50 ಲಕ್ಷ ರೂ. ಖರ್ಚು ಮಾಡಿ ಮದುವೆ, ಪತಿಗೆ 10 ಲಕ್ಷ, ನಮ್ಮ ಮಗಳಿಗೆ ಆದ ತರ ಬೇರೆ ಹೆಣ್ಮಕ್ಕಳಿಗೆ ಆಗಬಾರದು ಎಂದ ಶಿಲ್ಪಾ ತಾಯಿ

ಬೆಂಗಳೂರಿನ ಪ್ರವೀಣ್ ಜೊತೆ ಶಿಲ್ಪಾಳನ್ನು 50 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಲಾಗಿತ್ತು. ಶಿಲ್ಪಾ ಬಿ.ಟೆಕ್ ಪದವಿಧರೆ, ಇನ್ಪೋಸಿಸ್ ಕಂಪನಿಯಲ್ಲಿ ಉದ್ಯೋಗಿ. ಆದರೇ, ಪತಿ ಪ್ರವೀಣ್ ಎಂಟೆಕ್ ಓದಿರುವುದಾಗಿ ಸುಳ್ಳು ಹೇಳಿದ್ದ. ಪಾನಿಪೂರಿ ಮಾರುತ್ತಿದ್ದ ಎಂದು ಶಿಲ್ಪಾ ಪೋಷಕರು ಹೇಳಿದ್ದಾರೆ.

author-image
Chandramohan
BANGALORE DOWRY DEATH03

ಮದುವೆ ವೇಳೆ ಶಿಲ್ಪಾ ಪತಿ ಪ್ರವೀಣ್ ಜೊತೆ ಇರುವ ಪೋಟೋ

Advertisment
  • 50 ಲಕ್ಷ ರೂ ಖರ್ಚು ಮಾಡಿ ಮದುವೆ, ಪತಿಗೆ 10 ಲಕ್ಷ ರೂ ನೀಡಿಕೆ
  • ಶಿಲ್ಪಾ ಬಿಟೆಕ್ ಪದವಿಧರೆ, ಇನ್ಪೋಸಿಸ್ ನಲ್ಲಿ ಉದ್ಯೋಗಿ
  • ಪತಿ ಪ್ರವೀಣ್ ಪಾನಿಪೂರಿ ಮಾರುತ್ತಿದ್ದ ಎಂದ ಶಿಲ್ಪಾ ಪೋಷಕರು

