/newsfirstlive-kannada/media/media_files/2025/10/01/big-boss-satish-2025-10-01-15-51-27.jpg)
ಬಿಗ್ ಬಾಸ್ ಹೌಸ್ ಪ್ರವೇಶಿಸಿದ ಸತೀಶ್ ರಿಂದ ಸ್ಕಿನ್ ಕೇರ್ ಪಾಠ
ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆಯೇ ಚಂದ್ರಪ್ರಭಗೆ ಸ್ಕಿನ್‌ಕೇರ್ ಅಂದ್ರೆ ಏನು ಅನ್ನೋದರ ಪಾಠ ಸಿಕ್ಕಿದೆ. ಅವರ ಜೋಡಿ ಸತೀಶ್ ಸ್ಕಿನ್‌ಕೇರ್ ರುಟೀನ್ ನೋಡೀನೆ ಚಂದ್ರಪ್ರಭ ಸುಸ್ತು ಹೊಡೆದಿದ್ದಾರೆ.
ಈ ಬಾರಿಯ ಬಿಗ್‌ಬಾಸ್ ಮನೆಗೆ ಜಂಟಿಯಾಗಿ ಎಂಟ್ರಿಕೊಟ್ಟಿರೋ ಸತೀಶ್ ಹಾಗೂ ಚಂದ್ರಪ್ರಭ ಜೋಡಿ ಪ್ರೇಕ್ಷಕರಿಗೆ ಸಖತ್ ಎಂಟರ್‌ಟೈನ್ ಮಾಡ್ತಿದ್ದಾರೆ. ಸತೀಶ್ ಸಖತ್ ಬ್ಯೂಟಿ ಕಾನ್ಶಿಯಸ್ ಆಗಿದ್ರೆ ಚಂದ್ರಪ್ರಭ, ಅವರ ಸ್ಕಿನ್ ಕೇರ್ ರುಟೀನ್ ನೋಡೀನೆ ಸುಸ್ತು ಹೊಡೆದಿದ್ದಾರೆ.
ಇಲ್ಲಿವರೆಗೂ ಸ್ಕಿನ್‌ಗೆ ಯಾವ ಕ್ರೀಮನ್ನೂ ಹಾಕಿರದಿದ್ದ ಚಂದ್ರಪ್ರಭಗೆ ಸತೀಶ್ ಒಂದೇ ದಿನದಲ್ಲೇ ಹತ್ತಾರು ಕ್ರೀಂಗಳ ಪರಿಚಯ ಮಾಡಿಕೊಟ್ಟಿರೋದು ಮಾತ್ರವಲ್ಲ ಅದ್ರ ಟೆಸ್ಟಿಂಗ್ ಕೂಡ ಮಾಡಿದ್ದಾರೆ. ಕಣ್ಣಿಗೆ , ಕಿವಿಗೆ, ಮೂಗಿಗೆ ಕೆನ್ನೆಗೆ ಅಂತ ಬೇರೆ ಬೇರೆ ಕ್ರೀಂ ಹಚ್ಚೋದನ್ನು ನೋಡಿಯೇ ಚಂದ್ರಪ್ರಭ ಶಾಕ್ ಆಗಿದ್ರು. ಯಾವತ್ತೂ ಯಾವ ಕ್ರೀಂನ್ನೂ ಹಚ್ಚದಿದ್ದ ತಾನು ಹೀಗೆ ಮೇಲೆ ಮೇಲೆ ಕ್ರೀಂ ಹಚ್ಕೊಂಡ್ರೆ ತನ್ನ ಚರ್ಮ ಎಲ್ಲಿ ನಿಜಕ್ಕೂ ಹಾಳಾಗುತ್ತೋ ಅನ್ನೋ ಭಯ ಚಂದ್ರಪ್ರಭ ಅವರ ಮಾತಲ್ಲೇ ಕಾಣಿಸ್ತಿತ್ತು.
ಅಂತೂ ಈ ಜೋಡಿಯ ಬ್ಯೂಟಿ ಪಾಠ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸೋದ್ರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