Advertisment

ಬಿಕಿನಿಯಲ್ಲಿ ಸಿಂಪಲ್​ ಬ್ಯೂಟಿ ಸಾಯಿ ಪಲ್ಲವಿ.. ಅಭಿಮಾನಿಗಳಿಗೆ ಶಾಕ್! ಸೀತೆ ಪಾತ್ರಧಾರಿ ಅವತಾರ ಕಂಡು ಫ್ಯಾನ್ಸ್ ಗರಂ!

ಸಿಂಪಲ್ ಬ್ಯೂಟಿ ಸಾಯಿ ಪಲ್ಲವಿ ಫಾರಿನ್ ಟೂರ್ ನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿಯನ್ನು ಸೀರೆ, ಸಂಪ್ರದಾಯಿಕ ಡ್ರೆಸ್ ನಲ್ಲೇ ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದರು. ಆದರೇ, ಈಗ ಇದ್ದಕ್ಕಿದ್ದಂತೆ, ಬಿಕಿನಿ ಧರಿಸಿ ಪೋಸ್ ಕೊಟ್ಟಿದ್ದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸಾಯಿ ಪಲ್ಲವಿ ಹೀಂಗ್ಯಾಕದ್ರು ಅಂತಿದ್ದಾರೆ.

author-image
Chandramohan
SAI PALLAVI BIKINI

ಬಿಕಿನಿಯಲ್ಲಿ ನಟಿ ಸಾಯಿ ಪಲ್ಲವಿ ಕಂಡು ಶಾಕ್ ಆದ ಫ್ಯಾನ್ಸ್

Advertisment
  • ಬಿಕಿನಿಯಲ್ಲಿ ನಟಿ ಸಾಯಿ ಪಲ್ಲವಿ ಕಂಡು ಶಾಕ್ ಆದ ಫ್ಯಾನ್ಸ್
  • ಫಾರಿನ್ ಟೂರ್ ನಲ್ಲಿ ಬಿಕಿನಿಯಲ್ಲಿ ಸಾಯಿ ಪಲ್ಲವಿ ಎಂಜಾಯ್‌
  • ಸದಾ ಸೀರೆ ಉಟ್ಟು ಕಾಣಿಸಿಕೊಳ್ಳುತ್ತಿದ್ದ ಸಾಯಿಪಲ್ಲವಿ

ಸಾಯಿ ಪಲ್ಲವಿ ಈ ಹೆಸರು ಕೇಳಿದ್ರೆ ಸಾಕು ಕಣ್ಮುಂದೆ ಬರೋದು ಆಕೆ ಧರಿಸೋ ಡ್ರೆಸ್‌.  ಸದಾ ಕಾಲ ಸೀರೆಯಲ್ಲಿ ಟ್ರೇಡಿಷನಲ್​ ಡ್ರೆಸ್​ನಲ್ಲಿ ಮಿಂಚುವ ನಟಿ ಈಕೆ, ಆದರೇ, ಈಗ  ಏಕ್​ಧಮ್​ ತುಂಡು ಬಟ್ಟೆ ಹಾಕೊಂಡಿರೋ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿದೆ.. 
ಇವತ್ತಿಗೂ ಸಾಯಿ ಪಲ್ಲವಿಯನ್ನ ತುಂಬಾ ಜನ ಇಷ್ಟ ಪಡೋದೆ ಆಕೆ ಧರಿಸೋ ಬಟ್ಟೆಗೋಸ್ಕರ.. ಸಿನಿಮಾನೇ ಆಗ್ಲಿ, ಯಾವುದೇ ಇವೆಂಟ್ ಆಗ್ಲಿ ಇಲ್ಲಿತನಕ ಸಾಯಿ ಪಲ್ಲವಿ ಗ್ಲಾಮರಸ್​ ಡ್ರೆಸ್​ ಅಲ್ಲ ಮಾಡರ್ನ್​​ ಡ್ರೆಸ್​​ನಲ್ಲೂ ಕಾಣಿಸಿಕೊಂಡಿಲ್ಲ.. ಒಂದು ಲಂಗ ಧಾವಣಿ ಬಿಟ್ರೆ ಸೀರೆಯಲ್ಲೆ ಅತಿ ಹೆಚ್ಚು ಬಾರಿ ಕಾಣಿಸಿಕೊಳ್ತಿದ್ರು.. ಆದ್ರೆ ತಂಗಿ ಪೂಜಾ ಕಣ್ಣನ್ ಜೊತೆ ವೊಕೆಷನ್​​ ಮೂಡ್​ನಲ್ಲಿರೋ ಸಾಯಿ ಪಲ್ಲವಿ ಬಿಕಿನಿಯಲ್ಲಿ ಮಿಂಚ್ತಿರೋದು ಟೀಕೆಗೆ ಗುರಿಯಾಗಿದೆ.

