/newsfirstlive-kannada/media/media_files/2025/08/07/putin-to-visit-india222-2025-08-07-20-31-14.jpg)
ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ವಾಡ್ಲಿಮಿರ್ ಪುಟಿನ್ ಮೋದಿ ಜೊತೆ ಹೆಜ್ಜೆ ಹಾಕಿದ್ದು ಹೀಗೆ
ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಸದ್ಯದಲ್ಲೇ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಭಾರತಕ್ಕೆ ಭೇಟಿ ನೀಡುವ ದಿನಾಂಕವನ್ನು ಇನ್ನಷ್ಟೇ ಅಂತಿಮಗೊಳಿಸಬೇಕಾಗಿದೆ. ಈ ವರ್ಷದ ಡಿಸೆಂಬರ್ ನೊಳಗೆ ವಾಡ್ಲಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡುವರು ಎಂದು ರಷ್ಯಾದ ನ್ಯೂಸ್ ಏಜೆನ್ಸಿ ಸ್ಪುಟ್ನಿಕ್ ವರದಿ ಮಾಡಿದೆ.
ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಭಾರತಕ್ಕೆ ಸದ್ಯದಲ್ಲೇ ಭಾರತಕ್ಕೆ ಭೇಟಿ ನೀಡುವರು ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ. ಸದ್ಯ ಅಜಿತ್ ದೋವಲ್ ರಷ್ಯಾ ಪ್ರವಾಸದಲ್ಲಿದ್ದಾರೆ.
ನಾವು ರಷ್ಯಾದೊಂದಿಗೆ ವಿಶೇಷ, ಸುದೀರ್ಘ ಭಾಂಧವ್ಯ ಹೊಂದಿದ್ದಾರೆ. ನಾವು ಈ ಸಂಬಂಧ, ಭಾಂಧವ್ಯವನ್ನು ಗೌರವಿಸುತ್ತೇವೆ. ನಾವು ಉನ್ನತ ಮಟ್ಟದ ಮಾತುಕತೆ ನಡೆಸಿದ್ದೇವೆ. ಈ ಉನ್ನತ ಮಟ್ಟದ ಮಾತುಕತೆಗಳು ಬಹಳಷ್ಟು ಕೊಡುಗೆಗಳನ್ನು ನೀಡಿವೆ. ನಾವು ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ ನೀಡುವರು ಎಂಬುದನ್ನು ತಿಳಿದು ಸಂತೋಷಗೊಂಡಿದ್ದೇವೆ. ನನಗೆ ಅನ್ನಿಸುವ ಪ್ರಕಾರ, ಭೇಟಿ ದಿನಾಂಕ ಬಹುತೇಕ ಅಂತಿಮಗೊಂಡಿದೆ ಎಂದು ರಷ್ಯಾದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
ಅಮೆರಿಕಾವು ಭಾರತ, ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿರುವುದಕ್ಕೆ ಭಾರತದ ಉತ್ಪನ್ನಗಳನ್ನು ಅಮೆರಿಕಾಕ್ಕೆ ರಫ್ತು ಮಾಡುವುದರ ಮೇಲೆ ಶೇ.50 ರಷ್ಟು ಸುಂಕ ವಿಧಿಸಿ ಆದೇಶಿಸಿದ್ದಾರೆ. ರಷ್ಯಾದಿಂದ ಕಚ್ಚಾತೈಲ, ಶಸ್ತ್ರಾಸ್ತ್ರ ಖರೀದಿ ಮಾಡಬಾರದೆಂದು ಮೊದಲಿನಿಂದಲೂ ಒತ್ತಡ ಹೇರುತ್ತಿದೆ. ಆದರೇ, ಅಮೆರಿಕಾದ ಒತ್ತಡಕ್ಕೆ ಭಾರತ ಮಣಿದಿಲ್ಲ. ನಮಗೆ ಕಡಿಮೆ ಬೆಲೆಯಲ್ಲಿ ಸಿಗುವ ಕಚ್ಚಾತೈಲ ಬೇಕು. ನಮಗೆ ನಮ್ಮ ರಾಷ್ಟ್ರೀಯ ಹಿತಾಸಕ್ತಿ, ಜನರ ಹಿತಾಸಕ್ತಿ, ನಮ್ಮ ಆರ್ಥಿಕತೆಯ ಹಿತಾಸಕ್ತಿ ಮುಖ್ಯ ಎಂದು ಭಾರತ ಖಡಕ್ಕಾಗಿಯೇ ಅಮೆರಿಕಾಕ್ಕೆ ಹೇಳಿದೆ.
