/newsfirstlive-kannada/media/media_files/2025/09/24/swami-chaitanyanda-saraswathi-swamiji-2025-09-24-12-42-17.jpg)
ಸ್ವಾಮಿ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ
ದೆಹಲಿಯ ಪ್ರತಿಷ್ಠಿತ ಆಶ್ರಮದ ಸ್ವಾಮೀಜಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.
ದೆಹಲಿಯ ವಸಂತಕುಂಜ್ ಪ್ರದೇಶದಲ್ಲಿರುವ ನಮ್ಮ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರು ಶೃಂಗೇರಿ ಶಾರದಾ ಪೀಠಕ್ಕೆ ಸೇರಿದ ಶಿಕ್ಷಣ ಸಂಸ್ಥೆ ಹಾಗೂ ಆಶ್ರಮದ ನಿರ್ದೇಶಕನಾಗಿದ್ದ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥ ಸರಸ್ವತಿ ಸ್ವಾಮೀಜಿ ವಿರುದ್ದ ಡಜನ್ ಗೂ ಹೆಚ್ಚು ವಿದ್ಯಾರ್ಥಿನಿಯರು ಗಂಭೀರ ಆರೋಪ ಮಾಡಿದ್ದಾರೆ. ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥ ಸರಸ್ವತಿ ಸ್ವಾಮೀಜಿ ಅವರು ಶ್ರೀ ಶಾರದಾ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸಂಸ್ಥೆಯ ನಿರ್ದೇಶಕರಾಗಿದ್ದರು. ಈ ಸಂಸ್ಥೆಯು ನಮ್ಮ ಕರ್ನಾಟಕದ ಶೃಂಗೇರಿ ಶಾರದಾ ಪೀಠದ ಸಂಸ್ಥೆಯಾಗಿದೆ.
ಮ್ಯಾನೇಜ್ ಮೆಂಟ್ ಸಂಸ್ಥೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಶ್ರೀ ಶಾರದಾ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್‌ನ 17 ವಿದ್ಯಾರ್ಥಿನಿಯರು ಸಂಸ್ಥೆಯ ನಿರ್ದೇಶಕರಾಗಿರುವ ಸ್ವಾಮಿ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಆರೋಪ ಮಾಡಿದ್ದಾರೆ. ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದಾರೆಂದು 17 ವಿದ್ಯಾರ್ಥಿನಿಯರು ಸ್ವಾಮೀಜಿ ವಿರುದ್ಧ ಹೇಳಿಕೆ ದಾಖಲು ಮಾಡಿದ್ದಾರೆ.
ವಿದ್ಯಾರ್ಥಿನಿಯರನ್ನು ನಿಂದಿಸುತ್ತಾರೆ, ಆಶ್ಲೀಲ, ಅಸಭ್ಯ ಮೇಸೇಜ್ ಕಳಿಸುತ್ತಾರೆ. ದೈಹಿಕ ಸಂಪರ್ಕಕ್ಕೆ ಬಲವಂತ ಮಾಡಿದ್ದಾರೆಂದು ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ. ಕಾಲೇಜಿನ ಮಹಿಳಾ ಪ್ರಾಧ್ಯಾಪಕಕು, ಸಿಬ್ಬಂದಿಯಿಂದ ಕೂಡ ಸ್ವಾಮೀಜಿ ಬೇಡಿಕೆ ಈಡೇರಿಸಲು ವಿದ್ಯಾರ್ಥಿನಿಯರ ಮೇಲೆ ಒತ್ತಡ ಹಾಕಲಾಗಿದೆಯಂತೆ. ವಿದ್ಯಾರ್ಥಿನಿಯರ ದೂರಿನ ಆಧಾರದ ಮೇಲೆ ವಸಂತ್ ಕುಂಜ್ ಪೊಲೀಸ್ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಡಿಸಿಪಿ ಅಮಿತ್ ಗೋಯಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ದೂರು ದಾಖಲಾದ ಮೇಲೆ ದೆಹಲಿಯ ಪೊಲೀಸರು ಆಶ್ರಮಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ವಿಶ್ಲೇಷಣೆ ನಡೆಸಿದ್ದಾರೆ. ಆಶ್ರಮದ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ. ಆದರೇ, ಸ್ವಾಮಿ ಚೈತನ್ಯಾನಂದ ಸ್ವಾಮೀಜಿ ಪರಾರಿಯಾಗಿದ್ದಾರೆ. ಕೊನೆಯ ಭಾರಿಗೆ ಸ್ವಾಮೀಜಿ ಉತ್ತರ ಪ್ರದೇಶದ ಆಗ್ರಾ ಬಳಿ ಅವರ ಪೋನ್ ಲೋಕೇಷನ್ ಇತ್ತು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ಪೊಲೀಸ್ ತಂಡಗಳು ಆರೋಪಿಗಳಿಗಾಗಿ ಹುಡುಕಾಟ ನಡೆಸಿವೆ.
