ಸಂಜಯ ಕಪೂರ್‌ 30 ಸಾವಿರ ಕೋಟಿ ಆಸ್ತಿಗಾಗಿ ಹಾಲಿ-ಮಾಜಿ ಪತ್ನಿ ಫೈಟ್ : ಹೈಕೋರ್ಟ್ ನಲ್ಲಿ ಹೋರಾಟ, ಆಸ್ತಿ ಪಟ್ಟಿ ನೀಡಲು ಹೈಕೋರ್ಟ್ ನಿಂದ ಪ್ರಿಯಾಗೆ ಸೂಚನೆ

ಸೋನಾ ಕಾಮಸ್ಟರ್ ಕಂಪನಿಯ ಮಾಲೀಕ ಸಂಜಯ ಕಪೂರ್ ಜೂನ್ 12 ರಂದು ಲಂಡನ್ ನಲ್ಲಿ ಸಾವನ್ನಪ್ಪಿದ್ದರು. ಈಗ 30 ಸಾವಿರ ಕೋಟಿ ರೂ ಆಸ್ತಿಗಾಗಿ ಸಂಜಯ ಕಪೂರ್ ಅವರ ಹಾಲಿ ಮತ್ತು ಮಾಜಿ ಪತ್ನಿಯರು ಹೈಕೋರ್ಟ್ ನಲ್ಲಿ ಫೈಟ್ ನಡೆಸುತ್ತಿದ್ದಾರೆ. ಇಂದು ಹೈಕೋರ್ಟ್ ಎಲ್ಲ ಆಸ್ತಿಗಳ ಪಟ್ಟಿ ನೀಡುವಂತೆ ಪ್ರಿಯಾಗೆ ಸೂಚಿಸಿದೆ.

author-image
Chandramohan
KARISHMA AND PRIAYA LEGAL FIGHT

ಕರಿಷ್ಮಾ ಹಾಗೂ ಪ್ರಿಯಾ , ಸಂಜಯ ಕಪೂರ್‌

Advertisment
  • ಸಂಜಯ ಕಪೂರ್ ಸಾವಿನ ನಂತರ 30 ಸಾವಿರ ಕೋಟಿ ಆಸ್ತಿಗಾಗಿ ಫೈಟ್
  • ಹಾಲಿ ಪತ್ನಿ ಪ್ರಿಯಾ, ಮಾಜಿ ಪತ್ನಿ ಕರಿಷ್ಮಾ ನಡುವೆ ಹೈಕೋರ್ಟ್ ನಲ್ಲಿ ಫೈಟ್‌
  • ಈಗಾಗಲೇ 1,900 ಕೋಟಿ ರೂ ಆಸ್ತಿ ಪಡೆದಿದ್ದಾರೆ ಎಂದ ಹಾಲಿ ಪತ್ನಿ ಪ್ರಿಯಾ

ಸಂಜಯ ಕಪೂರ್ ಲಂಡನ್ ನಲ್ಲಿ ಅನಿರೀಕ್ಷಿತವಾಗಿ ಸಾವನ್ನಪ್ಪಿದ ಬಳಿಕ ಈಗ ಹಾಲಿ ಮತ್ತು ಮಾಜಿ ಪತ್ನಿಯರ ನಡುವೆ 30 ಸಾವಿರ ಕೋಟಿ ಆಸ್ತಿಗಾಗಿ ಕಾನೂನು ಸಮರ ಶುರುವಾಗಿದೆ. ಮಾಜಿ ಪತ್ನಿ ಕರಿಷ್ಮಾ ಕಪೂರ್ ಅವರ ಇಬ್ಬರು ಮಕ್ಕಳು ತಂದೆಯ ವಿಲ್  ಅನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ವಿಲ್ ಅನ್ನು ರಿಜಿಸ್ಟಾರ್ ಮಾಡಿಸಿಲ್ಲ. ವಿಲ್ ನಕಲಿ. ವಿಲ್ ಅನ್ನು ಕೃತಕವಾಗಿ ಪ್ರಿಯಾ ಸಚ್ ದೇವ್ ಸೃಷ್ಟಿಸಿದ್ದಾರೆ ಎಂದು ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.  
ಕರಿಷ್ಮಾ ಕಪೂರ್ ಮಕ್ಕಳು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆ

