/newsfirstlive-kannada/media/media_files/2025/09/08/badami-bus-protest-2025-09-08-19-52-41.jpg)
ಹೂಲಗೇರಿ ಬಳಿ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಸರ್ಕಾರದಿಂದ ಉಚಿತ ಬಸ್ ಒದಗಿಸುವ ಶಕ್ತಿ ಯೋಜನೆ ಆರಂಭದ ಬಳಿಕ ಸಾರಿಗೆ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಬಹುತೇಕ ಎಲ್ಲಾ ಸಾರಿಗೆ ಬಸ್ಗಳು ಜನದಟ್ಟಣೆಯೊಂದಿಗೆ ಓಡಾಡ್ತಿದೆ. ಈ ಯೋಜನೆ ಹಲವರಿಗೆ ಸಹಾಯವಾಗಿದ್ರೆ, ಇನ್ನು ಕೆಲವರಿಗೆ ಸಂಕಷ್ಟವಾಗಿದೆ.
ಬಾಗಲಕೋಟೆಯ ಬಾದಾಮಿ ತಾಲೂಕಿನ ಹೂಲಗೇರಿ ಬಳಿ ಶಾಲಾ ಕಾಲೇಜಿಗೆ ತೆರಳಲು ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಹೂಲಗೇರಿ ಗ್ರಾಮದಲ್ಲಿ ಸರಿಯಾಗಿ ಬಸ್ ನಿಲುಗಡೆ ವ್ಯವಸ್ಥೆ ಇಲ್ಲ. ಅಲ್ಲದೇ ಇದೀಗ ಮಹಿಳೆಯರಿಗೆ ಉಚಿತ ಪ್ರಯಾಣವಾದ ಹಿನ್ನಲೆ, ಇದ್ದ ಬಸ್ಗಳು ಕೂಡ ಜನರಿಂದ ಫುಲ್ ಅಗಿ ಬರುತ್ತಿದೆ. ಪರಿಣಾಮ ಶಾಲಾ - ಕಾಲೇಜುಗಳಿಗೆ ಹೋಗಳು ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ವಿದ್ಯಾಭ್ಯಾಸಕ್ಕೆ ಬಹಳ ತೊಂದರೆ ಉಂಟಾಗ್ತಿದೆ.
ಇನ್ನು, ಈ ಬಗ್ಗೆ ಹಲವಾರು ಭಾರೀ ಮಾಹಿತಿ ನೀಡಿದ್ರು, ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಕಣ್ಣುಮುಚ್ಚಿ ಕುಳಿತಿದ್ದಾರೆ.
ಬಸ್ ಸಮಸ್ಯೆಯಿಂದ ಬೇಸತ್ತ ವಿದ್ಯಾರ್ಥಿಗಳು, ಹೆದ್ದಾರಿಯಲ್ಲಿ ನಿತ್ಯ ನೂರಾರು ಬಸ್ಗಳು ಓಡಾಡುತ್ತವೆ. ಆದರೆ ನಮ್ಮೂರಲ್ಲಿ ಶಾಲಾ ಕಾಲೇಜು ಅವಧಿಯಲ್ಲಿ ಕೂಡ ಬಸ್ ನಿಲ್ಲೋದಿಲ್ಲ. ಊರಲ್ಲಿ ನಿಲ್ಲಿಸುವ ಬಸ್ ಫುಲ್ ಭರ್ತಿಯಾಗಿರುತ್ತದೆ.ನಿಲ್ಲೋದಕ್ಕೂ ಜಾಗ ಇರೋದಿಲ್ಲ.ಇದರಿಂದ ನಮ್ಮ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಹೂಲಗೇರಿ ಬಳಿಯ ಹುಬ್ಬಳ್ಳಿ-ವಿಜಯಪುರ ಹೆದ್ದಾರಿಯಲ್ಲಿ ನಾಲ್ಕು ಕೆಎಸ್ಆರ್ಟಿಸಿ ಬಸ್ಗಳನ್ನ ತಡೆದು ಪ್ರತಿಭಟನೆ ನಡೆಸಿ, ಕೂಡಲೇ ನಮ್ಮ ಗ್ರಾಮದಲ್ಲಿ ಹುಬ್ಬಳ್ಳಿ ವಿಜಯಪುರ ಮಾರ್ಗದ ಬಸ್ಗಳ ನಿಲುಗಡೆ ವ್ಯವಸ್ಥೆ ಮಾಡಬೇಕು.ಇಲ್ಲ ಹೆಚ್ಚುವರಿ ಬಸ್ ಬಿಡಬೇಕೆಂದು ಆಗ್ರಹಿದ್ದಾರೆ