ಆರ್‌ಸಿಬಿಯಿಂದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರಿಗೆ 25 ಲಕ್ಷರೂಪಾಯಿ ಪರಿಹಾರ ಘೋಷಣೆ

ಆರ್‌ಸಿಬಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಪ್ರಾರಂಭದಲ್ಲಿ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಈಗ ಪರಿಹಾರ ಮೊತ್ತವನ್ನು 25 ಲಕ್ಷ ರೂಪಾಯಿಗೆ ಏರಿಸಿದೆ.

author-image
Chandramohan
rcb cares

RCB CARES ಮೂಲಕ ಪರಿಹಾರ ನೀಡಿಕೆ ಘೋಷಣೆ

Advertisment
  • ಕಾಲ್ತುಳಿತದ ಸಂತ್ರಸ್ತರಿಗೆ 25 ಲಕ್ಷ ರೂ ಪರಿಹಾರ ಘೋಷಣೆ
  • ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದ ಸಂತ್ರಸ್ತರಿಗೆ ಪರಿಹಾರ ಮೊತ್ತ ಹೆಚ್ಚಳ
  • ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ ಆರ್‌ಸಿಬಿ

ಜೂನ್ 4, 2025 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ 11 ಅಭಿಮಾನಿಗಳ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುವುದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಶನಿವಾರ ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದೆ.
ತನ್ನ ಹೊಸ ಹೆಜ್ಜೆ "ಆರ್‌ಸಿಬಿ ಕೇರ್ಸ್" ಅಡಿಯಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಫ್ರಾಂಚೈಸಿ ತಿಳಿಸಿದೆ.

ಐಪಿಎಲ್ ಟ್ರೋಫಿ ಗೆಲುವಿನ ನಂತರ ಆರ್‌ಸಿಬಿ ಕ್ರಿಕೆಟಿಗರನ್ನು ನೋಡಲು ಸುಮಾರು ಎರಡೂವರೆ ಲಕ್ಷ ಜನರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಾಗ ಈ ದುರಂತ ಸಂಭವಿಸಿತ್ತು. ಪರಿಣಾಮವಾಗಿ ಉಂಟಾದ ಅವ್ಯವಸ್ಥೆಯಿಂದ  11 ಜನರ ಸಾವು ಸಂಭವಿಸಿತ್ತು.  ಇತರ ಹಲವಾರು ಜನರು ಗಾಯಗೊಂಡರು. ಕಾಲ್ತುಳಿತದ ನಂತರ, ಆರ್‌ಸಿಬಿ ಮೃತರ 11 ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಆರ್ಥಿಕ ನೆರವು ಘೋಷಿಸಿತ್ತು. ಈಗ ಆ ಪರಿಹಾರ ಮೊತ್ತವನ್ನು 25 ಲಕ್ಷ ರೂಪಾಯಿಗಳಿಗೆ ಏರಿಸಿದೆ. 
 ಶನಿವಾರ, ಭಾವನಾತ್ಮಕ ಸಂದೇಶವೊಂದರಲ್ಲಿ, ದುರಂತದ ನಂತರ ಅವರ ಮೊದಲ ಬಾರಿಗೆ, ಆರ್‌ಸಿಬಿ ದುಃಖವನ್ನು ಒಪ್ಪಿಕೊಂಡಿತು ಮತ್ತು ಪೀಡಿತ ಕುಟುಂಬಗಳಿಗೆ ತಮ್ಮ ಆರ್ಥಿಕ ಸಹಾಯವನ್ನು ಹೆಚ್ಚಳ ಮಾಡಿ ಘೋಷಿಸಿದೆ.

RCB CARES
Advertisment