/newsfirstlive-kannada/media/media_files/2025/08/15/darshan_pavitra-1-2025-08-15-11-53-57.jpg)
ನಟ ದರ್ಶನ್ ಹಾಗೂ ಎ1 ಆರೋಪಿ ಪವಿತ್ರಾಗೌಡ
ನಟ ದರ್ಶನ್‌ಗೆ ಜೀವಾವಧಿ ಶಿಕ್ಷೆ ಗ್ಯಾರಂಟಿ? ಇದನ್ನ ನಾವು ಹೇಳ್ತಿಲ್ಲ. ನಿವೃತ್ತ ಪೊಲೀಸ್ ಅಧಿಕಾರಿಗಳು, ಕಾನೂನು ತಜ್ಞರು ಹೇಳ್ತಾ ಇರೋ ಮಾತುಗಳು. ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಮೈಸೂರಿನಲ್ಲಿರುವ G.N.ಮೋಹನ್ ಹೇಳಿರುವ ಮಾತು.
6 ತಿಂಗಳಲ್ಲಿ ತೀರ್ಪು!
ಶೀಘ್ರವೇ ತೀರ್ಪು ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿರೋ ಹಿನ್ನೆಲೆಯಲ್ಲಿ ನ್ಯಾಯಾಲಯ ಕನಿಷ್ಠ 6 ತಿಂಗಳೊಳಗೆ ತೀರ್ಪು ನೀಡಬೇಕಾಗುತ್ತದೆ. ಕೊಲೆ ಕೇಸ್‌ನಲ್ಲಿ ಗಲ್ಲು ಶಿಕ್ಷೆ ಮತ್ತು ಜೀವಾವಧಿ ಶಿಕ್ಷೆ ಎರಡೂ ಇದೆ. ದರ್ಶನ್‌ಗೆ ಬಹುಶಃ ಜೀವಾವಧಿ ಶಿಕ್ಷೆ ಗ್ಯಾರಂಟಿ ಅಂತಾ ನಿವೃತ್ತ ಪೊಲೀಸ್ ಅಧಿಕಾರಿಗಳು, ಕಾನೂನು ತಜ್ಞರು ಹೇಳ್ತಿದ್ದಾರೆ. ಮೈಸೂರಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎನ್. ಮೋಹನ್ ಅವರು ನಟ ದರ್ಶನ್ ಗೆ ಕೆಳ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸಾಕ್ಷಿಗಳ ಆಧಾರದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಬಹುದು ಅಂತ ಹೇಳಿದ್ದಾರೆ. ಪ್ರಾಸಿಕ್ಯೂಷನ್ ಬಳಿ ಪ್ರಬಲ ಸಾಕ್ಷಿಗಳಿವೆ. ಇಬ್ಬರು ಪ್ರತ್ಯಕ್ಷದರ್ಶಿ ಸಾಕ್ಷಿಗಳೂ ಇದ್ದಾರೆ. ಜೊತೆಗೆ ಪೋರೆನ್ಸಿಕ್ ಸಾಕ್ಷ್ಯಗಳೂ ಇವೆ. ಪೋನ್ ಕಾಲ್ ಡೀಟೈಲ್ ರೆಕಾರ್ಡ್ ಇದೆ. ಪೋಸ್ಟ್ ಮಾರ್ಟಂ ವರದಿ ಇದೆ. ರೇಣುಕಾಸ್ವಾಮಿಯನ್ನು ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರನ ಮೂಲಕ ಕಿಡ್ನ್ಯಾಪ್ ಮಾಡಿಸಿದ್ದಕ್ಕೂ ಸಾಕ್ಷ್ಯಇದೆ. ಇವೆಲ್ಲವೂ ನಟ ದರ್ಶನ್ ಗೆ ಮುಳುವಾಗಬಹುದು ಅಂತ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎನ್. ಮೋಹನ್ ಜೊತೆ ನ್ಯೂಸ್ ಫಸ್ಟ್ ಪ್ರತಿನಿಧಿ ರವಿ ಪಾಂಡವಪುರ ನಡೆಸಿದ ಮಾತುಕತೆ ವಿವರದ ಯೂ ಟ್ಯೂಬ್ ಲಿಂಕ್ ಅನ್ನು ಇಲ್ಲಿ ನೀಡಿದ್ದೇವೆ.
99 ಪರ್ಸೆಂಟ್ ಜಾಮೀನಿಲ್ಲ!
ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿರೋ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ಇನ್ಮೇಲೆ ಬೇರೆ ಯಾವ ಕೋರ್ಟ್ ಗೂ ಜಾಮೀನು ಮೊರೆ ಹೋಗೋ ಸಾಧ್ಯತೆ ಇಲ್ಲ. ಆಗೊಂದು ವೇಳೆ ಜಾಮೀನಿಗೆ ಮೊರೆ ಹೋದರೂ ಸಿಗೋದು ಡೌಟು, ಸುಪ್ರೀಂ ಕೋರ್ಟ್ ರದ್ದು ಮಾಡಿ ಇದೊಂದ್ ವಿಶೇಷ ಕೇಸ್ ಅಂತಾ ಹೇಳಿರೋದ್ರಿಂದ ಸ್ಥಳೀಯ ನ್ಯಾಯಾಲಯಗಳು, ಹೈಕೋರ್ಟ್ ಜಾಮೀನು ನೀಡಲ್ಲ. ಕೆಳ ನ್ಯಾಯಾಲಯದಲ್ಲಿ ದೋಷಾರೋಪಣೆ ಹೊರಿಸಿ, ವಿಚಾರಣೆ ಪೂರ್ಣವಾಗುವವರೆಗೂ ದರ್ಶನ್ ಅಂಡ್ ಟೀಮ್ ಗೆ ಜೈಲುವಾಸ ಗ್ಯಾರಂಟಿ.
