ಬಜೆಟ್ ಬಳಿಕ ಇಂದು ಕೂಡ ಕುಸಿದ ಬೆಳ್ಳಿ ದರ : ಪ್ರತಿ ಕೆ.ಜಿ.ಗೆ 2.33 ಲಕ್ಷ ರೂಪಾಯಿಗೆ ಕುಸಿತ!!

ಕಳೆದ ಕೆಲ ತಿಂಗಳಿನಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದ ಬೆಳ್ಳಿ ದರ ಇಂದು ಕೂಡ ತನ್ನ ಕುಸಿತವನ್ನು ಮುಂದುವರಿಸಿದೆ. ಇಂದು ಪ್ರತಿ ಕೆ.ಜಿ.ಬೆಳ್ಳಿ ದರ 2.33 ಲಕ್ಷ ರೂಪಾಯಿಗೆ ಕುಸಿದಿದೆ. ಇಂದು ಶೇ.12 ರಷ್ಟು ಕುಸಿದಿದೆ. ಮತ್ತಷ್ಟು ಕುಸಿಯುವ ನಿರೀಕ್ಷೆ ಇದೆ.

author-image
Chandramohan
SILVER PRICE RISE
Advertisment

ಧೀಡೀರನೇ ಏರಿಕೆಯಾಗಿದ್ದು, ಯಾವುದೇ ಆಗಲಿ ಕುಸಿಯಲೇಬೇಕು. ನಮ್ಮ ದೇಶದ ಆರ್ಥಿಕ ತಜ್ಞರು, ಹೂಡಿಕೆ ತಜ್ಞರು ಕೂಡ ಏರಿದ ಚಿನ್ನ, ಬೆಳ್ಳಿ ಬೆಲೆಗಳು ಕುಸಿಯುತ್ತಾವೆ. ಈಗ ಚಿನ್ನ, ಬೆಳ್ಳಿ ಖರೀದಿ ಸೂಕ್ತವಲ್ಲ ಎಂಬ ಸಲಹೆ, ಮಾರ್ಗದರ್ಶನವನ್ನೇ ಜನರಿಗೆ ನೀಡುತ್ತಿದ್ದರು. ಅದು ಈಗ ನಿಜವಾಗಿದೆ. 
ಕಳೆದ ಮೂರು ನಾಲ್ಕು ದಿನಗಳಿಂದ ದೇಶದಲ್ಲಿ ಹಾಗೂ ಜಾಗತಿಕವಾಗಿ ಚಿನ್ನ, ಬೆಳ್ಳಿ ಬೆಲೆಗಳು ಕುಸಿಯುತ್ತಿವೆ. ನಮ್ಮ ದೇಶದಲ್ಲಿ ಮೂರು ದಿನಗಳಿಂದ ಬೆಳ್ಳಿ ಬೆಲೆಯ ಕುಸಿತ ಆರಂಭವಾಗಿದೆ. ಶುಕ್ರವಾರದಿಂದ ಬೆಳ್ಳಿ ಬೆಲೆ ಕುಸಿತ ಆರಂಭವಾಗಿದೆ. 
ಇಂದು ನಮ್ಮ ದೇಶದಲ್ಲಿ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 2,33,774 ರೂಪಾಯಿಗೆ ಕುಸಿದಿದೆ. ನಿನ್ನೆಯೂ ಬೆಳ್ಳಿ ಬೆಲೆ ಕುಸಿದಿತ್ತು. ನಿನ್ನೆಗೆ ಹೋಲಿಸಿದರೇ, ಇಂದು ಶೇ.12 ರಷ್ಟು ಬೆಳ್ಳಿ ಬೆಲೆ ಕುಸಿತವಾಗಿದೆ. ನಿನ್ನೆಗೆ ಹೋಲಿಸಿದರೇ, ಇಂದು ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 31,878 ರೂಪಾಯಿ ಕುಸಿದಿದೆ.

