ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿಗಳ (ಎಂಪಿ, ಎಂಎಲ್ಎ) ವಿಶೇಷ ನ್ಯಾಯಾಲಯ ಕಠಿಣ ಶಿಕ್ಷೆ ನೀಡಿದೆ. ಜೀವಾವಧಿ ಶಿಕ್ಷೆ ಎಂದರೆ ಕಾನೂನಲ್ಲಿ ಇರುವಂತೆ ಸಂಪೂರ್ಣವಾಗಿ ಜೀವನದುದ್ದಕ್ಕೂ ಜೈಲಿನಲ್ಲೇ ಇರಬೇಕು. ಪ್ರಾಸಿಕ್ಯೂಷನ್ ಪರವಾಗಿ ಯಾವ್ಯಾವ ಕಲಂಗಳನ್ನು ಅನ್ವಯಿಸಿದ್ದವೋ ಎಲ್ಲ ಕಲಂಗಳಲ್ಲೂ ಸಹ ಪ್ರತ್ಯೇಕ..ಪ್ರತ್ಯೇಕ ಶಿಕ್ಷೆ, ದಂಡಗಳನ್ನ ವಿಧಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮಹಿಳೆಯರ ಮೇಲಿನ ಅಪರಾಧಗಳಿಗೆ ಕಠಿಣ ಶಿಕ್ಷೆ.. ಪ್ರಜ್ವಲ್ ರೇವಣ್ಣ ತೀರ್ಪಿನ ಬಗ್ಗೆ ರಮ್ಯಾ ಪ್ರತಿಕ್ರಿಯೆ
ದಂಡದಲ್ಲಿ 11 ಲಕ್ಷದ 25 ಸಾವಿರ ರೂಪಾಯಿಗೆ ಸಂತ್ರಸ್ತೆಗೆ ಹೋಗುತ್ತದೆ. ಪ್ರಜ್ವಲ್ ರೇವಣ್ಣ ಸಂಸತ್ತು ಸದಸ್ಯ ಆಗಿರುವಾಗಲೇ ಇಂತಹ ಕೃತ್ಯ ಎಸಗಿರುವುದನ್ನ ಗಂಭೀರವಾಗಿ ಪರಿಗಣಿಸಿ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ಮಾನ್ಯ ನ್ಯಾಯಾಲಯ ಶಿಕ್ಷೆ ವಿಧಿಸುವುದರ ಮೂಲಕ ತಪ್ಪು ಮಾಡುವವರಿಗೆ ಕಠಿಣ ಸಂದೇಶವನ್ನ ರವಾನೆ ಮಾಡಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ಎನ್ ನಾಯಕ್ ಅವರು ಹೇಳಿದ್ದಾರೆ.