/newsfirstlive-kannada/media/media_files/2025/10/06/cji-br-gavai-2025-10-06-13-47-04.jpg)
ಸಿಜೆಐ ಬಿ.ಆರ್.ಗವಾಯಿ ಮೇಲೆ ಶೂ ಎಸೆಯಲು ಯತ್ನ
ಸುಪ್ರೀಂಕೋರ್ಟ್ ನಲ್ಲಿ ಇಂದು ಶಾಕಿಂಗ್ ಘಟನೆಯೊಂದು ನಡೆದಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ವಕೀಲನೊಬ್ಬ ಯತ್ನಿಸಿದ್ದಾನೆ. ವಕೀಲ ಕಿಶೋರ್ ರಾಕೇಶ್ ಎಂಬುವವರು ಸಿಜೆಐ ಬಿ.ಆರ್.ಗವಾಯಿ ಮೇಲೆ ಶೂ ಎಸೆದಿದ್ದಾರೆ. ಇಂದು ಬೆಳಿಗ್ಗೆ ಮೊದಲ ಕೇಸ್ ನ ವಿಚಾರಣೆಯನ್ನು ಸಿಜೆಐ ಆರಂಭಿಸುತ್ತಿದ್ದಂತೆ, ವಕೀಲ ಕಿಶೋರ್ ರಾಕೇಶ್ ಸಿಜೆಐ ಮೇಲೆ ಶೂ ಎಸೆದಿದ್ದಾರೆ. ಆದರೇ, ಶೂ ಸಿಜೆಐ ಮೇಲೆ ಬಿದ್ದಿಲ್ಲ. ಶೂ, ಸಿಜೆಐ ಅವರ ಬೆಂಚ್ ಮೇಲೆ ಬಿದ್ದಿದೆ. ತಕ್ಷಣವೇ ಎಚ್ಚೆತ್ತ ಕೋರ್ಟ್ ಹಾಲ್ ನಲ್ಲಿದ್ದ ಸುಪ್ರೀಂಕೋರ್ಟ್ ನ ಭದ್ರತಾ ಸಿಬ್ಬಂದಿ. ಶೂ ಎಸೆದ ಕಿಶೋರ್ ರಾಕೇಶ್ ನನ್ನು ವಶಕ್ಕೆ ಪಡೆದಿದ್ದಾರೆ.
ಶೂ ಎಸೆದ ಕಿಶೋರ್ ರಾಕೇಶ್, ಸನಾತನ ಧರ್ಮಕ್ಕೆ ಅಪಮಾನ ಆಗುವುದನ್ನು ಸಹಿಸಲ್ಲ ಎಂದು ಘೋಷಣೆ ಕೂಗಿದ್ದಾರೆ ಎಂದು ಕೋರ್ಟ್ ಹಾಲ್ ನಲ್ಲಿದ್ದ ವಕೀಲರು ಹೇಳಿದ್ದಾರೆ.
ಇನ್ನೂ ಈ ಘಟನೆಯಿಂದ ತಾವು ವಿಚಲಿತರಾಗಿಲ್ಲ. ಇದ್ಯಾವುದು ನನ್ನ ಮೇಲೆ ಪರಿಣಾಮ ಬೀರಲ್ಲ. ವಕೀಲರು ತಮ್ಮ ವಾದ ಮಂಡನೆಯನ್ನು ಮುಂದುವರಿಸಿ ಎಂದು ಸಿಜೆಐ ಬಿ.ಆರ್.ಗವಾಯಿ ಕೋರ್ಟ್ ಹಾಲ್ ನಲ್ಲಿದ್ದ ವಕೀಲರಿಗೆ ಹೇಳಿದ್ದಾರೆ. ತಮ್ಮ ಎಂದಿನ ಕೋರ್ಟ್ ಕೇಸ್ ವಿಚಾರಣೆಯನ್ನು ಮುಂದುವರಿಸಿದ್ದಾರೆ.
