ಅಜಿತ್ ಪವಾರ್ ವಿಮಾನ ಪತನಕ್ಕೆ ಕಾರಣ ದೃಢ : ಕಡಿಮೆ ಗೋಚರತೆಯೇ ವಿಮಾನ ಪತನಕ್ಕೆ ಕಾರಣ ಎಂದ ಕೇಂದ್ರ ಸರ್ಕಾರ

ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಲು ಕಾರಣ ಏನು ಎಂಬುದು ಈಗ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪ್ರಾಥಮಿ ತನಿಖೆ ಪ್ರಕಾರ, ವಿಮಾನ ಪತನಕ್ಕೆ ಗೋಚರತೆಯ ಪ್ರಮಾಣ ಕುಸಿತವೇ ಕಾರಣ ಎಂದು ಕೇಂದ್ರ ಸರ್ಕಾರ ಹೇಳಿದೆ.

author-image
Chandramohan
Ajit Pawar (2)
Advertisment
  • ರನ್ ವೇ ನಲ್ಲಿ ಕಡಿಮೆ ಗೋಚರತೆಯೇ ವಿಮಾನ ಅಪಘಾತಕ್ಕೆ ಕಾರಣ-ಕೇಂದ್ರ
  • ಬಾರಮತಿ ಏರ್ ಪೋರ್ಟ್ ನಲ್ಲಿ ದಟ್ಟ ಮಂಜಿನಿಂದ ರನ್ ವೇ ಕಾಣದ ಸ್ಥಿತಿ
  • ರನ್ ವೇ ಕಾಣದೇ, ದಟ್ಟ ಮಂಜಿನ ಕಾರಣದಿಂದ ವಿಮಾನ ಪತನ

ಅಜಿತ್ ಪವಾರ್ ಸಾವಿನ ಸುದ್ದಿ ಅಪ್‌ ಡೇಟ್‌:  'ಅಪಘಾತಕ್ಕೆ ಗೋಚರತೆ ಕೊರತೆ ಕಾರಣ' ಎಂದು ರಾಮ್ ಮೋಹನ್ ನಾಯ್ಡು ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿ ಹೇಳಿದ್ದಾರೆ. 
ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ಅಪಘಾತಕ್ಕೆ ಕಡಿಮೆ ಗೋಚರತೆ ಕಾರಣ ಎಂದು ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿ ಹೇಳಿದ್ದಾರೆ. 

ನಾವು ಪಾರದರ್ಶಕ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ತನಿಖೆ ನಡೆಸುತ್ತೇವೆ. ಬೆಳಿಗ್ಗೆ 8:48 ರ ಸುಮಾರಿಗೆ ಲ್ಯಾಂಡಿಂಗ್ ಸಮಯದಲ್ಲಿ ಸ್ಥಳದಲ್ಲಿ ಗೋಚರತೆ ಕಳಪೆಯಾಗಿತ್ತು ಎಂದು ಪ್ರಾಥಮಿಕ ಮಾಹಿತಿ ಸೂಚಿಸುತ್ತದೆ. ಲ್ಯಾಂಡಿಂಗ್ ಮೊದಲು, ಎಟಿಸಿ,  ಪೈಲಟ್‌ಗೆ ರನ್‌ವೇ ಕಾಣುತ್ತಿದೆಯೇ ಎಂದು ಕೇಳಿದರು . ಪೈಲಟ್‌, ರನ್ ವೇ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.  ಬಳಿಕ ಆಕಾಶದಲ್ಲಿ ವಿಮಾನ ಸುತ್ತು ಹಾಕಿದ ನಂತರ, ವಿಮಾನವು ಭೂಮಿಗೆ ಮರಳಿತು, ಮತ್ತು ಪೈಲಟ್‌ಗೆ ಲ್ಯಾಂಡಿಂಗ್‌ಗೆ ರನ್‌ವೇ ಗೋಚರಿಸುತ್ತದೆಯೇ ಎಂದು ಮತ್ತೆ ಕೇಳಲಾಯಿತು. ನಂತರ, ಪೈಲಟ್ ರನ್‌ವೇಯು ಗೋಚರವಾಗುತ್ತಿದೆ( ಕಾಣುತ್ತಿದೆ ) ಎಂದು ದೃಢಪಡಿಸಿದರು. ಎಟಿಸಿ ಲ್ಯಾಂಡಿಂಗ್ ಗೆ ಕ್ಲಿಯರೆನ್ಸ್ ನೀಡಿದ ಬಳಿಕ   ಅಪಘಾತ ಸಂಭವಿಸಿದೆ ಎಂದು ಕಂಡುಬಂದಿದೆ ಎಂದು  ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ರಾಮಮೋಹನ್ ನಾಯ್ಡು  ಹೇಳಿದರು.
ಹೀಗಾಗಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನಕ್ಕೆ ಗೋಚರತೆಯ ಕುಸಿತವೇ ಕಾರಣ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಜೊತೆಗೆ ಇಂದು ಬೆಳಿಗ್ಗೆ ಬಾರಮತಿಯಲ್ಲಿ ದಟ್ಟ ಮಂಜು ಆವರಿಸಿತ್ತು. ಗೋಚರತೆಯ ಮಟ್ಟ ಕಡಿಮೆ ಇತ್ತು ಎಂದು ಅಧಿಕಾರಿಗಳು, ಸ್ಥಳೀಯರು ಹೇಳಿದ್ದಾರೆ. 

baramati airport low visibility (1)




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

plane crash Ajit Pawar Baramati
Advertisment