗ್ರಾಮೀಣಾ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಪರಿವರ್ತನೆಯಾಗಿತ್ತು. ಜಾರಕಿಹೊಳಿ ಕುಟುಂಬದಿಂದ ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಚುನಾವಣಾ ಅಖಾಡದಲ್ಲಿ ಕತ್ತಿ ಕುಟುಂಬದ ವಿರುದ್ಧ ಹೋರಾಟ ನಡೆಸಿದ್ದರು. ಜಾರಕಿಹೊಳಿ ಫ್ಯಾಮಿಲಿ ಒಟ್ಟಾಗಿ ಬಿಜೆಪಿ ಪಕ್ಷದ ನಾಯಕ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆರನ್ನು ಬೆಂಬಲಿಸಿತ್ತು.
ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯ ಫಲಿತಾಂಶ ಇಂದು ಮುಂಜಾನೆ ಪ್ರಕಟವಾಗಿದೆ. 41 ಸಾವಿರ ಮತಗಳು ಚಲಾವಣೆಯಾಗಿದ್ದವು. ಹುಕ್ಕೇರಿ ಗ್ರಾಮೀಣಾ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ರಮೇಶ್ ಕತ್ತಿ, ಅಣ್ಣನ ಮಗ ನಿಖಿಲ್ ಕತ್ತಿ ಬಣ ಭರ್ಜರಿ ಜಯ ಗಳಿಸಿದೆ. ರಮೇಶ್ ಕತ್ತಿ ಬಣದ ಎಲ್ಲ 15 ಮಂದಿ ಆಯ್ಕೆಯಾಗಿದ್ದಾರೆ. ರಮೇಶ್ ಕತ್ತಿ ಬಣದ 15 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಇದರಿಂದಾಗಿ ಮಾಜಿ ಸಂಸದ ರಮೇಶ್ ಕತ್ತಿ ಮತ್ತೊಮ್ಮೆ ಮೀಸೆ ತಿರುವಿದ್ದಾರೆ.
ಇಬ್ಬರೂ MLA, ಒಬ್ಬರೂ ಮಾಜಿ MP ಮತ್ತೊಬ್ಬರು ಪ್ರಭಾವಿ ಸಚಿವರು ನಾಲ್ಕು ಜನ ಸೇರಿ ಒಬ್ಬರನ್ನು ಸೋಲಿಸಲ್ಲಾಗಿಲ್ಲ,
— Vikrama_ಗೌಡ (@NK__Kannadiga) September 29, 2025
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಎಲ್ಲ 15 ಸ್ಥಾನಗಳನ್ನು one side ಆಗಿ ರಮೇಶ್ ಕತ್ತಿ ಯವರ ಪೆನೆಲ್ ಅಭ್ಯರ್ಥಿಗಳು ಗೆದ್ದಿದ್ದಾರೆ.🔥🔥 pic.twitter.com/lmeeczf8VE
ಹಾಲಿ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಇಡೀ ಕುಟುಂಬಕ್ಕೆ ಹುಕ್ಕೇರಿ ಕ್ಷೇತ್ರದಲ್ಲಿ ಶಾಕ್ ನೀಡುವಲ್ಲಿ ರಮೇಶ್ ಕತ್ತಿ ಯಶಸ್ವಿಯಾಗಿದ್ದಾರೆ.
ರಮೇಶ್ ಕತ್ತಿ ಅಂಡ್ ಟೀಮ್ ಅನ್ನು ಸೋಲಿಸಲು ಸತೀಶ್ ಜಾರಕಿಹೊಳಿ ಮಾಡಿದ ರಣತಂತ್ರಗಳು ವರ್ಕ್ ಔಟ್ ಆಗಿಲ್ಲ. ಹುಕ್ಕೇರಿ ಕ್ಷೇತ್ರದ ಮೇಲೂ ಹಿಡಿತ ಸಾಧಿಸಲು ಸತೀಶ್ ಜಾರಕಿಹೊಳಿ ಯತ್ನಿಸಿದ್ದರು. ಆದರೇ, ಹುಕ್ಕೇರಿ ಕ್ಷೇತ್ರದಲ್ಲಿ ಕತ್ತಿ ಕುಟುಂಬದ್ದೇ ಪಾರಮ್ಯ ಎಂದು ರಮೇಶ್ ಕತ್ತಿ, ನಿಖಿಲ್ ಕತ್ತಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಕಳೆದೊಂದು ತಿಂಗಳಿನಿಂದ ಹುಕ್ಕೇರಿ ಕ್ಷೇತ್ರದಲ್ಲೇ ಬೀಡುಬಿಟ್ಟು ತಮ್ಮ ಬೆಂಬಲಿಗ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಅಭ್ಯರ್ಥಿಗಳಿಗೆ ಬಲ ತುಂಬುವ ಕೆಲಸ ಮಾಡಿದ್ದರು. ಸತೀಶ್ ಸೋದರ ಬಾಲಚಂದ್ರ , ಲಖನ್ ಕೂಡ ಬಿರುಸಿನ ಪ್ರಚಾರ ನಡೆಸಿದ್ದರು. ಆದರೇ, ಅಂತಿಮವಾಗಿ ವಿಜಯಲಕ್ಷ್ಮಿ ರಮೇಶ್ ಕತ್ತಿಗೆ ಒಲಿದಿದೆ.
ಇದರಿಂದಾಗಿ ಹುಕ್ಕೇರಿ ಕ್ಷೇತ್ರದಲ್ಲಿ ರಾಜಕೀಯ ಹಿಡಿತ ಸಾಧಿಸುವ ಜಾರಕಿಹೊಳಿ ಕುಟುಂಬದ ಮಹತ್ವಾಕಾಂಕ್ಷೆಗೆ ಪೆಟ್ಟು ಬಿದ್ದಿದೆ. ಸತೀಶ್ ಜಾರಕಿಹೊಳಿ ಅವರಿಗೂ ಶಾಕ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.