Advertisment

ಯುವಜನತೆಯಲ್ಲಿ ಈಗ ಷೇರು ಟ್ರೇಡಿಂಗ್ ಅಡಿಕ್ಷನ್ : ನಿಮ್ಹಾನ್ಸ್ ಮೊರೆ ಹೋದ ಟ್ರೇಡಿಂಗ್‌ ಅಡಿಕ್ಟ್ ಗಳು

ಬೆಟ್ಟಿಂಗ್ ಮತ್ತು ಡ್ರಗ್ಸ್ ಬಳಿಕ ದೇಶದ ಯುವಜನತೆಯಲ್ಲಿ ಷೇರು ಟ್ರೇಡಿಂಗ್ ಅಡಿಕ್ಷನ್ ಹೆಚ್ಚಾಗುತ್ತಿದೆ. ಈ ಅಡಿಕ್ಷನ್ ನಿಂದಾಗಿ ಯುವಜನತೆಗೆ ಮಾನಸಿಕ ಸಮಸ್ಯೆ ಕೂಡ ಶುರುವಾಗಿದೆ. ಇದರ ಪರಿಹಾರಕ್ಕಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರ ಮೊರೆ ಹೋಗುತ್ತಿದ್ದಾರೆ.

author-image
Chandramohan
trading addiction in youth
Advertisment
ಚಟ.. ಇದೊಂದು ಡೇಂಜರಸ್ ಹ್ಯಾಬಿಟ್.. ಆದ್ರೆ ಇತ್ತೀಚಿಗೆ ಬೆಟ್ಟಿಂಗ್, ಡ್ರಗ್ಸ್ ಚಟ.. ಈ ರೀತಿಯೇ  ಟ್ರೇಡಿಂಗ್ ಚಟ ಕೂಡ ಜಾಸ್ತಿ ಆಗ್ತಿದೆ ಅನ್ನೋ ಆಘಾತಕಾರಿ ಮಾಹಿತಿ ಹೊರ ಬಂದಿದೆ.. ಹಾಗಾದ್ರೆ ಏನು? ಟ್ರೇಡಿಂಗ್ ಅಡಿಕ್ಷನ್.. ನೋಡೋಣ ಈ ರಿಪೋರ್ಟ್ ನಲ್ಲಿ.. 
Advertisment
ಯುವಕರಲ್ಲಿ ಹೆಚ್ಚಾಯ್ತು ಟ್ರೇಡಿಂಗ್ ಅಡಿಕ್ಷನ್.. ಏನಿದು? 
ಕಮ್ಮಿ ಸಮಯ.. ಯುವಕರಲ್ಲಿ ಜಾಸ್ತಿ ದುಡ್ಡು ಮಾಡೋ ಆಸೆ..!

