ನಾಲ್ಕು ಲಕ್ಷ ರೂಪಾಯಿ ಗಡಿ ದಾಟಿದ ಬೆಳ್ಳಿ ಬೆಲೆ! : ಚಿನ್ನದ ಬೆಲೆಯು ಇಂದು 10 ಸಾವಿರ ರೂಪಾಯಿ ಏರಿಕೆ!

ಬೆಳ್ಳಿ ಬೆಲೆಯು ಇಂದು ಸಾರ್ವಕಾಲಿಕ ಏರಿಕೆ ಕಂಡಿದೆ. ಇದೇ ಮೊದಲ ಭಾರಿಗೆ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 4 ಲಕ್ಷದ 10 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಇನ್ನೂ ಚಿನ್ನದ ಬೆಲೆಯು 10 ಗ್ರಾಂಗೆ 10 ಸಾವಿರ ರೂಪಾಯಿ ಏರಿಕೆಯಾಗಿದೆ. ಚಿನ್ನ, ಬೆಳ್ಳಿ ಬೆಲೆಗಳೆರಡೂ ದಾಖಲೆಯ ಏರಿಕೆ ಕಂಡಿವೆ.

author-image
Chandramohan
GOLD AND SILVER RATE
Advertisment

ಜಾಗತಿಕ ರಾಜಕೀಯ ಅನಿಶ್ಚಿತತೆ ಹಾಗೂ ಷೇರು ಮಾರುಕಟ್ಟೆ ಕುಸಿತದ ಪರಿಣಾಮ ಸುರಕ್ಷಿತ ಹೂಡಿಕೆಯಾದ ಚಿನ್ನ ಮತ್ತು ಬೆಳ್ಳಿ ಮೇಲೆ ಜನರ ಹೆಚ್ಚಿನ ಹೂಡಿಕೆಯಿಂದಾಗಿ  ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಕೂಡ ಏರಿಕೆಯಾಗಿದೆ.  
ಇಂದು ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 1 ಸಾವಿರ ರೂಪಾಯಿ ಏರಿಕೆಯಾಗಿದೆ. ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ 16,800 ರೂಪಾಯಿ ಇತ್ತು. ಇಂದು 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 17,800 ರೂಪಾಯಿ ಏರಿಕೆಯಾಗಿದೆ.  24 ಕ್ಯಾರೆಟ್ ಚಿನ್ನವು 10 ಗ್ರಾಂಗೆ 1 ಲಕ್ಷದ 78 ಸಾವಿರ ರೂಪಾಯಿ ಆಗಿದೆ. 
ಇನ್ನೂ 22 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 1 ಗ್ರಾಂಗೆ 15,380 ರೂಪಾಯಿ ಇತ್ತು. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಇಂದು 16,400 ರೂಪಾಯಿಗೆ ಏರಿಕೆಯಾಗಿದೆ.  22 ಕ್ಯಾರೆಟ್ ಚಿನ್ನವು 10 ಗ್ರಾಂಗೆ 1 ಲಕ್ಷದ 64 ಸಾವಿರ ರೂಪಾಯಿಗೆ ಏರಿಕೆಯಾಗಿದೆ. 
ಇನ್ನೂ ಬೆಳ್ಳಿ ದರದಲ್ಲೂ ಭಾರಿ ಏರಿಕೆಯಾಗಿದೆ. ಒಂದೇ ದಿನಕ್ಕೆ ಬೆಳ್ಳಿ ಬೆಲೆಯು ಪ್ರತಿ ಕೆ.ಜಿ.ಗೆ 30 ಸಾವಿರ ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ಬೆಲೆಯು ಇಂದು ಸಾರ್ವಕಾಲಿಕ ಏರಿಕೆ ಕಂಡಿದೆ. ಇದೇ ಮೊದಲ ಭಾರಿಗೆ ಬೆಳ್ಳಿ ಬೆಲೆಯು ಪ್ರತಿ ಕೆ.ಜಿ.ಗೆ. 4 ಲಕ್ಷ ರೂಪಾಯಿ ಗಡಿ ದಾಟಿದೆ. ಇಂದು ಪ್ರತಿ ಕೆ.ಜಿ. ಬೆಳ್ಳಿ ಬೆಲೆಯು 4 ಲಕ್ಷದ 10 ಸಾವಿರ ರೂಪಾಯಿಗೆ ಏರಿಕೆಯಾಗಿದೆ.  ನಿನ್ನೆ ಬೆಳ್ಳಿ ಬೆಲೆಯು ಪ್ರತಿ ಕೆ.ಜಿ.ಗೆ 3 ಲಕ್ಷದ 80 ಸಾವಿರ ರೂಪಾಯಿ ಇತ್ತು. ಕಳೆದ 24 ಗಂಟೆ ಅವಧಿಯಲ್ಲಿ ಬೆಳ್ಳಿ ಬೆಲೆಯು ಪ್ರತಿ ಕೆ.ಜಿ.ಗೆ. 30 ಸಾವಿರ ರೂಪಾಯಿ ಏರಿಕೆಯಾಗಿರುವುದು ವಿಶೇಷ. 

Gold (1)


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

gold rate Silver rate today in bangalore Gold rate today silver rate today
Advertisment