Advertisment

ಜೈಲಿನಲ್ಲಿ ರೇಪಿಸ್ಟ್ ಉಮೇಶ್ ರೆಡ್ಡಿ, ಟೆರರಿಸ್ಟ್ ಗಳಿಗೆ ವಿಐಪಿ ಟ್ರೀಟ್‌ ಮೆಂಟ್: ನಟ ದರ್ಶನ್‌ಗೆ ಯಾವ ಸೌಲಭ್ಯವೂ ಇಲ್ಲ ಎಂದ ವಕೀಲರು!

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇಪಿಸ್ಟ್ ಉಮೇಶ್ ರೆಡ್ಡಿ, ಟೆರರಿಸ್ಟ್ ಗಳಿಗೆ ವಿಐಪಿ ಟ್ರೀಟ್ ಮೆಂಟ್ ನೀಡಲಾಗುತ್ತಿದೆ. ಆದರೇ ನಟ ದರ್ಶನ್‌ಗೆ ಕನಿಷ್ಠ ಮೂಲಸೌಕರ್ಯವನ್ನು ನೀಡುತ್ತಿಲ್ಲ ಎಂದು ನಟ ದರ್ಶನ್ ಪರ ವಕೀಲ ಸುನೀಲ್ ಆರೋಪಿಸಿದ್ದಾರೆ. ಬೇಕಿದ್ರೆ, ಇದಕ್ಕೆ ಸಂಬಂಧಿಸಿದ ದಾಖಲೆ ನೀಡುತ್ತೇನೆ ಎಂದಿದ್ದಾರೆ.

author-image
Chandramohan
Updated On
Darshan and dayanada

ನಟ ದರ್ಶನ್ ಹಾಗೂ ಜೈಲು ಎಡಿಜಿಪಿ ಬಿ.ದಯಾನಂದ್‌

Advertisment

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ನಟ ದರ್ಶನ್‌ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕನಿಷ್ಠ ಮೂಲಸೌಕರ್ಯಗಳನ್ನು ಕೊಟ್ಟಿಲ್ಲ ಎಂದು ಬೆಂಗಳೂರಿನ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿಯ ವಿಚಾರಣೆ  ಸೆಷನ್ಸ್ ಕೋರ್ಟ್ ನಲ್ಲಿ   ಇಂದು ನಡೆಯಿತು. 

Advertisment

ಕೋರ್ಟ್ ವಿಚಾರಣೆಗೆ  ಜೈಲಿನ ಚೀಫ್  ಸೂಪರಿಂಟೆಂಡೆಂಟ್‌ ಸುರೇಶ್ ಕೂಡ ಹಾಜರಾಗಿದ್ದರು. ಕಳೆದ ವಿಚಾರಣೆ ವೇಳೆ ಜೈಲು ಸೂಪರಿಂಟೆಂಡೆಂಟ್ ಖುದ್ದು ಹಾಜರಾಗಲು ಕೋರ್ಟ್ ಆದೇಶ ನೀಡಿತ್ತು.
ಜೈಲಿನ   ಅಧಿಕಾರಿಗಳ ಪರವಾಗಿ  ಎಸ್ ಪಿಪಿ ಪ್ರಸನ್ನಕುಮಾರ್ ರಿಂದ ವಾದ ಮಂಡನೆ  ಮಾಡಿದ್ದರು. 
ಬೆಂಗಳೂರು ಜೈಲಿನಲ್ಲಿ ರೇಪಿಸ್ಟ್ ಉಮೇಶ್ ರೆಡ್ಡಿ, ಟೆರರಿಸ್ಟ್ ಗಳಿಗೆ ವಿಐಪಿ ಟ್ರೀಟ್ ಮೆಂಟ್ ನೀಡಲಾಗುತ್ತಿದೆ. ಕಲರ್ ಟಿವಿ ನೀಡಿದ್ದಾರೆ. ಬೇರೆ ಖೈದಿಗಳಿಗೆ ಐಷಾರಾಮಿ ಸೌಲಭ್ಯ ನೀಡಿದ್ದಾರೆ.  ಆದರೇ, ನಟ ದರ್ಶನ್ ಗೆ ಮಾತ್ರ  ಯಾವುದೇ ಸೌಲಭ್ಯ ನೀಡಿಲ್ಲ ಎಂದು ನಟ ದರ್ಶನ್ ಪರ ವಕೀಲ ಸುನೀಲ್ ಆರೋಪಿಸಿದ್ದಾರೆ. 
ಇನ್ನೂ ನಟ ದರ್ಶನ್ ಪರ ವಕೀಲ ಸುನೀಲ್ ವಾದ ಮಂಡನೆ ಮಾಡಿದ್ದರು.  ಇದೇ ಆಗೋಯ್ತು, ಕೋರ್ಟ್ ಆದೇಶ ಮಾಡಿದ್ದರೂ, ಸೌಲಭ್ಯಗಳನ್ನು ಕೊಟ್ಟಿಲ್ಲ.  ಎಷ್ಟು ಜನ ವಿಐಪಿ ಗಳು ಜೈಲಿಗೆ ಹೋಗಿ ಬಂದರು.  ಆದ್ರೆ ದರ್ಶನ್ ಗೆ ಮಾತ್ರ ಯಾಕೆ ಹೀಗೆ  ಮಾಡ್ತಿದ್ದಾರೆ.  ಕಾಲಾಪಾನಿ ಜೈಲಿನಲ್ಲೂ ಹೀಗೆ  ಮಾಡಲ್ಲ.  14 ದಿನ ಮಾತ್ರ ಕ್ವಾರಂಟೆನ್ ಸೆಲ್ ನಲ್ಲಿ ಇಡಬೇಕು .  ಆದ್ರೆ ಯಾಕೆ ಈ ರೀತಿ ಮಾಡ್ತಿದ್ದಾರೆ ಅಂತ ಗೊತ್ತಿಲ್ಲ ಎಂದು ಸುನೀಲ್ ವಾದಿಸಿದ್ದರು. 