ಇನ್ನೂ ಈ ಘಟನೆಯ ಬಗ್ಗೆ ಟ್ವೀಟರ್ ನಲ್ಲಿ ಟ್ವೀಟ್ ಮಾಡಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಈ ಘಟನೆಯನ್ನು ಎಲ್ಲರೂ ಖಂಡಿಸಬೇಕು. ಇದರ ಬಗ್ಗೆ ಸರಿಯಾದ ತನಿಖೆಯಾಗಬೇಕು. ಶೂ ಎಸೆದ ವಕೀಲರ ಹೆಸರು ಬಹಿರಂಗಪಡಿಸಬೇಕು. ಆ ವಕೀಲರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸುಪ್ರೀಂಕೋರ್ಟ್‌ನ ಎಲ್ಲ ಜಡ್ಜ್ ಗಳು ಸುಪ್ರೀಂಕೋರ್ಟ್ ಮೇಲೆ ನಡೆದ ಸೈದ್ದಾಂತಿಕ ದಾಳಿಯನ್ನು ಪತ್ರಿಕಾ ಹೇಳಿಕೆಯ ಮೂಲಕ ಖಂಡಿಸಬೇಕು. ಈ ದಾಳಿಯನ್ನು ಸಹಿಸಲ್ಲ ಎಂದು ಹೇಳಬೇಕು. ಸುಪ್ರೀಂಕೋರ್ಟ್ ಘನತೆಗೆ ತಕ್ಕಂತೆ ಸಿಜೆಐ ಈ ಘಟನೆಯಿಂದ ಡಿಸ್ಟರ್ಬ್ ಆಗದೇ ನ್ಯಾಯಾಂಗ ಕೆಲಸ ಮುಂದುವರಿಸಿದ್ದಾರೆ ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಟ್ವೀಟ್ ಮಾಡಿದ್ದಾರೆ.
ಇನ್ನೂ ಸಿಜೆಐ ಕೋರ್ಟ್ ಹಾರ್ ನಿಂದ ತಮ್ಮ ಚೇಂಬರ್ ಗೆ ಬಂದ ಬಳಿಕ ಆರೋಪಿ ವ್ಯಕ್ತಿಯ ವಿರುದ್ಧ ಏನ್ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸಲಾಗುತ್ತೆ.
ಈ ಹಿಂದೆ ಸುಪ್ರೀಂಕೋರ್ಟ್ ನಲ್ಲಿ ಕೆಲ ವಕೀಲರು ಕೆಲವು ಸಂದರ್ಭಗಳಲ್ಲಿ ವಿಚಾರಣೆ ನಡೆಯುವಾಗ ಕೆಲವೊಂದು ಘೋಷಣೆ ಕೂಗಿದ್ದಾರೆ. ಆದರೇ, ಯಾರೂ ಸಿಜೆ ಐ ಆಗಲೀ, ಬೇರೆ ಜಡ್ಜ್ ಗಳ ಮೇಲಾಗಲೀ ಶೂ ಎಸೆದಿರಲಿಲ್ಲ. ಈಗ ಮೊದಲ ಭಾರಿಗೆ ಶೂ ಎಸೆತದ ಘಟನೆ ನಡೆದಿದೆ.
ಹೀಗಾಗಿ ಈಗ ಆರೋಪಿ ವಕೀಲ ಕಿಶೋರ್ ರಾಕೇಶ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಸುಪ್ರೀಂಕೋರ್ಟ್ ನ ಘನತೆಯನ್ನು ರಕ್ಷಿಸಬೇಕು ಎಂಬ ಒತ್ತಾಯ ವಕೀಲ ಸಮುದಾಯದಿಂದ ಕೇಳಿ ಬಂದಿದೆ.
This requires a detailed investigation. The lawyer must be named and legal action taken against him . This appears to be a blatant casteist attack on the Supreme Court of India. It deserves to be condemned by all judges of the Supreme Court by a united press statement that… https://t.co/8sOY5Wip4e
— Indira Jaising (@IJaising) October 6, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