ಬೆಂಗಳೂರಿನ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಿಲ್ಪಾ ಎಂಬಾಕೆ ನೇಣಿಗೆ ಕೊರಳೊಡ್ಡಿದ್ದಾರೆ. ಮೃತ ಶಿಲ್ಪಾ ಬಿ.ಟೆಕ್ ಓದಿದ್ದರು. ಬೆಂಗಳೂರಿನ ಪ್ರತಿಷ್ಠಿತ ಇನ್ಪೋಸಿಸ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಆದರೇ, ಪತಿ ಪ್ರವೀಣ್ ಹಣದಾಹಕ್ಕೆ ಬಲಿಯಾಗಿದ್ದಾರೆ. 
ಪ್ರವೀಣ್ ಹಾಗೂ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಶಿಲ್ಪಾ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪತಿ ಪ್ರವೀಣ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. 
ಪ್ರವೀಣ್- ಶಿಲ್ಪಾ ಮೂರು ವರ್ಷದ ಹಿಂದೆ ವಿವಾಹವಾಗಿದ್ದರು. ಇವರ ದಾಂಪತ್ಯಕ್ಕೆ ಒಂದೂವರೆ ವರ್ಷದ ಗಂಡು ಮಗು ಇದೆ.  ಇನ್ನೂ ಮೃತ ಶಿಲ್ಪಾ  ಒಂದುವರೆ ತಿಂಗಳ ಗರ್ಭಿಣಿ ಎಂಬ ಮಾಹಿತಿಯೂ ಲಭ್ಯವಾಗಿದೆ. 
ಶಾರದ ಬಸಯ್ಯ ಎಂಬುವವರಿಗೆ ಮೂರು ಜನ ಮಕ್ಕಳ ಪೈಕಿ ಹಿರಿಯ ಮಗಳು ಶಿಲ್ಪಾ. ಪ್ರವೀಣ್ ಎಂಬಾತನಿಗೆ ಶಿಲ್ಪಾಳನ್ನ  ಪೋಷಕರು  ಮದುವೆ ಮಾಡಿಕೊಟ್ಟಿದ್ದರು. 
ಶಿಲ್ಪಾ ಪೋಷಕರು ಮೂಲತಃ ಹುಬ್ಬಳಿಯವರು.  20 ವರ್ಷದ ಹಿಂದೆ  ಶಿಲ್ಪಾ ಕುಟುಂಬಸ್ಥರು ಬೆಂಗಳೂರಿಗೆ  ಬಂದಿದ್ದರು . ಕಳೆದ ಮೂರು ವರ್ಷದ ಹಿಂದಷ್ಟೇ ಶಿಲ್ಪಾ ಹಾಗೂ ಪ್ರವೀಣ್ ನಡುವೆ ಮದುವೆ ನಡೆದಿತ್ತು. ಬಿ.ಟೆಕ್ ಮುಗಿಸಿದ್ದ ಶಿಲ್ಪಾ ಇನ್ಫೋಸಿಸ್  ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೂರು  ವರ್ಷಗಳ ಹಿಂದೆ 50 ಲಕ್ಷ  ರೂಪಾಯಿ ಖರ್ಚು ಮಾಡಿ ಶಿಲ್ಪಾ ಪೋಷಕರು ಮದುವೆ ಮಾಡಿಕೊಟ್ಟಿದ್ದರು. 
ಪತಿ ಪ್ರವೀಣ್ ಹಾಗೂ ಅತ್ತೆ ಶಾಂತ ಹಾಗೂ ನಾದಿನಿ ಪ್ರಿಯಾ ಎಂಬುವವರ ಮೇಲೆ ಈಗ ಕಿರುಕುಳದ  ಆರೋಪ ಮಾಡಲಾಗುತ್ತಿದೆ.  ಹಲವು ಬಾರಿ ರಾಜಿ ಪಂಚಾಯ್ತಿಯನ್ನು ಶಿಲ್ಪಾ ಕುಟುಂಬಸ್ಥರು ಮಾಡಿದ್ದರು.  ಮೂರು ತಿಂಗಳ ಹಿಂದೆ ಗಲಾಟೆ ನಡೆದು ಶಿಲ್ಪಾ ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದರು. ಸಣ್ಣಪುಟ್ಟ ವಿಚಾರಕ್ಕೂ ಪತಿ  ಪ್ರವೀಣ್ ಗಲಾಟೆ ಮಾಡುತ್ತಿದ್ದರಂತೆ. ಬಳಿಕ ಪ್ರವೀಣ್ ಕುಟುಂಬಸ್ಥರೇ,  ರಾಜಿ ಪಂಚಾಯ್ತಿ ಮಾಡಿ ಶಿಲ್ಪಾಳನ್ನು ತವರು ಮನೆಯಿಂದ ತಮ್ಮ ಮನೆಗೆ ವಾಪಸ್ ಕರೆದುಕೊಂಡು ಹೋಗಿದ್ದರು. ಆದರೆ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಶಿಲ್ಪಾ ಪೋಷಕರಿಗೆ ಕರೆ ಮಾಡಿದ್ರು. ಸದ್ಯ ಶಿಲ್ಪಾ ಕುಟುಂಬಸ್ಥರ ದೂರಿನನ್ವಯ ಪತಿ ಪ್ರವೀಣ್ ನನ್ನು  ಸದ್ದುಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. 