ಈ ಅರ್ಜಿಯ ಬಗ್ಗೆ ದೆಹಲಿ ಹೈಕೋರ್ಟ್ ನಲ್ಲಿ ಇಂದು ವಾದ- ಪ್ರತಿವಾದ ನಡೆದಿದೆ.  ಕರಿಷ್ಮಾ ಕಪೂರ್ ಮಕ್ಕಳ ಪರ ಮಹೇಶ್ ಜೇಠ್ಮಲಾನಿ ವಾದಿಸಿದ್ದರೇ, ಪ್ರಿಯಾ ಸಚದೇವ್  ಪರ ಹಿರಿಯ ವಕೀಲ ರಾಜೀವ್ ನಯ್ಯರ್ ವಾದಿಸಿದ್ದಾರೆ. 
ಮಾರ್ಚ್ 21 ರಂದು ತಮ್ಮ ಆಸ್ತಿ ಯಾರಿಗೆ ಸೇರಬೇಕು, ಯಾವ್ಯಾವ ಆಸ್ತಿ ಯಾರಿಗೆ ಸೇರಬೇಕು ಎಂಬ ಬಗ್ಗೆ  ಸಂಜಯ ಕಪೂರ್  ವಿಲ್ ಬರೆದಿದ್ದಾರೆ ಎಂದು ಪ್ರಿಯಾ ಸಚ್ ದೇವ್ ಹೇಳಿದ್ದಾರೆ. ಈ ವಿಲ್ ನ ಕಾನೂನಿನ ಮಾನ್ಯತೆಯನ್ನು ಕರಿಷ್ಮಾ ಕಪೂರ್ ಮಕ್ಕಳು ಪ್ರಶ್ನಿಸಿದ್ದಾರೆ. 
ಜೂನ್ 12 ರಂದು ಲಂಡನ್ ನಲ್ಲಿ ಪೋಲೋ ಗೇಮ್ ಆಡುವಾಗ ಮೈದಾನದಲ್ಲಿ ಸಂಜಯ ಕಪೂರ್ ಕುಸಿದು ಬಿದ್ದು ಸಾವನ್ನಪ್ಪಿದ್ದರು.  
ಈಗ ಕರಿಷ್ಮಾ ಕಪೂರ್ ಮಕ್ಕಳು ತಂದೆ ಸಂಜಯ ಕಪೂರ್ ಅವರ 30 ಸಾವಿರ ಕೋಟಿ ರೂಪಾಯಿ ಆಸ್ತಿಯಲ್ಲಿ ತಮಗೆ ಐದನೇ ಒಂದು ಪಾಲು ಸಿಗಬೇಕು ಎಂದು ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅಂದರೇ, 6 ಸಾವಿರ ಕೋಟಿ ರೂಪಾಯಿ ಆಸ್ತಿ ತಮಗೆ ಸಿಗಬೇಕೆಂದು ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಕರಿಷ್ಮಾ ಕಪೂರ್ ಮಕ್ಕಳು ಮನವಿ  ಮಾಡಿದ್ದಾರೆ. 
ಕರಿಷ್ಮಾ ಕಪೂರ್ ಮಗಳು ಸಮೈರಾ ಕಪೂರ್ ತಮ್ಮ ತಾಯಿ ಮೂಲಕವೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಮಗ ಕಿಯಾನಾ ಅಪ್ರಾಪ್ತನಾಗಿದ್ದು, ತನ್ನ ತಾಯಿ ಕರಿಷ್ಮಾ ಕಪೂರ್ ತನ್ನ ಲೀಗಲ್ ಗಾರ್ಡಿಯನ್ ಆಗಿದ್ದಾರೆ ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. 
