/newsfirstlive-kannada/media/post_attachments/wp-content/uploads/2025/06/Siddaramaiah-on-Cast-Survey-1.jpg)
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕರೆ ಕೊಟ್ಟಿದ್ದಾರೆ. ಈ ಸಮೀಕ್ಷೆಯಿಂದ ಎಲ್ಲರ ಸಾಮಾಜಿಕ , ಶೈಕ್ಷಣಿಕ ಸ್ಥಿತಿಗತಿಯ ಅಂಕಿಅಂಶ ಅಂಗೈನಲ್ಲೇ ಇದ್ದರೇ, ಅದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯದ ಕಾರ್ಯಕ್ರಮ ರೂಪಿಸಲು ಸಾಧ್ಯವಾಗುತ್ತೆ ಎಂದಿದ್ದಾರೆ. ಜನರಿಗೆ ತಮ್ಮ ಜಾತಿ ಬಗ್ಗೆ ಹೇಳಿಕೊಳ್ಳಲು ಕಷ್ಟವಾದರೇ, ಸಹಾಯವಾಣಿ ಮೂಲಕ ಪೋನ್ ಕಾಲ್ ಮಾಡಿ ಮಾಹಿತಿ ನೀಡಬಹುದು ಎಂದು ಕೂಡ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ವರದಿಯನ್ನು ನಾವು ಒಪ್ಪಿಕೊಂಡಿಲ್ಲ . ಅದಾದ ಮೇಲೆ ಜಯಪ್ರಕಾಶ್ ಹೆಗ್ಡೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು. ಇಬ್ಬರೂ ವರದಿಯನ್ನ ಕೊಟ್ಟಿದ್ದರು. ಕಳೆದ 2015ರಲ್ಲಿ ಸರ್ವೆಯಾಗಿತ್ತು, ಅದೀಗ 10 ವರ್ಷಗಳೇ ಆಯ್ತು. 10 ವರ್ಷ ಆಗಿದೆ ಅಂತ ಹೊಸ ಸಮೀಕ್ಷೆಗೆ ತೀರ್ಮಾನ ಮಾಡಿದ್ದೇವು. ಅದರ ಜವಾಬ್ದಾರಿಯನ್ನು ಹಿಂದುಳಿದ ಆಯೋಗಕ್ಕೆ ವಹಿಸಿದ್ದೇನೆ. ನಮ್ಮಲ್ಲಿ ಅನೇಕ ಜಾತಿ, ಧರ್ಮ, ವೈವಿಧ್ಯತೆ ಇದೆ. ಸಮಾನ ಅವಕಾಶ ಕೊಡಬೇಕು ಅಂತ ಸಂವಿಧಾನ ಹೇಳುತ್ತೆ . ಸಾಮಾಜಿಕ ನ್ಯಾಯ ಎಲ್ಲರಿಗೂ ಒದಗಿಸಿಕೊಡಬೇಕು . ಅಸಮಾನತೆ ತೊಲಗಿಸಬೇಕೆಂದು ಅಂಬೇಡ್ಕರ್ 1949 ರಲ್ಲಿ ಭಾಷಣ ಮಾಡಿದ್ದರು . ವೈವಿಧ್ಯತೆಯತ್ತ ಕಾಲಿಡುವುದಾಗಿ ಎಚ್ಚರಿಕೆಯ ಗಂಟೆ ನೀಡಿದ್ದರು. ಪ್ರಜಾಪ್ರಭುತ್ವ ಉಳಿಯಬೇಕಾದ್ರೆ ಅಸಮಾನತೆ ತೊಲಗಿಸಲೇಬೇಕು. ಅಸಮಾನತೆ ವಿರುದ್ಧ ಇರುವವರು ಪ್ರಜಾಪ್ರಭುತ್ವವನ್ನೇ ಧ್ವಂಸ ಮಾಡುತ್ತಾರೆ. ಈ ಬಗ್ಗೆ ನಾವು ಹುಷಾರಾಗಿರಬೇಕು . ಅಸಮಾನತೆ ಉಳಿಯಲು ಅವಕಾಶ ಮಾಡಿಕೊಡಬಾರದು. ಸಮಾನ ಅವಕಾಶ ಒದಗಿಸಿಕೊಡಬೇಕು. ಕರ್ನಾಟಕದಲ್ಲಿ ಏಳು ಕೋಟಿ ಜನರಿದ್ದಾರೆ. ಒಟ್ಟು ಎರಡು ಕೋಟಿಯಷ್ಟು ಕುಟುಂಬಗಳಿವೆ. ಎಲ್ಲರಿಗೂ ಸಮಾನ ಅವಕಾಶ ಒದಗಿಸಿಕೊಡಬೇಕು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನ ಒದಗಿಸಿ ಕೊಡಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಅಸಮಾನತೆ ತೊಲಗಿಸಲು ಆಗಿಲ್ಲ . ಕಳೆದ 2014ರಲ್ಲಿ ಕಾಂತರಾಜು ಅಧ್ಯಕ್ಷತೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಆದೇಶ ಮಾಡಿದ್ದೆ. ಸಮಾನತೆ ಎಲ್ಲರಿಗೂ ಬರಬೇಕು . ಶಿಕ್ಷಣ, ಉದ್ಯೋಗದ ಪರಿಸ್ಥಿತಿ ಗೊತ್ತಾಗಬೇಕು. ರಾಜಕೀಯದಲ್ಲಿರುವ ಪರಿಸ್ಥಿತಿ, ಜನರ ಜಮೀನಿನ ಬಗ್ಗೆ ಗೊತ್ತಾಗಬೇಕು. ಆಗ ಅವರಿಗೆ ಕಾರ್ಯಕ್ರಮ ರೂಪಿಸಲು ಸಹಕಾರಿಯಾಗಲಿದೆ . ಗ್ಯಾರಂಟಿ ಯೋಜನೆ ಮೂಲಕ ಅಸಮಾನತೆ ಕಡಿಮೆ ಮಾಡುವ ಪ್ರಯತ್ನ ಮಾಡ್ತಿದ್ದೇವೆ. ಭಾಗ್ಯಗಳ ಮೂಲಕ ಅಸಮಾನತೆ ಕಡಿಮೆ ಮಾಡುವ ಪ್ರಯತ್ನ ಆಗುತ್ತಿದೆ.
ಮನೆ ಮನೆ ಸಮೀಕ್ಷೆ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್.
ಎಲ್ಲರೂ ಸರ್ವೇಯಲ್ಲಿ ಪಾಲ್ಗೊಳ್ಳಿ ಎಂದು ಕರೆ ಕೊಟ್ಟ ಸಿಎಂ ಸಿದ್ದರಾಮಯ್ಯ
ಈಗ ಹೊಸದಾಗಿ ಮತ್ತೆ ಸಮೀಕ್ಷೆ ಆಗುತ್ತಿದೆ. ಸಾಮಾಜಿಕ, ಶೈಕ್ಷಣಿಕ ಮಟ್ಟ ತಿಳಿಯಲು ಸಮೀಕ್ಷೆ ನಡೆಯುತ್ತಿದೆ. ಮಧುಸೂಧನ್ ನಾಯ್ಕ್ ಅವರ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಜವಾಬ್ದಾರಿ ಕೊಡಲು ನಿರ್ಧಾರ ಮಾಡಲಾಗಿದೆ. ಆದಷ್ಟು ಜಾಗೃತಿಯಿಂದ ವರದಿ ಕೊಡಲು ಹೇಳಿದ್ದೇವೆ. ಅಂದಾಜು ಪ್ರಕಾರ ಡಿಸೆಂಬರ್ ಒಳಗಡೆ ವರದಿ ಕೊಡ್ತಾರೆ. ಈ ಜಾತಿ ಸಮೀಕ್ಷೆ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ನೇ ತಾರೀಖುನೊಳಗೆ ಆಗುತ್ತೆ . ಯಾಕೆಂದ್ರೆ ಈ ಅವಧಿಯಲ್ಲಿ ದಸರಾ ರಜೆ ಇರಲಿದೆ. ಸೆಪ್ಟೆಂಬರ್ 22 ರಂದು ದಸರಾ ಹಬ್ಬ ಉದ್ಘಾಟನೆ ಆಗಲಿದೆ. ಶಾಲಾ ಶಿಕ್ಷಕರನ್ನು ಸಮೀಕ್ಷೆಗೆ ನಾವು ಬಳಕೆ ಮಾಡಿಕೊಳ್ಳಬಹುದು. ಸಮೀಕ್ಷೆಗಾಗಿ 1 ಲಕ್ಷದ 75 ಸಾವಿರ ಉಪಾಧ್ಯಾಯರ ನೇಮಕ ಮಾಡಿಕೊಳ್ಳಲಾಗುತ್ತೆ. ಅವರಿಗೆ ಸುಮಾರು ತಲಾ 20 ಸಾವಿರ ರೂಪಾಯಿ ಕೊಡಬೇಕು. ಅವರಿಗೆ ಒಟ್ಟು 375 ಕೋಟಿ ಖರ್ಚಾಗುತ್ತೆ. ಯಾರೂ ಕೂಡ ಸರ್ವೇಗೆ ತಪ್ಪಿಸಿಕೊಳ್ಳಬಾರದು. ಎಲ್ಲರ ಮನೆಯ ಮಾಹಿತಿ ಸಿಗಬೇಕು.
