/newsfirstlive-kannada/media/media_files/2025/10/11/silver-price-rise-2025-10-11-12-45-34.jpg)
ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ
ಜಗತ್ತಿನಲ್ಲಿ ಹಳದಿ ಲೋಹ ಚಿನ್ನಕ್ಕೆ ಮಾತ್ರ ಭಾರಿ ಬೇಡಿಕೆ ಎಂದುಕೊಂಡಿದ್ದು ಸುಳ್ಳು ಆಗಿದೆ. ಈಗ ಬೆಳ್ಳಿಯ ಬೆಲೆಯು ಬಂಗಾರದ ಬೆಲೆಯಂತೆ ಏರಿಕೆ ಆಗುತ್ತಿದೆ. ಕೇವಲ ಐದೇ ದಿನದಲ್ಲಿ ಬೆಳ್ಳಿ ಬೆಲೆಯಲ್ಲಿ ಕೆಜಿಗೆ 20 ಸಾವಿರ ರೂಪಾಯಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 1,76,200 ರೂಪಾಯಿಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಅಕ್ಟೋಬರ್ 6 ರಂದು ಬೆಳ್ಳಿ ಬೆಲೆ ಪ್ರತಿ ಕೆೆ.ಜಿ.ಗೆ 1,56,000 ರೂಪಾಯಿ ಇತ್ತು. ಆದರೇ, ಇಂದು ( ಅಕ್ಟೋಬರ್ 11 ) 1,76,200 ರೂಪಾಯಿಗೆ ಏರಿಕೆಯಾಗಿ ದಾಖಲೆ ನಿರ್ಮಿಸಿದೆ. ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯಾಗುತ್ತಿದೆ.
ನಿನ್ನೆ ( ಅಕ್ಟೋಬರ್ 10 ) ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,71,500 ರೂಪಾಯಿಗೆ ತಲುಪಿತ್ತು. ಇಂದು(ಅಕ್ಟೋಬರ್ 11) 1,76,200 ರೂಪಾಯಿಗೆ ಏರಿಕೆಯಾಗಿದೆ. ಕೇವಲ ಐದೇ ದಿನದಲ್ಲಿ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 20 ಸಾವಿರ ರೂಪಾಯಿ ಏರಿಕೆಯಾಗಿರುವುದು ದೇಶದಲ್ಲಿ ಹೊಸ ದಾಖಲೆ.
ದೇಶದ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಬೇರೆ ಬೇರೆ ರೀತಿಯಾಗಿ ಇರುತ್ತೆ.
ಇಂದು ಚೆನ್ನೈ ನಗರದಲ್ಲಿ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,87,000 ರೂಪಾಯಿಗೆ ಏರಿಕೆಯಾಗಿದೆ.
ಮುಂಬೈ, ಪುಣೆ, ಅಹಮದಾಬಾದ್, ದೆಹಲಿ, ಬೆಂಗಳೂರು ನಗರಗಳಲ್ಲಿ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 1,77,000 ರೂಪಾಯಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.