ಜೈಲಿಗೆ ಎಷ್ಟು ವಿಐಪಿಗಳು ಹೋಗಿ ಬಂದರು. ಅವರಿಗೆ ಇದೇ ರೀತಿ ಸೆಕ್ಯುರಿಟಿ ಕೊಡ್ತಾರಾ? ದರ್ಶನ್ ಗೆ ಮಾತ್ರ ಯಾಕೆ ಇಷ್ಟೊಂದು ಸೆಕ್ಯುರಿಟಿ?  ನೋಡೋಣ ಸ್ವಾಮಿ ಎಷ್ಟು ದಿನ ಅದೇ ಸೆಲ್ ನಲ್ಲಿ ಇಡ್ತಾರೋ. 
ಭಾರತದಲ್ಲಿ ಅದೆಷ್ಟು ಆರೋಪಿಗಳಿಗೆ ಇಷ್ಟು ಸೆಕ್ಯುರಿಟಿ ಕೊಡ್ತಾರೆ ಹೇಳಿ. ಕ್ವಾರಂಟೈನ್ ಸೆಲ್ ನಲ್ಲಿ 14 ದಿನ ಇಡ್ತಾರೆ ಅಷ್ಟೇ. ಆದ್ರೆ ಇವರು ಇನ್ನು ಅದೆಷ್ಟು ದಿನ‌ ಇಡಬೇಕು ಅಂದುಕೊಂಡಿದ್ದಾರೋ ಗೊತ್ತಿಲ್ಲ.  45 ದಿನದಿಂದ ಕ್ವಾರಂಟೈನ್ ಅಲ್ಲಿ ಇದ್ದಾರೆ .  ರೇಪಿಸ್ಟ್ ಉಮೇಶ್ ರೆಡ್ಡಿಗೆ, ಟೆರರಿಸ್ಟ್ ಗಳಿಗೆ  ವಿಐಪಿ ಟ್ರೀಟ್ ಮೆಂಟ್‌ ಕೊಡ್ತಾ ಇದ್ದಾರೆ.  ಕಲರ್ ಟಿವಿ ನೀಡಿದ್ದಾರೆ.  ದರ್ಶನ್ ಗೆ ಏನು ಕೊಡ್ತಾ ಇಲ್ಲ, ಯಾವ ಸೌಲಭ್ಯವೂ ಇಲ್ಲ.  ಬೇರೆಯ ಖೈದಿಗಳಿಗೆ  ಐಷಾರಾಮಿ ಸೌಲಭ್ಯ ನೀಡಿದ್ದಾರೆ.  ಅದರ ದಾಖಲೆಗಳು ಕೊಡ್ತೀನಿ ಬೇಕಿದ್ರೆ ಎಂದು ವಕೀಲ ಸುನೀಲ್ ವಾದಿಸಿದ್ದರು. 
ಇದಕ್ಕೆ ನಮಗೆ ಈಗ ಟೈಂ ಇಲ್ಲ, ಬೇರೆ ಕೆಲಸ‌ ಇದೆ.  ನಿಮಗೆ ಏನ್ ಬೇಕೋ‌ ಅದನ್ನ ಮಾತ್ರ ಕೇಳಿ ಎಂದು ಜಡ್ಜ್ ಹೇಳಿದ್ದರು.
ಎಸ್‌ಪಿಪಿ ಪ್ರಸನ್ನ ಕುಮಾರ್ ಅವರೇ,  ಜೈಲರ್ ನ ಮಿಸ್ ಲೀಡ್ ಮಾಡ್ತಾ ಇದ್ದಾರೆ.  ಇಲ್ಲದ ಕಾನೂನು ಇವರು ಸೃಷ್ಟಿ ಮಾಡುತ್ತಾ ಇದ್ದಾರೆ ಎಂದು ವಕೀಲ ಸುನೀಲ್ ವಾದಿಸಿದ್ದರು. 
ಇದಕ್ಕೆ ಮತ್ತೊಮ್ಮೆ ಎಸ್ಪಿಪಿ ಆಕ್ಷೇಪ ವ್ಯಕ್ತಪಡಿಸಿದ್ದರು. 

jail manual




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Darshan in jail
Advertisment
Advertisment
Advertisment