/newsfirstlive-kannada/media/media_files/2025/09/23/rekha-murder-case-2025-09-23-13-03-42.jpg)
ರೇಖಾ ಹಾಗೂ 2ನೇ ಪತಿ ಲೋಹಿತಾಶ್ವ ಅಲಿಯಾಸ್ ಲೋಕೇಶ್
ಬೆಂಗಳೂರಿನ ಸುಂಕದಕಟ್ಟೆ ಬಸ್ ನಿಲ್ದಾಣದಲ್ಲಿ ನಿನ್ನೆ ನಡೆದಿದ್ದ ರೇಖಾ ಕೊಲೆ ಪ್ರಕರಣದ ಆರೋಪಿ ಪತಿ ಲೋಹಿತಾಶ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ರೇಖಾ ತನಗೆ ಮೋಸ ಮಾಡುತ್ತಿದ್ದಾಳೆ ಎಂಬ ಅನುಮಾನದಿಂದಲೇ ಪತಿ ಲೋಹಿತಾಶ್ವ, ರೇಖಾಳನ್ನು ಕೊಂದಿದ್ದಾಗಿ ಪೊಲೀಸರ ಬಳಿ ಹೇಳಿದ್ದಾನೆ.
ಜೊತೆಗೆ ರೇಖಾಳ ಮೊದಲ ಗಂಡನ ಮಗಳನ್ನು ಬೇರೆಡೆಗೆ ಕಳಿಸು, ನಾವಿಬ್ಬರೂ ಜೊತೆಯಾಗಿ ವಾಸ ಮಾಡೋಣ ಎಂದು ರೇಖಾಗೆ, ಲೋಹಿತಾಶ್ವ ಅಲಿಯಾಸ್ ಲೋಕೇಶ್ ಹೇಳಿದ್ದಾನೆ. ಆದರೇ, ಇದಕ್ಕೆ ರೇಖಾ ಒಪ್ಪಿಲ್ಲ. ತನ್ನ ಮಗಳು ತನ್ನ ಜೊತೆಯೇ ಇರಬೇಕು ಎಂದು ರೇಖಾ ಪಟ್ಟು ಹಿಡಿದಿದ್ದಾಳೆ. ಮಗಳು ನಿನ್ನ ಜೊತೆಯೇ ಇದ್ದರೇ, ನಾನು ಆ ಮನೆಯಲ್ಲಿ ಒಟ್ಟಿಗೆ ಇರಲ್ಲ ಎಂದು ಲೋಹಿತಾಶ್ವ ಆ ಮನೆಯಲ್ಲಿ ರೇಖಾ ಜೊತೆಗೆ ಒಟ್ಟಿಗೆ ವಾಸ ಇರಲಿಲ್ಲ. ಆಗ್ಗಾಗ್ಗೆ ಮನೆಗೆ ಬಂದು ರೇಖಾಳನ್ನು ಭೇಟಿಯಾಗಿ ಹೋಗುತ್ತಿದ್ದ. ಈ ವಿಷಯವಾಗಿಯೂ ರೇಖಾ ಹಾಗೂ ಲೋಹಿತಾಶ್ವ ನಡುವೆ ಜಗಳವಾಗಿದೆ.
ನಿನ್ನೆ ಸುಂಕದಕಟ್ಟೆಬಸ್ ನಿಲ್ದಾಣದಲ್ಲಿ ರೇಖಾಳ ಮೇಲೆ 11 ಭಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಬಳಿಕ ಲೋಹಿತಾಶ್ವ ಅಲಿಯಾಸ್ ಲೋಕೇಶ್ ಕೆ.ಆರ್. ಮಾರುಕಟ್ಟೆ ಕಡೆಗೆ ಹೋಗಿದ್ದ. ಈ ವೇಳೆಗಾಗಲೇ ಕಾಮಾಕ್ಷಿಪಾಳ್ಯ ಪೊಲೀಸರು ಲೋಹಿತಾಶ್ವನ ಬೆನ್ನು ಬಿದ್ದಿದ್ದರು. ಕೆ.ಆರ್.ಮಾರುಕಟ್ಟೆಗೆ ಹೋಗಿ ಬಳಿಕ ಅಲ್ಲಿಂದ ಕಾಮಾಕ್ಷಿಪಾಳ್ಯಕ್ಕೆ ವಾಪಸ್ ಬರುತ್ತಿದ್ದ. ಕೊನೆಗೆ ಕಾಮಾಕ್ಷಿಪಾಳ್ಯ ಬಳಿಯೇ ಆರೋಪಿ ಲೋಹಿತಾಶ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ತಿಂಗಳ ಹಿಂದೆ ಇಬ್ಬರು ಮದುವೆ ಆಗಿದ್ದೆವು. ರೇಖಾ ಮದುವೆ ಬಳಿಕ ತನ್ನನ್ನು ಶಿರಾ ದಿಂದ ಬೆಂಗಳೂರಿಗೆ ಬರುವಂತೆ ಕರೆಸಿದ್ದಳು. ಅದರಂತೆ ಆಕೆಯೇ ಡ್ರೈವರ್ ಕೆಲಸ ಕೊಡಿಸಿದ್ದಳು. ಎರಡನೇ ಮದುವೆ ಆಗಿದ್ದರೂ ಸಹ ಇಬ್ಬರು ಒಂದೇ ಮನೆಯಲ್ಲಿ ಇರಲಿಲ್ಲ. ನಿನ್ನ ಹನ್ನೆರಡು ವರ್ಷದ ಮಗಳನ್ನು ಬೇರೆ ಕಡೆ ಕಳಿಸು, ನಾವಿಬ್ಬರು ಒಟ್ಟಾಗಿ ಇರುವ ಎಂದು ನಾನು ರೇಖಾಗೆ ಹೇಳಿದ್ದೆ. ಆದರೇ, ಇದಕ್ಕೆ ಸಾಧ್ಯವಿಲ್ಲ, ಮಗಳನ್ನು ಬೇರೆ ಕಡೆಗೆ ಕಳಿಸಲು ಸಾಧ್ಯವಿಲ್ಲ ಎಂದು ರೇಖಾ ಹೇಳಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು.
ಇನ್ನೂ ನಿನ್ನೆ ಸುಂಕದಕಟ್ಟೆ ಬಸ್ ನಿಲ್ದಾಣದಲ್ಲಿ ನನಗೆ ಮೋಸ ಮಾಡ್ತೀಯಾ , ಮೋಸ ಮಾಡ್ತೀಯಾ ಎಂದು ಕೂಗಾಡಿಕೊಂಡು ಚಾಕು ಇರಿದು ರೇಖಾಳನ್ನು ಲೋಹಿತಾಶ್ವ ಅಲಿಯಾಸ್ ಲೋಕೇಶ್ ಕೊಲೆ ಮಾಡಿದ್ದಾನೆ. ರೇಖಾಳ 12 ವರ್ಷದ ಮಗಳ ಮುಂದೆಯೇ ಚಾಕು ಇರಿದು ಕೊಲೆ ಮಾಡಿದ್ದಾನೆ.
ಕಾಮಾಕ್ಷಿಪಾಳ್ಯ ಪೊಲೀಸರು ಕೊಲೆ ಕೇಸ್ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.