ಹೌದು.. ಇತ್ತೀಚಿಗೆ ಅದ್ಯಾಕೋ ಏನೋ? ಈ ಟ್ರೇಡಿಂಗ್ ಅಡಿಕ್ಷನ್ ಜಾಸ್ತಿ ಆಗ್ಬಿಟ್ಟಿದ್ಯಂತೆ.. ಅದ್ರಲ್ಲೂ ಯುವಕರು ಅತಿ ಹೆಚ್ಚು ಟ್ರೇಡಿಂಗ್ ಅಡಿಕ್ಷನ್ ನಿಂದಾಗಿ ನಿಮಾನ್ಸ್ ಮೊರೆ ಹೋಗ್ತಿದ್ದಾರೆ. ಜೊತೆಗೆ ಈ ರೀತಿ ಟ್ರೇಡಿಂಗ್ ಅಡಿಕ್ಷನ್ ನಿಂದಾಗಿ ಯುವ ಜನತೆ ಮನಸ್ಥಿತಿ ಹಾಳಾಗ್ತಿದೆ ಅಂತಿದ್ದಾರೆ ಮನೋವೈದ್ಯರು . ಈ ಬಗ್ಗೆ ಆತಂಕ ಹೊರಹಾಕ್ತಿದ್ದಾರೆ.. 
ಹಾಗಾದ್ರೆ ಏನಿದು ಟ್ರೇಡಿಂಗ್ ಅಡಿಕ್ಷನ್? 
ಯುವಕರಲ್ಲಿ ಕಮ್ಮಿ ಸಮಯದಲ್ಲಿ ಹೆಚ್ಚು ಹಣ ಮಾಡ್ಬೇಕು ಅನ್ನೋ ಆಸೆ ಬರುತ್ತೆ.. ಹೀಗಾಗಿ ಅವರು ರಿಸ್ಕ್ ಪರಿಗಣಿಸದೆ  ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡ್ತಾರೆ. ಮೊದಲು ಲಾಸ್ ಆದ್ರು ಸಾಲ ಮಾಡಿ ಇನ್ವೆಸ್ಟ್ ಮಾಡೋಕೆ ಹೋಗ್ತಾರೆ. ಬಳಿಕ ಲಾಸ್ ಆದ್ರೆ ಮಾನಸಿಕ ಒತ್ತಡಕ್ಕೆ ಒಳಗಾಗ್ತಾರೆ. ಲಾಸ್ ರಿಕವರಿ ಮಾಡಲು ಮತ್ತೆ ಸಾಲ ಮಾಡಿ ಹೂಡಿಕೆ ಮಾಡ್ತಾರೆ.
ಟ್ರೇಡಿಂಗ್ ಅಡಿಕ್ಷನ್ ಸಿಂಪ್ಟಮ್ಸ್ ಏನು? 
ದಿನಪೂರ್ತಿ ಷೇರು ಮಾರುಕಟ್ಟೆ ಬಗ್ಗೆ ಮಾತ್ರ ಯೋಚನೆ ಮಾಡೋದು
• ನಷ್ಟವಾದರೂ ಮತ್ತೆ ಮತ್ತೆ ಟ್ರೇಡ್ ಮಾಡಲು ಪ್ರಯತ್ನಿಸುವುದು
• “ಇನ್ನೊಂದು ಟ್ರೇಡ್ ಮಾಡಿದ್ರೆ ಲಾಸ್ ವಾಪಸ್ ಬರುತ್ತೆ” ಅನ್ನೋ ಭಾವನೆ
• ಹಣ ಕಳೆದುಕೊಂಡರೂ ನಿಲ್ಲಿಸಲಲ್ಲ 
• ಸಾಲ ತೆಗೆದುಕೊಂಡು ಟ್ರೇಡಿಂಗ್ ಮಾಡೋದು
• ಕುಟುಂಬ, ಸ್ನೇಹಿತರು, ಕೆಲಸ ಇವುಗಳಿಗಿಂತ ಟ್ರೇಡಿಂಗ್‌ಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು
Advertisment
• ಟ್ರೇಡಿಂಗ್ ಮಾಡದಿದ್ದರೆ ಕೋಪ, ಒತ್ತಡ, ಅಸಹನೆ ಆಗುವುದು
• ನಿದ್ರೆ ಕಡಿಮೆ ಮಾಡಿ ಲೇಟ್ ನೈಟ್ ಚಾರ್ಟ್ಸ್ ನೋಡುವುದು
• ಸುಳ್ಳು ಹೇಳೋದು (ನಷ್ಟವನ್ನು ಮರೆಮಾಚೋದು)
• ಮನಸ್ಸಿನಲ್ಲಿ ಗಿಲ್ಟ್ ಕಾಡೋದು 

trading addiction in youth (1)

ಇನ್ನು ಈ ಟ್ರೇಡಿಂಗ್ ಅಡಿಕ್ಷನ್ ನಿಂದ ಹೊರ ಬರೋದು ಹೇಗೆ ಅಂತ ವೈದ್ಯರೇ ಹೇಳುತ್ತಿದ್ದಾರೆ. 
ಯಾವುದೇ ಆಗ್ಲಿ ಲಿಮಿಟ್ ಅಲ್ಲಿ ಇರೋದು ಒಳ್ಳೇದು.. ಈ ರೀತಿ ಅಡಿಕ್ಷನ್ ಮಾಡ್ಕೊಂಡ್ರೆ ಅದು ಜೀವನದ ಮೇಲೆ ಪರಿಣಾಮ ಬೀರುತ್ತೆ ಅನ್ನೋದ್ರಲ್ಲಿ ಡೌಟ್ ಇಲ್ಲ.. 
ಚಂದನ ಶೆಟ್ಟಿ, ನ್ಯೂಸ್ ಫಸ್ಟ್ , ಬೆಂಗಳೂರು
MENTAL ILLNESS Mental health Share market down SHARE MARKET TRADING TRADING ADDCICTION IN YOUTH
Advertisment
Advertisment
Advertisment