Advertisment

SAI PALLAVI BIKINI

ಇನ್​​ಫ್ಯಾಕ್ಟ್​ ಸಾಯಿ ಪಲ್ಲವಿಯನ್ನ ಸಿಂಪಲ್‌ ಸ್ಟಾರ್‌, ಸಿಂಪಲ್‌ ಬ್ಯೂಟಿ ಎಂದೇ ಕರೆಯುತ್ತಾರೆ. ಅವರ ಅಭಿನಯ ಹಾಗೂ ಅಂದ ಕೂಡ ಸಿಂಪಲ್‌ ಆಗಿರುತ್ತೆ ಎನ್ನುತ್ತಾರೆ ಅವರ ಅಭಿಮಾನಿಗಳು. ಮೇಕಪ್‌ಗೆ ಹೆಚ್ಚು ಆದ್ಯತೆ ಕೊಡದೆ ಇರುವ ಅಂದವೇ ಸಾಕು ಅನ್ನೋದು ಸಾಯಿ ಪಲ್ಲವಿ ಸ್ಟೈಲ್‌. ಬೇರೆ ನಟಿಯರಂತೆ ಹೆಚ್ಚಾಗಿ ಮಾಡ್ರನ್‌ ಡ್ರೆಸ್‌ಗಳನ್ನು ಕೂಡ ಹಾಕೋ ಗೋಜಿಗೆ ಸಾಯಿ ಪಲ್ಲವಿ ಹೋಗುತ್ತಿರಲಿಲ್ಲ. ಹೀಗಾಗಿ ಪಕ್ಕಾ ಸಿಂಪಲ್‌ ಬ್ಯೂಟಿ ಎಂದು ಅವರನ್ನು ಕರೆಯುವುದು ಮಾತ್ರವಲ್ಲದೆ, ಇದೇ ಸಿಂಪಲ್‌ಗೆ ದೊಡ್ಡ ಅಭಿಮಾನಿ ಬಳಗವೂ ಇದೆ. ಆದರೆ ಸಾಯಿ ಪಲ್ಲವಿ ಅವರ ಇತ್ತೀಚಿನ ಫೋಟೋಗಳು ವೈರಲ್‌ ಆಗಿದ್ದು, ಸಿಂಪಲ್‌ ಬ್ಯೂಟಿ ಹೀಗಾ ಶಾಕ್‌ ಕೊಡೋದು ಅಂತ ಬೆರಗಾಗಿದ್ದಾರೆ.

SAI PALLAVI BIKINI02

ಸಾಯಿ ಪಲ್ಲವಿ ಬಿಕಿನಿ ಹಾಕಿರೋದು ನೋಡಿ ದಂಗಾಗಿರೋ ಅಭಿಮಾನಿಗಳು ನಟಿ ಮೇಲೆ ಟೀಕೆಗಳು ಕೂಡ ಕೇಳಿಬಂದಿವೆ. ಸಾಯಿ ಪಲ್ಲವಿ ಅವರನ್ನು ಇಂತಹ ಗೆಟಪ್‌ನಲ್ಲಿ ನಾವು ನಿರೀಕ್ಷಿಸಿರಲಿಲ್ಲ ಎಂದೆಲ್ಲ ಟ್ರೋಲ್‌ ಕೂಡ ಮಾಡುತ್ತಿದ್ದಾರೆ.

ಸೀತೆ ಪಾತ್ರದಲ್ಲಿ ಮಿಂಚಲಿರೋ ಸಾಯಿ ಪಲ್ಲವಿ!
ಇನ್ನೊಂದ್ಕಡೆ  ಬಾಲಿವುಡ್​ನ ರಾಮಾಯಣದಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಯಿ ಪಲ್ಲವಿ ಸಿಂಪಲ್ ಲೈಫ್​​ಸ್ಟೈಲ್ ಕಾರಣಕ್ಕೆ ಸೀತೆಗೆ ಇವರೇ ಸೂಕ್ತ  ಅಂತ ತುಂಬಾ ಜನ ಹೇಳಿದ್ರು.. ಆದ್ರೀಗ ತುಂಡುಡುಗೆಯಲ್ಲಿ ಕಾಣಿಸಿಕೊಂಡಿರೋ ಸಾಯಿ ಪಲ್ಲವಿ ಅವತಾರ ಕಂಡು  ನಮಗೆ ಈ ಸೀತೆ ಬೇಡ ಅಂತ ಕಮೆಂಟ್ ಹಾಕ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Advertisment
actress sai pallavi in bikini
Advertisment
Advertisment
Advertisment