ಈ ಸರ್ವೇಯಲ್ಲಿ ಎಲ್ಲರೂ ಭಾಗಿಯಾಗಬೇಕು. ಒಟ್ಟು 60 ಪ್ರಶ್ನೆಗಳನ್ನು ಕೇಳಲಾಗುತ್ತೆ. ಎಲ್ಲದ್ದಕ್ಕೂ ಉತ್ತರಿಸಬೇಕು. ಪ್ರಶ್ನೆ ಕೇಳಲು ಟೀಚರ್ ಗಳಿಗೆ ಟ್ರೇನಿಂಗ್ ನೀಡಲಾಗುತ್ತೆ.
ಶಿಕ್ಷಕರು ಮನೆ ಮನೆಗೆ ಹೋಗುವ ಮೂರು ದಿನ ಮುನ್ನ ಆಶಾ ಕಾರ್ಯಕರ್ತರು ಮನೆ ಮನೆಗೆ ಹೋಗುತ್ತಾರೆ. ಆಶಾ ಕಾರ್ಯಕರ್ತರು ಎಲ್ಲರ ಮನೆಗೆ ಹೋಗಿ ನಮೂನೆ ಕೊಡುತ್ತಾರೆ.
ಪ್ರತಿಯೊಂದು ಮನೆಗೂ ಯೂನಿಕ್ ಹೌಸ್ ಹೋಲ್ಡ್ ಐಡೆಂಟಿಟಿ ಅಂಟಿಸಲಾಗುತ್ತೆ. ಪಡಿತರ ಚೀಟಿ, ಆಧಾರ್ ಕಾರ್ಡ್ ಅನ್ನು ಮೊಬೈಲ್ ಗೆ ಲಿಂಕ್ ಮಾಡುತ್ತಾರೆ.
ರಾಜ್ಯದಲ್ಲಿ 1 ಕೋಟಿ 55 ಲಕ್ಷ ಮನೆಗಳಿವೆ. ಯಾರಿಗೆ ಜಾತಿ ಹೇಳಿಕೊಳ್ಳಲು ಕಷ್ಟವಾಗುತ್ತೋ, ಅಂಥವರು ಸಹಾಯವಾಣಿ ಮೂಲಕ ಜಾತಿಯ ವಿವರ ತಿಳಿಸಬಹುದು ಎಂದು ಸಹಾಯ ವಾಣಿ ಸಂಖ್ಯೆ ನೀಡಲಾಗುತ್ತಿದೆ.
ಈಗಲೂ 15 ದಿನದೊಳಗೆ ಸಮೀಕ್ಷೆ ಮುಗಿಯುವ ಸಾಧ್ಯತೆ ಇದೆ.
ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ಸಮೀಕ್ಷೆ ಆಗುತ್ತೆ. ಡಿಸೆಂಬರ್ ವೇಳೆ ವರದಿ ಸಲ್ಲಿಕೆ ಮಾಡ್ತಾರೆ . ಇದರ ಜೊತೆಗೆ ಮತ್ತೊಂದು ವಿಶೇಷತೆ ಇದೆ . ಸಮೀಕ್ಷೆಯಲ್ಲಿ ಜಿಯೋಟೈಪ್ ರೀತಿ ಮಾಡಲಿದ್ದಾರೆ. UHID -UNIQUR HOUSE HOLD IDENTITY ನೀಡಲಾಗುತ್ತೆ. ಎರಡು ಕೋಟಿ ಮನೆಗಳಿಗೆ ಇದನ್ನ ಅಂಟಿಸುತ್ತಾರೆ. ಈಗಾಗಲೇ ಒಂದೂವರೆ ಕೋಟಿ ಮನೆಗಳಿಗೆ ಅಂಟಿಸಿದ್ದಾರೆ . ಇದು ಮುಗಿದ ನಂತರ ಮನೆಗಳಿಗೆ ಶಿಕ್ಷಕರು ಹೋಗ್ತಾರೆ. ಅಲ್ಲಿ ಪಡಿತರ ಚೀಟಿ, ಆಧಾರ್ ಕಾರ್ಡ್ ಅನ್ನು ಅವರ ಮೊಬೈಲ್ ಗೆ ಲಿಂಕ್ ಮಾಡುವ ಕೆಲಸ ಆಗುತ್ತೆ . ಒಂದು ವೇಳೆ ಅವರ ಬಳಿ ಮೊಬೈಲ್ ಇಲ್ಲ ಅಂದ್ರೆ ಅವರನ್ನು ಸಹ ಸಮೀಕ್ಷೆ ಮಾಡಲಾಗುತ್ತದೆ . ಸಮೀಕ್ಷೆ ವೇಳೆ 60 ಪ್ರಶ್ನೆಗಳನ್ನು ಕೇಳಲಾಗುತ್ತದೆ . ಯಾವ ಧರ್ಮ, ಭಾಷೆ, ಜಾತಿ ಎಂದು ಕೇಳುತ್ತಾರೆ. ಅದಕ್ಕೆ ಜನರೆಲ್ಲರೂ ಭಾಗಿಯಾಗಬೇಕು. ಜನರು ಆ 60 ಪ್ರಶ್ನೆಗಳಿಗೆ ಉತ್ತರ ನೀಡಬೇಕು . ಯಾರು ಕೂಡ ಇದರಿಂದ ತಪ್ಪಿಸಿಕೊಳ್ಳಬಾರದು. ಮನೆಯಲ್ಲಿ ಇರಲು ಆಗದೇ ಇದ್ದರೆ ಇದಕ್ಕಾಗಿಯೇ ಸಹಾಯವಾಣಿ ಇದೆ. 8050770004 ನಂಬರಿಗೆ ಕರೆ ಮಾಡಿ ಭಾಗಿಯಾಗಬಹುದು . kacbckarnataka,govt.in ವೆಬ್ ಸೈಟ್ ಮೂಲಕವೂ ಮಾಡಬಹುದು. ಆಶಾ ಕಾರ್ಯಕರ್ತರು ಸಹ ಇರುತ್ತಾರೆ. ಶಿಕ್ಷಕರು ಹೋಗುವ ಮೊದಲೇ ಇವರು ನಮೂನೆಯನ್ನ ಕೊಡ್ತಾರೆ. ಓದಿಕೊಂಡಿರಲು ಅಂತ ಮನೆ ಮನೆಗೆ ಕೊಡ್ತಾರೆ . ಟೀಚರ್ಸ್ ಮನೆಗೆ ಹೋಗುವ ಮುನ್ನವೇ ನಮೂನೆ ಕೊಟ್ಟಿರುತ್ತಾರೆ . ಓದೋಕೆ ಬರುವವರು ಮಾಹಿತಿ ತಿಳಿದುಕೊಂಡಿರುತ್ತಾರೆ. ಪ್ರಶ್ನೆಗಳು ಸಿದ್ದವಾಗಿರಬೇಕು, ಜಾಗೃತಿ ಮೂಡಿಸಬೇಕು.