ದೆಹಲಿ ಹೈಕೋರ್ಟ್ ನ ಜಸ್ಟೀಸ್ ಜ್ಯೋತಿ ಸಿಂಗ್ ಅವರ ಪೀಠವು ಕರಿಷ್ಮಾ ಕಪೂರ್ ಮಕ್ಕಳಾದ ಸಮೈರಾ ಮತ್ತು ಕಿಯಾನಾ ಸಲ್ಲಿಸಿದ್ದ ಈ ಅರ್ಜಿಯನ್ನು ಇಂದು   ವಿಚಾರಣೆ ನಡೆಸಿದೆ. ಸಮೈರಾ ಮತ್ತು ಕಿಯಾನಾ ಅವರ  ಅರ್ಜಿಯನ್ನು ಪ್ರಿಯಾ ಸಚದೇವ್ ಪರ ವಕೀಲ ರಾಜೀವ್ ನಯ್ಯರ್ ತೀವ್ರವಾಗಿ ವಿರೋಧಿಸಿದ್ದಾರೆ.
 ಈ ಅರ್ಜಿಯು ವಿಚಾರಣೆಗೆ ಯೋಗ್ಯವಲ್ಲ. ಪ್ರಿಯಾ ಸಚ್ ದೇವ್ ಕಾನೂನು ಬದ್ದ ಪತ್ನಿ. ಸುಪ್ರೀಂಕೋರ್ಟ್ ವರೆಗೂ ಡಿವೋರ್ಸ್ ಕೇಸ್ ಹೋರಾಟ ನಡೆಸುವಾಗ ಪ್ರೀತಿ ಎಲ್ಲಿ ಹೋಗಿತ್ತು.  ನಿಮ್ಮ ಪತಿ ನಿಮ್ಮನ್ನು ಬಹಳಷ್ಟು ವರ್ಷಗಳ ಹಿಂದೆೆಯೇ ಬಿಟ್ಟಿದ್ದಾರೆ ಎಂದು ಪ್ರಿಯಾ ಸಚದೇವ್ ಪರ  ವಕೀಲ ರಾಜೀವ್ ನಯ್ಯರ್, ಕರಿಷ್ಮಾ ಕಪೂರ್ ಅವರನ್ನು ಉದ್ದೇಶಿಸಿ  ಹೇಳಿದ್ದಾರೆ. 
ಅರ್ಜಿದಾರರು ಕೋರ್ಟ್ ಗೆ ಸುಪ್ರೀಂಕೋರ್ಟ್ ನಲ್ಲಿ ನಡೆದ ಡಿವೋರ್ಸ್ ಕೇಸ್ ಬಗ್ಗೆ ತಿಳಿಸಬೇಕು. ಸಂಜಯ ಕಪೂರ್ ಸಾವನ್ನಪ್ಪಿದ್ದಾರೆ. ಸ್ವಲ್ಪ ಕನಿಕರ ತೋರಿಸಿ. ಪ್ರಿಯಾ ಸಚದೇವ್ ಈಗ ವಿಧವೆ. ಪ್ರಿಯಾ , ಸಂಜಯ್ ಕಪೂರ್ ಕೊನೆಯದಾಗಿ ಮದುವೆಯಾಗಿದ್ದ  ಹೆಂಡತಿ. ಕರಿಷ್ಮಾ ಕಪೂರ್ ಎಲ್ಲಿದ್ದರು?  ಕರಿಷ್ಮಾಳನ್ನು ಸಂಜಯ್ ಬಹಳಷ್ಟು ವರ್ಷಗಳ ಹಿಂದೆಯೇ ಬಿಟ್ಟುಬಿಟ್ಟಿದ್ದರು ಎಂದು ವಕೀಲ ರಾಜೀವ್ ನಯ್ಯರ್ ವಾದಿಸಿದ್ದರು. 