/filters:format(webp)/newsfirstlive-kannada/media/media_files/2025/08/07/putin-to-visit-india-2025-08-07-20-32-48.jpg)
ಆದರೇ, ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿಸುವ ಮೂಲಕ ರಷ್ಯಾ- ಉಕ್ರೇನ್ ಯುದ್ಧಕ್ಕೆ ರಷ್ಯಾದ ಯುದ್ಧ ಯಂತ್ರಕ್ಕೆ ಹಣ ನೀಡಿದಂತೆ ಆಗುತ್ತಿದೆ. ರಷ್ಯಾದಿಂದ ಕಚ್ಚಾತೈಲ ಖರೀದಿ ಮಾಡದೇ, ರಷ್ಯಾದ ಜೊತೆಗಿನ ವ್ಯಾಪಾರವನ್ನು ಬಾಯ್ಕಾಟ್ ಮಾಡಿ ಎಂದು ಅಮೆರಿಕಾ ಬೊಬ್ಬೆ ಹೊಡೆಯುತ್ತಿದೆ. ಆದರೇ, ರಷ್ಯಾದ ಜೊತೆಗಿನ ವ್ಯಾಪಾರ, ಶಸ್ತ್ರಾಸ್ತ್ರ ಖರೀದಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ. ಯೂರೋಪ್ ರಾಷ್ಟ್ರಗಳು ಕೂಡ ರಷ್ಯಾದಿಂದ ಕಚ್ಚಾತೈಲ, ನೈಸರ್ಗಿಕ ಗ್ಯಾಸ್ ಖರೀದಿಸುತ್ತಿವೆ. ಅಮೆರಿಕಾ ಕೂಡ ರಷ್ಯಾದಿಂದ ರಸಗೊಬ್ಬರ, ಯುರೇನಿಯಂ ಖರೀದಿಸುತ್ತಿದೆ. ನಾವು ಮಾತ್ರ ಏಕೆ ರಷ್ಯಾದಿಂದ ಕಡಿಮೆ ಬೆಲೆಯ ಕಚ್ಚಾತೈಲ ಖರೀದಿಸಬಾರದು ಎಂದು ಭಾರತ ಪ್ರಶ್ನಿಸಿದೆ.
ಇದರ ಮಧ್ಯೆಯೇ ಇಂದು ಪ್ರಧಾನಿ ಮೋದಿ, ನಮಗೆ ನಮ್ಮ ದೇಶದ ಹಿತಾಸಕ್ತಿಯೇ ಮುಖ್ಯ. ನಮ್ಮ ಹಿತಾಸಕ್ತಿ ರಕ್ಷಣೆಗೆ ಮೊದಲ ಆದ್ಯತೆ. ದೇಶದ ಹಿತಾಸಕ್ತಿ ರಕ್ಷಣೆಗಾಗಿ ದೊಡ್ಡ ಬೆಲೆ ತೆರಲು ಕೂಡ ನಾನು ಸಿದ್ದ ಎಂದು ಹೇಳುವ ಮೂಲಕ ಅಮೆರಿಕಾದ ಶೇ.50 ರಷ್ಟು ಸುಂಕಕ್ಕೆ ಎದೆಕೊಟ್ಟು ನಿಲ್ಲುವ ಮಾತುಗಳನ್ನಾಡಿದ್ದಾರೆ.
ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ , ಉಕ್ರೇನ್ ಜೊತೆ ಯುದ್ಧ ಶುರುವಾದ 3 ವರ್ಷದ ಬಳಿಕ ಭಾರತಕ್ಕೆ ಮೊದಲ ಭೇಟಿಯನ್ನು ಇದೇ ಡಿಸೆಂಬರ್ ನೊಳಗೆ ನೀಡಲಿದ್ದಾರೆ. ವಾಡ್ಲಿಮಿರ್ ಪುಟಿನ್- ನರೇಂದ್ರ ಮೋದಿ ದ್ವಿಪಕ್ಷೀಯ ಭಾಂಧವ್ಯ ವೃದ್ದಿ, ರಕ್ಷಣಾ ಶಸ್ತ್ರಾಸ್ತ್ರ ಖರೀದಿ ಬಗ್ಗೆ ಮಹತ್ವದ ಮಾತುಕತೆ ನಡೆಸುವ ನಿರೀಕ್ಷೆ ಇದೆ. ಎಸ್-500 ಟ್ರಿಂಫ್ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ರಷ್ಯಾದಿಂದ ಖರೀದಿಸುವ ಬಗ್ಗೆಯೂ ಮಾತುಕತೆ ನಡೆಯುವ ನಿರೀಕ್ಷೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us