ಅನಾರೋಗ್ಯದ ಕಾರಣ ಮುಂದಿಡೋದಕ್ಕೂ ಆಗಲ್ಲ!
ಘೋರ ಅಪರಾಧದಲ್ಲಿ ಭಾಗಿಯಾಗಿದ್ರೂ ಅನಾರೋಗ್ಯ ಕಾಣಿಸ್ಕೊಂಡಿದ್ರೆ ಕೋರ್ಟ್ ಬೇಲ್ ನೀಡೋ ಸಾಧ್ಯತೆ ಇರುತ್ತೆ. ಆದ್ರೆ, ದರ್ಶನ್ ಈ ಹಿಂದೆ ಬಳ್ಳಾರಿ ಜೈಲಲ್ಲಿ ಇದ್ದಾಗ ತನಗೆ ಅನಾರೋಗ್ಯ ಕಾಣಿಸ್ಕೊಂಡಿದೆ. ಬೆನ್ನು ನೋವಿದೆ. ಶೀಘ್ರವೇ ಶಸ್ತ್ರ ಚಿಕಿತ್ಸೆ ಪಡೀಬೇಕು. ಇಲ್ಲದೇ ಇದ್ರೆ ಲಕ್ವ ಹೊಡೆಯೋ ಸಾಧ್ಯತೆ ಇದೆ ಅಂತಾ ಜಾಮೀನು ಪಡೆದಿದ್ರು. ಆದ್ರೆ, ಶಸ್ತ್ರ ಚಿಕಿತ್ಸೆ ಪಡೆದಿರಲಿಲ್ಲ. ಹೀಗಾಗಿ ಮತ್ತೆ ಅನಾರೋಗ್ಯದ ಕಾರಣ ಮುಂದಿಡಲಾಗಲ್ಲ. ಅನಾರೋಗ್ಯ ಇದ್ದರೇ, ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಿರಿ. ನ್ಯಾಯಾಂಗ ಬಂಧನದಲ್ಲಿದ್ದುಕೊಂಡೇ ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ ಎಂದು ಸುಪ್ರೀಂಕೋರ್ಟ್ ಹೇಳಬಹುದು.
ಜಾಮೀನು ಪಡೆದ್ಮೇಲೆ ದರ್ಶನ್ ಮಾಡಿದ ತಪ್ಪುಗಳು!
01) ಲಕ್ವ ಹೊಡೆಯುತ್ತೆ ಅಂತಾ ಹೇಳಿ ಚಿಕಿತ್ಸೆ ಪಡೆಯದೇ ಕೋರ್ಟ್‌ಗೆ ಸುಳ್ಳು ಹೇಳಿದಂತೆ ಆಗಿದೆ.
02) ನಟ ಚಿಕ್ಕಣ್ಣ ಕೊಲೆ ಕೇಸ್ ನ ಸಾಕ್ಷಿ ಆಗಿದ್ದರೂ, ಆತನ ಜೊತೆ ಕಾಣಿಸ್ಕೊಂಡಿದ್ದು
03) ಅಭಿಮಾನಿಗಳ ಹುಚ್ಚಾಟಕ್ಕೆ ಮತ್ತೆ ಅವಕಾಶ ನೀಡಿದ್ದು.
04) ಬೇಲ್ ಪಡೆಯುವಾಗ ಆತುರ ತೋರಿಸಿದ್ದು
ಜೀವಾವಧಿ ಶಿಕ್ಷೆ ಆದ್ರೆ ಮುಂದೇನು ಕಥೆ?
ಸುಪ್ರೀಂ ಕೋರ್ಟ್ ವಿಶೇಷ ಕೇಸ್ ಅಂತ ಹೇಳಿದೆ. ಕೆಳ ನ್ಯಾಯಾಲಯವು ಸುಪ್ರೀಂಕೋರ್ಟ್ ನ ಅಭಿಪ್ರಾಯಗಳಿಂದ ಪ್ರಭಾವಿತರಾಗದೇ, ಕೇಸ್ ನ ಮೆರಿಟ್ ಆಧಾರದ ಮೇಲೆ ವಿಚಾರಣೆ ನಡೆಸಿ ತೀರ್ಪು ನೀಡಬೇಕೆಂದು ಹೇಳಿದೆ. ಒಂದು ವೇಳೆ ಏನಾದರೂ ನಟ ದರ್ಶನ್‌ಗೆ ಜೀವಾವಧಿ ಶಿಕ್ಷೆಯನ್ನು ಕೆಳ ನ್ಯಾಯಾಲಯ ವಿಧಿಸಿದ್ದರೇ, ನಟ ದರ್ಶನ್ ಸಿನಿಮಾ ಜೀವನ ಮುಗೀತು ಅಂತಾನೇ ಅರ್ಥ. ಮುಂದಿನ ಜೀವನವನ್ನು ಜೈಲಿನಲ್ಲೇ ಕಳೆಯಬೇಕಾಗುತ್ತೆ. ದರ್ಶನ್ ಗೆ ಈಗ 48 ವರ್ಷ ವಯಸ್ಸು. ಜೀವಾವಧಿ ಶಿಕ್ಷೆ ಅಂದರೇ, 12 ಅಥವಾ 14 ವರ್ಷದ ಜೈಲುಶಿಕ್ಷೆಯಲ್ಲ. ಜೀವ ಇರುವ ಕೊನೆಕ್ಷಣದವರೆಗೂ ಜೈಲಿನಲ್ಲೇ ಇರಬೇಕೆಂದು ಅರ್ಥ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.