KARISHMA AND PRIAYA LEGAL FIGHT03

ಪ್ರಿಯಾ ಸಚದೇವ್ ಮತ್ತು ಕರಿಷ್ಮಾ ಕಪೂರ್


ಈಗಾಗಲೇ 1,900 ಕೋಟಿ ರೂ. ಆಸ್ತಿ ನೀಡಲಾಗಿದೆ ಎಂದ ಪ್ರಿಯಾ ಸಚದೇವ್‌’

ಈಗಾಗಲೇ ಕರಿಷ್ಮಾ ಕಪೂರ್ ಮಕ್ಕಳಿಗೆ ಆರ್‌.ಕೆ.ಫ್ಯಾಮಿಲಿ ಟ್ರಸ್ಟ್ ಮೂಲಕ 1,900 ಕೋಟಿ ರೂಪಾಯಿ ಆಸ್ತಿ ನೀಡಲಾಗಿದೆ.  ಬಹಳಷ್ಟು ಗೋಳಾಡುತ್ತಿದ್ದಾರೆ. ಅರ್ಜಿದಾರರು ಟ್ರಸ್ಟ್ ನಡಿ 1,900 ಕೋಟಿ ರೂಪಾಯಿ ಆಸ್ತಿ ಪಡೆದಿದ್ದಾರೆ. ಎಷ್ಟು ಸಾಕಾಗುತ್ತೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಪ್ರಿಯಾ ಸಚ್ ದೇವ್ , ಹೈಕೋರ್ಟ್  ನಲ್ಲಿ ಹೇಳಿದ್ದಾರೆ. ಕರಿಷ್ಮಾ ಕಪೂರ್ ಹಾಗೂ ಅವರ ಮಕ್ಕಳನ್ನು  ಬೀದಿಯಲ್ಲಿ ಬಿಟ್ಟುಬಿಟ್ಟಿಲ್ಲ. ನಾನು ವಿಧವೆಯಾಗಿದ್ದು, ನನಗೆ 6 ವರ್ಷದ ಮಗನಿದ್ದಾನೆ. 15 ವರ್ಷಗಳ ಕಾಲ  ಇವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಎಂದು ಪ್ರಿಯಾ ಸಚದೇವ್,  ಕರಿಷ್ಮಾ ವಿರುದ್ಧ ಕಿಡಿಕಾರಿದ್ದಾರೆ. 


ಆದರೇ, ಸಿವಿಲ್ ಅರ್ಜಿಯಲ್ಲಿ ಪ್ರಿಯಾ ಸಚದೇವ್ , ಸಂಜಯ್ ಕಪೂರ್ ವಿಲ್ ಅನ್ನು ಪೋರ್ಜರಿ ಮಾಡಿದ್ದಾರೆ. ಆಸ್ತಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ವಿಲ್ ಪೋರ್ಜರಿ ಮಾಡಿದ್ದಾರೆ ಎಂದು ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಕರಿಷ್ಮಾ ಕಪೂರ್ ಹೇಳಿದ್ದಾರೆ. 
ಇನ್ನೂ ಅರ್ಜಿದಾರರಾದ ಸಮೈರಾ ಮತ್ತು ಕಿಯಾನಾ ಪರವಾಗಿ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಹೈಕೋರ್ಟ್ ಗೆ ಹಾಜರಾಗಿ ವಾದ ಮಂಡಿಸಿದ್ದರು. ಕರಿಷ್ಮಾ ಕಪೂರ್ ಹಾಗೂ ಮಕ್ಕಳು, ಪ್ರಿಯಾ ಕಪೂರ್ ಅನ್ನು ವಿಲ್ ಬಗ್ಗೆ ವಿಚಾರಿಸಿದ್ದಾರೆ. ನಿರಂತರವಾಗಿ ಯಾವುದೇ ವಿಲ್ ಬರೆದಿಲ್ಲ ಎಂದು ಹೇಳಿದ್ದಾರೆ. ಕೆಲ ಆಸ್ತಿಗಳು ಟ್ರಸ್ಟ್ ಹೆಸರಿನಲ್ಲಿವೆ. ಕೆಲ ಸಮಯದ ನಂತರ, ಸಭೆ ಮತ್ತು ಸಮಾಲೋಚನೆಗಳು ಹಾಲಿ ಮತ್ತು ಮಾಜಿ ಪತ್ನಿಯರ ನಡುವೆ ನಡೆದಿದೆ. ಬಳಿಕ ಟ್ರಸ್ಟ್ ನಲ್ಲಿ ಏನಿದೆ ಎಂಬುದರ ಬಗ್ಗೆ ದೆಹಲಿಯ ತಾಜ್ ಮಾನಸಿಂಗ್ ಹೋಟೇಲ್ ನಲ್ಲಿ  ಸಭೆ ನಡೆಸಲು ನಿರ್ಧರಿಸಿದ್ದಾರೆ. 

