/newsfirstlive-kannada/media/media_files/2025/08/16/jaipura-hit-and-run-case-2025-08-16-12-36-05.jpg)
ಜೈಪುರದಲ್ಲಿ ನಡೆದ ಹಿಟ್ ಅಂಡ್ ರನ್ ದುರಂತದ ಸಿಸಿಟಿವಿ ದೃಶ್ಯ
ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ಒಬ್ಬರಿಗೆ ವೇಗವಾಗಿ ಚಲಿಸುತ್ತಿದ್ದ ಕಾರ್ ಡಿಕ್ಕಿ ಹೊಡೆದಿದೆ. ಬಳಿಕ ಕಾರ್ ನ ವೀಲ್ಹ್ ನಡಿಗೆ ಸಿಲುಕಿದ ಕ್ಯಾಪ್ಟನ್ ರನ್ನು ಹತ್ತು ಅಡಿ ದೂರದವರೆಗೂ ಕಾರ್ ಎಳೆದೊಯ್ದಿದೆ. ಈ ಭಯಾನಕ ಹಿಟ್ ಅಂಡ್ ರನ್ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಹಿಟ್ ಅಂಡ್ ರನ್ ದುರಂತದಲ್ಲಿ ಸೇನೆಯ ನಿವೃತ್ತ ಕ್ಯಾಪ್ಟನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನರಸರಾಮ್ ಜಾಜ್ರ ಹಿಟ್ ಅಂಡ್ ರನ್ ದುರಂತದಲ್ಲಿ ಸಾವನ್ನಪ್ಪಿದ ಸೇನೆಯ ನಿವೃತ್ತ ಕ್ಯಾಪ್ಟನ್.
ರಾಜಸ್ಥಾನದ ರಾಜಾನಿ ಜೈಪುರದಲ್ಲಿ ಈ ಹಿಟ್ ಅಂಡ್ ರನ್ ದುರಂತ ನಡೆದಿದೆ. ಆಗಸ್ಟ್ 15ರ ಬೆಳಿಗ್ಗೆ ನರರಾಮ್ ಜಾಜ್ರ ಸೈಕಲ್ ನಲ್ಲಿ ಚಿತ್ರಕೂಟ ಸ್ಟೇಡಿಯಂ ಕಡೆಗೆ ಹೋಗುತ್ತಿದ್ದರು. ಹಿಂಬದಿಯಿಂದ ವೇಗವಾಗಿ ಬಂದ ಕಾರ್, ನರಸರಾಮ್ ಜಾಜ್ರಗೆ ಡಿಕ್ಕಿ ಹೊಡೆದಿದೆ.
ನರಸರಾಮ್ ಜಾಜ್ರಗೆ ಡಿಕ್ಕಿ ಹೊಡೆದ ಬಳಿಕ ಕಾರ್ ಸ್ಥಳದಿಂದ ಪರಾರಿಯಾಗಿದೆ. ಪೊಲೀಸರು ಈಗ ಕಾರ್ ಮತ್ತು ಕಾರ್ ಚಾಲಕನನ್ನು ಪತ್ತೆ ಹಚ್ಚಬೇಕಾಗಿದೆ.
ಈ ಹಿಟ್ ಅಂಡ್ ರನ್ ದುರಂತದ ಸಿಸಿಟಿವಿ ದೃಶ್ಯಾವಳಿಯ ಟ್ವೀಟರ್ ಲಿಂಕ್ ಅನ್ನು ಇಲ್ಲಿ ಕೆಳಗೆ ನೀಡಿದ್ದೇವೆ.
Hit and run case in #Rajasthan#Jaipur, high speed car crushes retired soldier
— Siraj Noorani (@sirajnoorani) August 16, 2025
Dragged for 10 meters, died on the spot
Retired Army Captain Narsaram Jazda was going somewhere on a bicycle pic.twitter.com/MNoBiNXpAG
ಎರಡು ವಾರಗಳ ಹಿಂದೆ ಜೈಪುರದಲ್ಲಿ ಬೈಕ್ ಗೆ ಟ್ರಕ್ ಡಿಕ್ಕಿ ಹೊಡೆದಿದ್ದರಿಂದ 15 ವರ್ಷದ ಬಾಲಕ ಸಾವನ್ನಪ್ಪಿದ್ದ. ಈ ವರ್ಷದ ಪ್ರಾರಂಭದಲ್ಲಿ ಜೈಪುರದಲ್ಲಿ 9 ಮಂದಿ ಪಾದಚಾರಿಗಳ ಮೇಲೆ ಎಸ್‌ಯುವಿ ಕಾರ್ ಹರಿದು ಮೂರು ಮಂದಿ ಸಾವನ್ನಪ್ಪಿದ್ದರು. 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.