/newsfirstlive-kannada/media/media_files/2025/09/13/vijay-lakashmi-flat-stolen-2025-09-13-13-44-43.jpg)
ವಿಜಯಲಕ್ಷ್ನಿ ವಾಸ ಇದ್ದ ಪ್ಲ್ಯಾಟ್ ನಲ್ಲಿ ಕಳ್ಳತನ
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳತನ ನಡೆದಿದೆ. 3 ಲಕ್ಷ ನಗದು ಕಳ್ಳತನ ಮಾಡಿರುವ ಕಿಡಿಗೇಡಿಗಳ ವಿರುದ್ಧ ದರ್ಶನ್ ಮ್ಯಾನೇಜರ್ ನಾಗರಾಜ್ ರಿಂದ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ನೀಡಲಾಗಿದೆ. ವಿಜಯಲಕ್ಷ್ಮಿ ವಾಸ ಇರುವ ಹೊಸಕೆರೆಹಳ್ಳಿ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಫ್ಲಾಟ್ ನಲ್ಲಿ ಕಳ್ಳತನ ನಡೆದಿದೆ. 3 ಲಕ್ಷ ರೂಪಾಯಿ ಹಣ ಕಳ್ಳತನವಾಗಿರುವುದಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಲಾಗಿದೆ. ದೂರಿನ ಹಿನ್ನಲೆಯಲ್ಲಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಸೆಪ್ಟಂಬರ್ 4 ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೈಸೂರಿಗೆ ತೆರಳಿದ್ದರು. ಮನೆಯ ವಾರ್ಡ್ ರೋಬ್ ನಲ್ಲಿ ಕಾಟನ್ ಬಾಕ್ಸ್ ನಲ್ಲಿ ಹಣ ತೆಗೆದುಕೊಡಲು ವಿಜಯಲಕ್ಷ್ಮಿ, ತಮ್ಮ ಮ್ಯಾನೇಜರ್ ನಾಗರಾಜ್‌ಗೆ ಹೇಳಿದ್ದರು. ಸ್ವಲ್ಪ ಹಣ ತೆಗೆದು ಕೊಟ್ಟು ಉಳಿದ ಹಣವನ್ನು ಮ್ಯಾನೇಜರ್ ನಾಗರಾಜ್ ಅಲ್ಲೇ ಇಟ್ಟಿದ್ದರಂತೆ.
ಅದೇ ದಿನ ಮೈಸೂರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ತೆರಳಿದ್ದಾರೆ. ಮನೆಯ ಬೀಗವನ್ನು ತಾಯಿಗೆ ಕೊಟ್ಟು ಕೆಲಸದ ಮೇಲೆ ಮ್ಯಾನೇಜರ್ ನಾಗರಾಜ್ ಕೂಡ ಹೊರಗೆ ತೆರಳಿದ್ದಾರೆ. ಸೆಪ್ಟಂಬರ್ 7 ರಂದು ವಿಜಯಲಕ್ಷ್ಮಿ ಬೆಂಗಳೂರಿಗೆ ವಾಪಸ್ ಬಂದಿದ್ದರು .
ಸೆಪ್ಟಂಬರ್ 8 ರಂದು ವಾರ್ಡ್ ರೋಬ್ ನಲ್ಲಿ ಹಣ ನೋಡಿದಾಗ ನಾಪತ್ತೆಯಾಗಿತ್ತು. ಮನೆಯ ಎಲ್ಲಾ ಕಡೆ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ಹುಡುಕಾಟ ನಡೆಸಿದ್ದರು. ಬಳಿಕ ಮನೆಯ ಕೆಲಸದವರನ್ನು ವಿಚಾರಿಸಿದಾಗ ಹಣದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮನೆಯ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿ, ಮ್ಯಾನೇಜರ್ ನಾಗರಾಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.