ಮೊದಲು ನಮಗೆ ಯಾವುದೇ ವಿಲ್  ಅನ್ನು ಸಂಜಯ್ ಕಪೂರ್ ಬರೆದಿಲ್ಲ ಎಂದು ಪ್ರಿಯಾ ಕಪೂರ್ ತಿಳಿಸಿದ್ದರು. ಆದರೇ, ಸಡನ್ ಆಗಿ ಜುಲೈ 30 ರಂದು ಆರ್‌.ಕೆ.ಫ್ಯಾಮಿಲಿ ಟ್ರಸ್ಟ್ ಸಭೆಯಲ್ಲಿ ದಿವಂಗತ ಸಂಜಯ ಕಪೂರ್ ವಿಲ್ ಬರೆದಿದ್ದಾರೆ ಎಂದು ಹೇಳಿದ್ದಾರೆ. 
ಪ್ರಿಯಾ ಸಚದೇವ್ ಅವರ ಜೊತೆ ಇರುವ ದಿನೇಶ್ ಅಗರವಾಲ್ ಮತ್ತು ನಿತಿನ್ ಶರ್ಮಾ, ವಿವಾದಾತ್ಮಕ ವಿಲ್ ಅನ್ನು ಏಳು ವಾರಗಳ ಕಾಲ ಮುಚ್ಚಿಟ್ಟಿದ್ದು, ಜುಲೈ 30ರ ಸಭೆಯಲ್ಲಿ ಅದರ ಬಗ್ಗೆ ತಿಳಿಸಿದ್ದಾರೆ. 
ಕರಿಷ್ಮಾ ಕಪೂರ್ ಅವರ ಅಪ್ರಾಪ್ತ ಮಕ್ಕಳು, ಕ್ಲಾಸ್ ಒನ್  ಉತ್ತರಾಧಿಕಾರಿಗಳು. ಸಂಜಯ ಕಪೂರ್ ಅಂತ್ಯಸಂಸ್ಕಾರದ ಒಂದು ದಿನ ಮುನ್ನ ಪ್ರಿಯಾ ಸಚದೇವ್ ರನ್ನು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಿಸಲಾಗಿದೆ.  ಕಂಪನಿಯೇ ಟ್ರಸ್ಟ್ ಅನ್ನು ನಿಯಂತ್ರಿಸುತ್ತೆ. 
ಪೋರ್ಜರಿಯಾದ ವಿಲ್ ರಿಜಿಸ್ಟರ್ ಕೂಡ ಆಗಿಲ್ಲ ಎಂದು ಕರಿಷ್ಮಾ ಕಪೂರ್ ಮಕ್ಕಳ ಪರ ವಕೀಲ ಮಹೇಶ್ ಜೇಠ್ಮಲಾನಿ ವಾದಿಸಿದ್ದರು. 
ಆಗ ಪ್ರತಿಕ್ರಿಯಿಸಿದ ಪ್ರಿಯಾ ಸಚದೇವ್ ಪರ ವಕೀಲ ರಾಜೀವ್ ನಯ್ಯರ್, ವಿಲ್  ಅನ್ನು ರಿಜಿಸ್ಟರ್ ಮಾಡಿಸಬೇಕೆಂದು ಸುಪ್ರೀಂಕೋರ್ಟ್ ಹೇಳಿಲ್ಲ ಎಂದು ವಾದಿಸಿದ್ದರು.

