/newsfirstlive-kannada/media/media_files/2025/10/16/priyank_kharge_rss-2025-10-16-16-25-53.jpg)
ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥ ಸಂಚಲನ ಅನುಮತಿ ವಿವಾದ
ನವೆಂಬರ್ 2 ರಂದು ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥ ಸಂಚಲನ ವಿಚಾರಕ್ಕೆ ಸಂಬಂಧಿಸಿದಂತೆ, ಕಲಬುರಗಿ ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ಆರ್‌ಎಸ್ಎಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು.
ನ್ಯಾಯಮೂರ್ತಿ ಎಮ್‌ಜಿಎಸ್ ಕಮಲ್ ಅವರಿಂದ ಅರ್ಜಿ ವಿಚಾರಣೆ ನಡೆದಿದೆ.
ನಾವು ಯಾವುದೇ ಕಾರಣಕ್ಕೂ ಯಾವುದೇ ಅರ್ಜಿಗಳನ್ನ ತಿರಸ್ಕರಿಸಿಲ್ಲ. ಬಹಳಷ್ಟು ಸಂಘಟನೆಗಳು ನವೆಂಬರ್ 2 ರಂದೇ ಪಥ ಸಂಚಲನಕ್ಕೆ ಮತ್ತು ಪ್ರತಿಭಟನೆಗೆ ಅರ್ಜಿ ಸಲ್ಲಿಸಿವೆ ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್ ನಲ್ಲಿ ವಾದ ಮಂಡನೆ ಮಾಡಿದ್ದರು. ಎಲ್ಲ ಸಂಘಟನೆಗಳನ್ನ ಕರೆದು ಜಿಲ್ಲಾಡಳಿತ ಶಾಂತಿಸಭೆ ನಡೆಸಿದೆ. ರಾಜ್ಯದಲ್ಲಿ ಎಲ್ಲಿಯೂ ಸಮಸ್ಯೆ ಆಗಿಲ್ಲ, ಆದರೆ ಕಲಬುರಗಿಯಲ್ಲಿ ಸಮಸ್ಯೆ ಆಗಿದೆ. ಬಂದೋಬಸ್ತ್‌ಗಾಗಿ ಎರಡು ವಾರಗಳ ಕಾಲ ಸಮಯಾವಕಾಶ ನೀಡಬೇಕೆಂದು ಸರ್ಕಾರದ ಪರ ವಕೀಲರು ಹೈಕೋರ್ಟ್ ಗೆ ಮನವಿ ಮಾಡಿಕೊಂಡರು.
/filters:format(webp)/newsfirstlive-kannada/media/media_files/2025/10/24/kalburagi-hc-bench-2025-10-24-16-30-07.jpg)
ಆದರೆ ಸರ್ಕಾರಿ ಅಭಿಯೋಜನಕರ ವಾದಕ್ಕೆ ಆರ್‌ಎಸ್‌ಎಸ್ ಪರ ವಕೀಲ ಅರುಣ್ ಶ್ಯಾಮ್ ಆಕ್ಷೇಪ ವ್ಯಕ್ತಪಡಿಸಿದ್ದರು. ಎರಡು ವಾರ ಕಾಲಾವಕಾಶ ನೀಡಿದ್ರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ? ಎಂದು ಪ್ರಶ್ನಿಸಿದ್ದರು.
ಕೊನೆಗೆ ಹೈಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿದೆ. ಅಕ್ಟೋಬರ್ 28ರವರೆಗೆ ಶಾಂತಿ ಸಭೆ ನಡೆಸಿ, ಅಕ್ಟೋಬರ್ 30 ರಂದು ಮತ್ತೆ ವಿಚಾರಣೆಗೆ ಹಾಜರಾಗಲು ಆರ್.ಎಸ್.ಎಸ್. ಪರ ವಕೀಲರು ಹಾಗೂ ಸರ್ಕಾರದ ಪರ ವಕೀಲರಿಗೆ ಹೈಕೋರ್ಟ್ ಸೂಚಿಸಿದೆ.
ಹೀಗಾಗಿ ಇಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ನವಂಬರ್ 2 ರಂದು ನಡೆಸಲು ಉದ್ದೇಶಿಸಿರುವ ಪಥ ಸಂಚಲನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿಂದ ಯಾವುದೇ ಮಹತ್ವದ ಆದೇಶ ಬಂದಿಲ್ಲ. ಇನ್ನೂ ಜಿಲ್ಲಾಡಳಿತವೂ ಕೂಡ ಯಾವ ಸಂಘಟನೆಗೆ ಪಥ ಸಂಚಲನ, ಱಲಿ ನಡೆಸಲು ನವಂಬರ್ 2 ರಂದು ಅನುಮತಿ ನೀಡಲಾಗುತ್ತೆ ಎಂಬ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
/filters:format(webp)/newsfirstlive-kannada/media/post_attachments/wp-content/uploads/2025/07/PRIYANK-KHARGE.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us