ಶಿಕ್ಷಕರು ಅಪಾರ್ಟ್ಂಟ್ ಗಳಿಗೂ ಹೋಗ್ತಾರೆ, 120-150 ಫ್ಲಾಟ್ ಗಳನ್ನ ಕೊಡ್ತೇವೆ. ಆನ್ ಲೈನ್ ಮೂಲಕ ಅವರ ಜಾತಿಯನ್ನ ಹೇಳಿಕೊಳ್ಳಬಹುದು . ಜಾತಿ ಬಹಿರಂಗಪಡಿಸಲು ಇಷ್ಟವಿಲ್ಲದಿದ್ದರೆ ಈ ರೀತಿ ಮಾಡಬಹುದು. 100% ಸರ್ವೆ ಆಗಬೇಕು ಅನ್ನೋದು ನಮ್ಮ ಉದ್ದೇಶ. 92% ಒಳಮೀಸಲಾತಿ ಸಮೀಕ್ಷೆ ಆಗಿತ್ತು .
ಕೇಂದ್ರ ಜಾತಿಗಣತಿ ಮಾಡ್ತಿದ್ಯಲ್ಲ, ಅವರೇನು ಮಾಡ್ತಿದ್ದಾರೆ ? ತಾಳ್ಮೆಯಿಂದ ಕುಳಿತು ವಿಶ್ವಾಸಕ್ಕೆ ತೆಗೆದುಕೊಂಡು ಸಮೀಕ್ಷೆ ಮಾಡ್ತಾರೆ . ಶಿಕ್ಷಕರಿಗೆ ತರಬೇತಿಗೆಂದು ಆಪ್ ಮಾಡಲಾಗಿದೆ . ವಲಸಿಗರಾದ್ರೂ ಅಷ್ಟೇ ಯಾರೇ ಆಗಲಿ ಎಲ್ಲ ಮಾಹಿತಿಯನ್ನ ನೀಡಬೇಕು . ಆಧಾರ್ ಕಾರ್ಡ್ ಇದ್ರೆ ಮಾಹಿತಿ ನೀಡಬಹುದು.
ಸೆಪ್ಟೆಂಬರ್ 22 ರಿಂದ ರಾಜ್ಯದಲ್ಲಿ ಮನೆ ಮನೆ ಸಮೀಕ್ಷೆ ಕಾರ್ಯ ಆರಂಭ
ಇನ್ನೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ದಲಿತ ಎಂಬ ಕಾಲಂ ಇರುವ ವಿಚಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಏನೇನು ಹೇಳ್ತಾರೊ ಹೇಳಲಿ, ಅವರು ನಾಗರೀಕರು ಅಲ್ವಾ ? ಆಯೋಗದವರು ಸಮೀಕ್ಷೆ ವೇಳೆ ಮಾಡ್ತಾರೆ. ಕ್ರಿಶ್ಚಿಯನ್ ಗೆ ಮತಾಂತರ ಆಗಿದ್ರೆ ಕ್ರಿಶ್ಚಿಯನ್ ಅಂತ ಬರೆಯಲಿ. ಅವರು ಮತಾಂತರ ಕ್ರಿಶ್ಚಿಯನ್ ಅಷ್ಟೇ. ಅವರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ಕಾಲಂ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ವೀರಶೈವ ಅವರು ಧರ್ಮ, ಲಿಂಗಾಯತ ವೀರಶೈವ ಅಂತನಾದ್ರೂ ಬರೆಸಿಕೊಳ್ಳಲಿ. ನಮಗೆ ಅವರ ಶೈಕ್ಷಣಿಕ, ಸಾಮಾಜಿಕ ಪರಿಸ್ಥಿತಿ ಗೊತ್ತಾಗಬೇಕು. ಧರ್ಮದ ತೀರ್ಮಾನ ಮಾಡೋಕೆ ಅಲ್ಲ ಈ ಕಮಿಟಿ ಮಾಡಿರೋದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಎಲ್ಲಾ ಜಾತಿ-ಧರ್ಮದವರ ದತ್ತಾಂಶ ಅಂಗೈಯಲ್ಲಿದ್ದರೆ ಮಾತ್ರ ಸಾಮಾಜಿಕ ನ್ಯಾಯದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.