ಇನ್ನೂ ಆಶ್ರಮದ ಮೇಲೆ ಪೊಲೀಸರು ರೇಡ್ ಮಾಡಿದಾಗ, ಬೇಸ್ ಮೆಂಟ್ ನಲ್ಲಿ ವೋಲ್ವೋ ಕಾರ್ ಪತ್ತೆಯಾಗಿದೆ. ಆದರೇ, ವೋಲ್ವೋ ಕಾರಿಗೆ ರಾಜತಾಂತ್ರಿಕರ ಕಾರಿನ ನಂಬರ್ ಪ್ಲೇಟ್ ಅನ್ನು ಅಕ್ರಮವಾಗಿ ಬಳಕೆ ಮಾಡಲಾಗಿದೆ. ಹೀಗಾಗಿ ಕಾರ್ ಅನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಸ್ವಾಮಿ ಚೈತನ್ಯಾನಂದ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ಬಳಿಕ ಆಶ್ರಮದ ಆಡಳಿತ ಮಂಡಳಿಯು, ಸ್ವಾಮಿ ಚೈತನ್ಯಾನಂದ ಸ್ವಾಮೀಜಿಯನ್ನು ಹುದ್ದೆಯಿಂದ ತೆಗೆದು ಹಾಕಿದೆ.
ಕರ್ನಾಟಕದ ಶೃಂಗೇರಿಯ ದಕ್ಷಿಣಮನಯ ಶ್ರೀ ಶಾರದಾ ಪೀಠವು ದೆಹಲಿಯ ಈ ಆಶ್ರಮವನ್ನು ನಡೆಸುತ್ತಿದೆ. ಇನ್ನೂ ಶೃಂಗೇರಿಯ ಶಾರದಾ ಪೀಠವು ಈ ಬಗ್ಗೆ ಹೇಳಿಕೆ ನೀಡಿದ್ದು, ಸ್ವಾಮಿ ಚೈತನ್ಯಾನಂದ ಸರಸ್ವತಿ ಸ್ವಾಮೀಜಿಯ ವರ್ತನೆ, ಚಟುವಟಿಕೆಗಳು ಸೂಕ್ತವಾಗಿಲ್ಲ, ಕಾನೂನು ಬಾಹಿರ, ಪೀಠದ ಹಿತಾಸಕ್ತಿಗೆ ವಿರುದ್ಧವಾಗಿವೆ. ಹೀಗಾಗಿ ಸ್ವಾಮಿ ಚೈತನ್ಯಾನಂದ ಸರಸ್ವತಿ ಸ್ವಾಮೀಜಿಯ ಜೊತೆಗಿನ ಎಲ್ಲ ಸಂಬಂಧಗಳನ್ನು ಪೀಠವು ಕಡಿದುಕೊಂಡಿದೆ ಎಂದು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.