/newsfirstlive-kannada/media/media_files/2025/08/20/sujatha-bhat4-2025-08-20-21-27-43.jpg)
ಸುಜಾತ ಭಟ್
ರಾಜ್ಯದಲ್ಲಿ ವಾಸಂತಿ ನಾಪತ್ತೆ ಕೇಸ್ ಮತ್ತೆ ಸದ್ದು ಮಾಡುತ್ತಿದೆ. ವಾಸಂತಿಯನ್ನು ಅನನ್ಯ ಭಟ್ ನಾಪತ್ತೆ ಎಂದು ದೂರು ನೀಡಿದ್ದ ಸುಜಾತ ಭಟ್ ಈಗ ಸ್ಪೋಟಕ ಮಾಹಿತಿ ಹೊರಗೆಡವಿದ್ದಾರೆ.
ವಾಸಂತಿ ಸತ್ತಿಲ್ಲ, ಬದುಕಿದ್ದಾಳೆ ಅಂತ ಅನ್ನಿಸ್ತಿದೆ. ಖ್ಯಾತ ನಟನ ತಮ್ಮ ಪೀಟರ್ ರೈ ಮೇಲೆ ಅನುಮಾನ ಇದೆ ಎಂದಿದ್ದಾರೆ. ವಾಸಂತಿ ಪ್ರಕರಣದಲ್ಲಿ ಎ-2ನೇ ಈ ಖ್ಯಾತ ನಟನ ಸೋದರ. ಈ ಬಗ್ಗೆ ಅನುಮಾನ ಇದೆ ಎಂದು SIT ಗೆ ಹೇಳಿದ್ದೆ. ನನಗೆ ಯಾವ ನಟನಿಂದಲೂ ಹಣ ಬಂದಿಲ್ಲ. ನನಗೂ ಆ ನಟನಿಗೂ ಸಂಬಂಧ ಇಲ್ಲ . ವಾಸಂತಿ ಫೋಟೋಗೆ ಅಂದು ಬೊಟ್ಟು ಇಟ್ಟಿದ್ದು ನಾನೇ . ನಾನೇ ಫೋಟೋಗೆ ಬೊಟ್ಟು ಇಟ್ಟಿದ್ದು . ಅನನ್ಯ ಭಟ್ ಫೋಟೋ ತೋರಿಸಿ ಎಂದು ಮಾಧ್ಯಮದವರು ಒತ್ತಡ ಹಾಕಿದ್ರು. ಅದೇ ಒತ್ತಡದಲ್ಲಿ ವಾಸಂತಿ ಫೋಟೋ ಹಣೆಗೆ ಬೊಟ್ಟು ಇಟ್ಟೆ ಎಂದು ಸುಜಾತ ಭಟ್ ಹೇಳಿದ್ದಾರೆ.
ಹಾಗಾದರೇ, ವಾಸಂತಿ ಕೇಸ್ ನಲ್ಲಿ ಎ-2 ಪೀಟರ್ ರೈ ಸೋದರ ಯಾರು ಎಂಬ ಪ್ರಶ್ನೆ ಉದ್ಭವವಾಗಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ನಟ ಈಗ ಬಹುಭಾಷಾ ನಟ. ಆತನ ಸೋದರನೇ ವಾಸಂತಿ ಕೇಸ್ ನಲ್ಲಿ ಎ-2 ಪೀಟರ್ ರೈ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.