/newsfirstlive-kannada/media/media_files/2025/08/09/modi-rakhi-2025-08-09-13-16-02.jpeg)
ಪ್ರಧಾನಿ ಮೋದಿಗೆ ರಾಖಿ ಕಟ್ಟಿದ ಶಾಲಾ ಮಕ್ಕಳು
ದೇಶದೆಲ್ಲೆಡೆ ಇಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಸೋದರಿಯರು ತಮ್ಮ ಸೋದರರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತಿದ್ದಾರೆ. ಸೋದರಿಯರು ಸಂಕಷ್ಟದಲ್ಲಿದ್ದಾಗ, ಸೋದರರು ಬಂದು ರಕ್ಷಿಸುತ್ತಾರೆ. ಈ ಪ್ರೀತಿಯ, ಸೋದರತ್ವ, ಭಾಂಧವ್ಯದ ಸಂಕೇತವಾಗಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ಎಲ್ಲೆಲ್ಲೂ ಇಂದು ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಪ್ರಧಾನಿ ನಿವಾಸದಿಂದ ಹಿಡಿದು ಹಳ್ಳಿಯ ಬಡವರ ಮನೆಯವರೆಗೂ ಎಲ್ಲೆಲ್ಲೂ ರಕ್ಷಾ ಬಂಧನ ಹಬ್ಬದ ಸಂಭ್ರಮ ಕಳೆಗಟ್ಟಿದೆ.
ಪ್ರಧಾನಿ ನಿವಾಸಕ್ಕೆ ದೆಹಲಿಯ ಶಾಲಾ ಮಕ್ಕಳು ಭೇಟಿ ನೀಡಿ ಪ್ರಧಾನಿ ಮೋದಿಗೆ ಸೋದರತ್ವದ ಸಂಕೇತವಾದ ರಾಖಿಯನ್ನು ಕಟ್ಟಿದ್ದರು. ಪ್ರಧಾನಿ ಮೋದಿ ಖುಷಿಯಿಂದ ಶಾಲಾ ಮಕ್ಕಳ ಜೊತೆ ಬೆರೆತು, ಮಾತನಾಡಿ ರಾಖಿ ಕಟ್ಟಿಸಿಕೊಂಡರು. ಮಕ್ಕಳಿಗೆ ಚಾಕಲೇಟ್ ಸೇರಿದಂತೆ ಗಿಫ್ಟ್ ನೀಡಿದ್ದರು. ಪ್ರಧಾನಿ ನಿವಾಸದ ರಕ್ಷಾ ಬಂಧನ ಹಬ್ಬದ ಪೋಟೋಗಳ ಝಲಕ್ ಇಲ್ಲಿದೆ ನೋಡಿ.
ಓರ್ವ ಬಾಲಕಿಯ ಮೋದಿಗೆ ರಾಖಿ ಕಟ್ಟಿದ ಬಳಿಕ ಮೋದಿ ಜೊತೆಗೆ ಆಟವಾಡಿದ್ದರು.
ಪ್ರಜಾಪಿತ ಬ್ರಹ್ಮಕುಮಾರಿ ಸಂಘಟನೆಯ ಸೋದರಿಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಮೋದಿ ಅವರಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದರು. ರಕ್ಷಾ ಬಂಧನದ ವೇಳೆ ಪ್ರತಿ ವರ್ಷವೂ ಮೋದಿ ಸೋದರಿಯರಿಂದ ರಾಖಿ ಕಟ್ಟಿಸಿಕೊಳ್ಳುತ್ತಾರೆ. ಇಂದು ಆ ಸಂಪ್ರದಾಯವನ್ನು ಮುಂದುವರಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಕೈ ತುಂಬ ಇಂದು ರಾಖಿಗಳು ತುಂಬಿದ್ದವು. ಬಣ್ಣ ಬಣ್ಣದ ರಾಖಿಗಳನ್ನು ಶಾಲಾ ಮಕ್ಕಳು, ಪ್ರಜಾಪಿತ ಬ್ರಹ್ಮಕುಮಾರಿ ಸೋದರಿಯರು ಕಟ್ಟಿದ್ದರು.