KARISHMA AND PRIAYA LEGAL FIGHT02


 ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್ ನ ಜಸ್ಟೀಸ್ ಜ್ಯೋತಿ ಸಿಂಗ್ ಅವರು  ವಿಲ್ ನ ಪ್ರತಿಯನ್ನ ನೀವು ಏಕೆ ಮಕ್ಕಳಿಗೆ ಕೊಡುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ವಿಲ್ ಎಲ್ಲಿದೆ? ಅದನ್ನು ಕೋರ್ಟ್ ಗೆ ಕೊಡಿ ಎಂದು ಜಸ್ಟೀಸ್ ಜ್ಯೋತಿ ಸಿಂಗ್ ಕೇಳಿದ್ದರು.
ಕರಿಷ್ಮಾ ಕಪೂರ್ ಮಕ್ಕಳು ಸಲ್ಲಿಸಿರುವ ಸಿವಿಲ್ ಅರ್ಜಿಯ ಬಗ್ಗೆ ಪ್ರತಿವಾದಿಗಳಾದ ಪ್ರಿಯಾ ಸಚದೇವ್, ಸಂಜಯ ಕಪೂರ್ ತಾಯಿ ರಾಣಿ ಕಪೂರ್ ಗೆ ನೋಟೀಸ್ ನೀಡಲು ಹೈಕೋರ್ಟ್ ಆದೇಶಿಸಿದೆ.  ನೋಟೀಸ್ ಗೆ ಉತ್ತರಿಸಿದ ಬಳಿಕ ಮರು ಪ್ರತಿಕ್ರಿಯೆ ಸಲ್ಲಿಸಲು ಕರಿಷ್ಮಾ ಕಪೂರ್ ಮಕ್ಕಳಿಗೆ ಸೂಚಿಸಿದೆ. ಜೊತೆಗೆ ಪ್ರತಿವಾದಿ 1 ಆಗಿರುವ ಪ್ರಿಯಾ ಸಚದೇವ್,  ತಮಗೆ ಗೊತ್ತಿರುವ ಎಲ್ಲ ಸ್ಥಿರ ಮತ್ತು ಚರ ಆಸ್ತಿಗಳ ಪಟ್ಟಿಯನ್ನು ಹೈಕೋರ್ಟ್ ಗೆ ಸಲ್ಲಿಸಲು ಸೂಚಿಸಿದೆ. ಜೂನ್ 12 ರವರೆಗೆ ಗೊತ್ತಿರುವ ಎಲ್ಲ ಆಸ್ತಿಗಳ ಪಟ್ಟಿ ಸಲ್ಲಿಸಲು ಹೈಕೋರ್ಟ್, ಪ್ರಿಯಾ ಸಚದೇವ್ ಗೆ ಸೂಚಿಸಿದೆ. ಆಕ್ಟೋಬರ್ 9 ರಂದು ಮುಂದಿನ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಲಿದೆ. 
ಇನ್ನೂ ಸಂಜಯ ಕಪೂರ್ ತಾಯಿ ರಾಣಿ ಕಪೂರ್ ಕೂಡ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. 30 ಸಾವಿರ ಕೋಟಿ ರೂಪಾಯಿ ಆಸ್ತಿಯಲ್ಲಿ 10 ಸಾವಿರ ಕೋಟಿ ರೂಪಾಯಿ ಆಸ್ತಿ ತನಗೆ ಸೇರಬೇಕೆಂದು ತಾಯಿ ರಾಣಿ ಕಪೂರ್ ಅರ್ಜಿಯಲ್ಲಿ ಹೇಳಿದ್ದಾರೆ.  ಪ್ರಿಯಾ ಕಪೂರ್‌ಗೆ ವಿಲ್ ಅನ್ನು ನೀಡಬೇಕೆಂದು ಪದೇ ಪದೇ ಇ ಮೇಲ್ ಮಾಡಿದರೂ ಯಾವುದೇ ಉತ್ತರ ಕೊಟ್ಟಿಲ್ಲ. ವಿಲ್ ಪ್ರತಿಯನ್ನು ನೀಡಿಲ್ಲ ಎಂದು ಸಂಜಯ ತಾಯಿ ರಾಣಿ ಕಪೂರ್ ಹೇಳಿದ್ದಾರೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

karishma kapoor and priya sachdev property fight
Advertisment