BANGALORE DOWRY DEATH04

ಮದುವೆ ಪೋಟೋ ಹಾಗೂ ಪೊಲೀಸರಿಗೆ ನೀಡಿರುವ ದೂರಿನ ಪ್ರತಿ

ಮದುವೆಗೆ 50 ಲಕ್ಷ ರೂಪಾಯಿ ಖರ್ಚು
ಪತಿಗೆ 10 ಲಕ್ಷ ರೂಪಾಯಿ ಹಣ ನೀಡಿದ್ದ ಶಿಲ್ಪಾ ಪೋಷಕರು

ಮೂರು ವರ್ಷದ ಹಿಂದೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದೇವು. ಮನೆ ಮಾರಿದ 40  ಲಕ್ಷ  ರೂಪಾಯಿ ಹಣವನ್ನು  ಮದುವೆಗೆ ಖರ್ಚು ಮಾಡಿದ್ದೇವು. 160 ಗ್ರಾಂ ಚಿನ್ನಾಭರಣ ಮದುವೆ ಸಂದರ್ಭದಲ್ಲಿ ಆತನಿಗೆ ಕೊಟ್ಟಿದ್ದೇವು.  ಕಳೆದ ಕೆಲ ತಿಂಗಳ ಹಿಂದೆ ಕೂಡ 10 ಲಕ್ಷ ಹಣ ಪಡೆದುಕೊಂಡಿದ್ದ. ಈಗ ಒಂದೂವರೆ ವರ್ಷದ ಮಗು ಇದೆ ಮತ್ತು ಆಕೆ ಈಗ ಗರ್ಭಿಣಿಯಾಗಿದ್ದಳು ಎಂದು ಮೃತ ಶಿಲ್ಪಾ ಚಿಕ್ಕಪ್ಪ ಚನ್ನಬಸಯ್ಯ ಹೇಳಿದ್ದಾರೆ. 
ಮದುವೆ ಸಂದರ್ಭದಲ್ಲಿ ಹುಡುಗ ಪ್ರವೀಣ್ ತಾನು  ಬಿಇ, ಎಂಟೆಕ್ ಓದಿರುವುದಾಗಿ ಹೇಳಿಕೊಂಡಿದ್ದ. ಆದರೆ ಕಳೆದ ಎರಡು ವರ್ಷದಿಂದ ಪಾನಿಪುರಿ ಮಾರುತ್ತಿದ್ದಾನೆ. ನಮ್ಮ ಮಗಳು ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದಳು. ಮನೆಯಲ್ಲಿ ಫ್ಯಾನ್ ಕೆಳಗೆ ಯಾವುದೇ ಕುರ್ಚಿ ಏನು ಇರಲಿಲ್ಲ.  ಸಾಮಾನ್ಯರಿಗೆ ಎಟುಕುವ ಹೈಟ್ ನಲ್ಲಿ ಕೂಡ ಫ್ಯಾನ್ ಇರಲಿಲ್ಲ. ಡೋರ್ ಕೂಡ ಒಡೆದ ಯಾವುದೇ ಗುರುತುಗಳು ಪತ್ತೆಯಾಗಿಲ್ಲ ಎಂದು ಮೃತ ಶಿಲ್ಪಾ ಚಿಕ್ಕಪ್ಪ ಚನ್ನಬಸಯ್ಯ ಹೇಳಿದ್ದಾರೆ. 
ಫೋನ್ ಮಾಡಿದ್ರು ಹಾರ್ಟ್ ಅಟ್ಯಾಕ್ ಆಗಿದೆ ಅಂತ ಹೇಳಿದ್ರು. ಗಂಡನ ಮನೆಯಲ್ಲಿ ನಮ್ಮ ಮಗಳಿಗೆ ಪ್ರತಿನಿತ್ಯ ಕಿರುಕುಳ ಕೊಡ್ತಾ ಇದ್ದರು.  ಇತ್ತೀಚೆಗೆ 10 ಲಕ್ಷ ದುಡ್ಡು ಕೂಡ ಅವರಿಗೆ ಕೊಟ್ಟಿದ್ದೇವು.  ಪ್ರತಿನಿತ್ಯ ಕಿರುಕುಳ ಕೊಡ್ತಾರೆ ಅಂತ ಶಿಲ್ಪಾ  ಫೋನ್ ಮಾಡುತ್ತಿದ್ದಳು.  ಅಳಿಯ ಮೂರು ತಿಂಗಳಿಂದ ನನ್ನ ಜೊತೆ ಮಾತಾಡ್ತಾ ಇರಲಿಲ್ಲ. ಘಟನೆ ಆದಾಗ ಅವರ ಮನೆಯವರು ಯಾರೂ ಸಹ ಇರಲಿಲ್ಲ. ದೂರು ಕೊಡಬೇಡ ಅಂತ ಹೇಳಿ ನಮಗೆ ಕೇಳಿಕೊಳ್ತಿದ್ರು. ನಮ್ಮ ಮಗಳ ಸಾವಿಗೆ ನ್ಯಾಯ ಬೇಕು. ಎರಡು ತಿಂಗಳಲ್ಲಿ ಇನ್ನೊಂದು ಮದುವೆಯಾಗಿ ಅವನು ಚೆನ್ನಾಗಿರುತ್ತಾನೆ. ಆದರೆ ನಮ್ಮ ಮಗಳ ಸಾವಿಗೆ ನ್ಯಾಯ ಬೇಕು. ಬೇರೆ ಹೆಣ್ಣು ಮಕ್ಕಳಿಗೆ ಈತರ ಆಗಬಾರದು ಎಂದು ಮೃತ ಶಿಲ್ಪಾ ತಾಯಿ ಶಾರದಾ ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Dowry
Advertisment