 
ಇನ್ನೂ ಮುಂದೆ ಚಿನ್ನ, ಬೆಳ್ಳಿ ಬೆಲೆ ಕುಸಿತ ಮುಂದುವರಿಯಬಹುದು. ಚಿನ್ನದ ಬೆಲೆಯು ಇಂದು 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆಯು   15,153 ರೂಪಾಯಿ ಆಗಿದೆ.  22 ಕ್ಯಾರೆಟ್ 1ಗ್ರಾಂ ಚಿನ್ನದ ಬೆಲೆ 13,890 ರೂಪಾಯಿ ಆಗಿದೆ.  18 ಕ್ಯಾರೆಟ್ ಒಂದು ಗ್ರಾಂ ಚಿನ್ನದ 11,365 ರೂಪಾಯಿ ಆಗಿದೆ. 
ನಿನ್ನೆ 22ಕ್ಯಾರೆಟ್‌ನ ಒದು ಗ್ರಾಂ ಚಿನ್ನ 14720ರೂಪಾಯಿ ಇತ್ತು . ಆದ್ರೆ ಇವತ್ತು 13,890 ರೂಪಾಯಿಗೆ ಮಾರಾಟ ಆಗುತ್ತಿದೆ. 

ಬೆಳ್ಳಿ ಬೆಲೆ ಕುಸಿತಕ್ಕೆ ಕಾರಣವೇನು?

ಅಮೆರಿಕಾದ ಫೆಡರಲ್ ರಿಸರ್ವ್ ಮುಖ್ಯಸ್ಥರಾಗಿ ಮೈಕೆಲ್ ವಾರಿಷ್ ಅವರನ್ನು ಡೋನಾಲ್ಡ್ ಟ್ರಂಪ್ ನೇಮಿಸಿದ್ದಾರೆ. ಮೈಕೆಲ್ ವಾರಿಷ್ , ಬೇರೆಯವರ ಒತ್ತಡಕ್ಕೆ ಒಳಗಾಗಲ್ಲ. ಫೆಡರಲ್ ರಿಸರ್ವ್ ನ ಸ್ವಾತಂತ್ರ್ಯನನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ, ವ್ಯಕ್ತಿತ್ವ ಹೊಂದಿದ್ದಾರೆ. ಇದರಿಂದಾಗಿ ಡಾಲರ್ ಮೌಲ್ಯ ವೃದ್ದಿಯಾಗಿದೆ. ಈ ಕಾರಣದಿಂದಾಗಿ ಬೆಳ್ಳಿ ಬೆಲೆಯು ಕುಸಿಯುತ್ತಿದೆ. ಜೊತೆಗೆ ಬೆಳ್ಳಿ ಬೆಲೆಯು ಪ್ರತಿ ಕೆ.ಜಿ.ಗೆ 4 ಲಕ್ಷದ 5 ಸಾವಿರ ರೂಪಾಯಿವರೆಗೂ ಏರುವವರೆಗೂ ಅನೇಕರು ಬೆಳ್ಳಿ ಖರೀದಿಸಿದ್ದರು. ಆದರೇ, ಈಗ ಬೆಳ್ಳಿ ಖರೀದಿಸಿದವರು ತಮ್ಮ ಬೆಳ್ಳಿಯನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ. ಬೆಳ್ಳಿ ಮಾರಾಟಕ್ಕೆ ಮುಗಿ ಬಿದ್ದಿದ್ದರಿಂದ ಬೆಳ್ಳಿ ಬೆಲೆ ಕುಸಿತವಾಗುತ್ತಿದೆ. 
ಇನ್ನೂ ಮುಂದೆಯೂ ಬೆಳ್ಳಿ ಬೆಲೆ ಕುಸಿಯಬಹುದು ಎಂಬ ಲೆಕ್ಕಾಚಾರ, ನಿರೀಕ್ಷೆಗಳಿವೆ. 

SILVER PRICE RISE 02



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Silver silver rate today Silver rate today in bangalore
Advertisment