ಧರ್ಮಸ್ಥಳದ ವೀರೇಂದ್ರ ಹೆಗಡೆ ಅವರ ಬಳಿ ಕ್ಷಮೆ ಕೇಳುತ್ತೇನೆ ಎಂದ ಸುಜಾತ ಭಟ್‌: ನಾನು ಪಾತ್ರಧಾರಿ, ಸೂತ್ರಧಾರರು ಬೇರೆ ಎಂದ ಸುಜಾತ ಭಟ್‌

ಸುಜಾತ ಭಟ್, ತಮ್ಮ ಮಗಳು ಅನನ್ಯ ಭಟ್ ಧರ್ಮಸ್ಥಳದಲ್ಲಿ 23 ವರ್ಷದ ಹಿಂದೆ ನಾಪತ್ತೆಯಾಗಿದ್ದಾರೆ. ಧರ್ಮಸ್ಥಳದ ಬಳಿಯೇ ಆಕೆಯ ಶವನನ್ನು ಹೂಳಲಾಗಿದೆ ಎಂದು ದೂರು ನೀಡಿದ್ದರು. ಈಗ ತಮ್ಮ ಹೇಳಿಕೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ಬಳಿ ಹೋಗಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

author-image
Chandramohan
SUJATHA_BHAT (1)

ಸುಳ್ಳು ದೂರು ನೀಡಿದ್ದ ಸುಜಾತ ಭಟ್‌

Advertisment
  • ಸುಜಾತ ಭಟ್ ರಿಂದ ಈಗ ಕ್ಷಮೆಯ ಮಾತು
  • ಧರ್ಮಸ್ಥಳದ ವೀರೇಂದ್ರ ಹೆಗಡೆ ಬಳಿ ಕ್ಷಮೆ ಕೇಳುತ್ತೇನೆ ಎಂದ ಸುಜಾತ ಭಟ್‌
  • ಕ್ಷಮೆ ಚಿಕ್ಕದು, ಕ್ಷಮಿಸಿದ್ರೆ ಸಾಕು ಎಂದ ಸುಜಾತ ಭಟ್‌

ಮಾಸ್ಕ್ ಮ್ಯಾನ್  ದೆಹಲಿ ಯಾತ್ರೆಯ ಕುರಿತು ಸ್ಫೋಟಕ ವಿಚಾರವನ್ನು   ಸುಜಾತ ಭಟ್   ಈಗ ಪ್ರಸ್ತಾಪಿಸಿದ್ದಾರೆ.  ಪ್ರತಿಯೊಂದು ಹಂತದಲ್ಲೂ ನಾನು ಮೋಸ ಹೋದೆ.  ಅಂದು ದೆಹಲಿ ಹೋದಾಗ ಮಾಸ್ಕ್ ಮ್ಯಾನ್ ಜೊತೆಗಿದ್ದ.  ಆದ್ರೆ ಈತನೇ ಮಾಸ್ಕ್ ಮ್ಯಾನ್ ಅಂತ ಗೊತ್ತಿರಲಿಲ್ಲ. ಈ ಗ್ಯಾಂಗ್ ನಲ್ಲಿದ್ದ ಒಬ್ಬರು ಮಾಸ್ಕ್ ಮ್ಯಾನ್ ನ ತೋರಿಸಿ ನನ್ನ ಬಾಡಿಗಾರ್ಡ್ ಎಂದು ಪರಿಚಯಿಸಿದ್ರು.  ನಾನು ಕೂಡ ಆತ ಬಾಡಿ ಗಾರ್ಡ್ ಅಂದುಕೊಂಡಿದ್ದೆ  ಎಂದಿದ್ದಾರೆ.
ಇನ್ನೂ  ಈ  ಸುಜಾತ ಭಟ್ ಮನೆಯಲ್ಲಿ ಒಂದು ದಿನ  ಮಾಸ್ಕ್ ಮ್ಯಾನ್ ಇದ್ದನಂತೆ.  ಮಾಸ್ಕ್ ಮ್ಯಾನ್ ಒಂದು ದಿನ ನನ್ನ ಮನೆಯಲ್ಲಿದ್ದ.  ಆದರೇ,  ಈತ ಮಾಸ್ಕ್ ಮ್ಯಾನ್ ಅಂತ ಗೊತ್ತಿರಲಿಲ್ಲ. ಆ ವ್ಯಕ್ತಿಯನ್ನು  ಬಾಡಿಗಾರ್ಡ್ ಅಂತ ಅಂದುಕೊಂಡಿದ್ದೆ. ಕೋರ್ಟ್ ಗೆ ಬಂದಾಗ, ಮುಖ ರಿವೀಲ್ ಆದಾಗಲೇ,  ನನಗೂ ಈತ ಮಾಸ್ಕ್ ಮ್ಯಾನ್ ಅಂತ ಗೊತ್ತಾಗಿದ್ದು.  ಅಲ್ಲಿಯ ತನಕ ನನಗೂ ಮಾಸ್ಕ್ ಮ್ಯಾನ್ ಬಗ್ಗೆ ಗೊತ್ತಿರಲಿಲ್ಲ ಎಂದು ಸುಜಾತ ಭಟ್ ಹೇಳಿದ್ದಾರೆ. 

Veerendra heggade



ಧರ್ಮಸ್ಥಳದ ವೀರೆಂದ್ರ ಹೆಗಡೆಯವರ ಹತ್ತಿರ ಹೋಗಿ ಕ್ಷಮೆ ಕೇಳ್ತಿನಿ ಎಂದು ಸುಜಾತ ಭಟ್ ಹೇಳಿದ್ದಾರೆ.  ಅನನ್ಯ ಭಟ್ ಕೇಸ್ ನಲ್ಲಿ ನಾನು ಪಾತ್ರಧಾರಿ.  ಸೂತ್ರಧಾರಿಗಳು ಬೇರೆ ಇದ್ದಾರೆ.  ಅವರ ಹೆಸರು ಹೇಳಲ್ಲ .  ಅವರವರು ಮಾಡಿದ ಕರ್ಮ,  ಅವರವರೇ ಅನುಭವಿಸುತ್ತಾರೆ. ನಾನು ಮಾಡಿದ ಕರ್ಮ ನಾನು ಅನುಭವಿಸುತ್ತೇನೆ. ನಾನು ಮಾಡಿದ ತಪ್ಪಿಗೆ ಧರ್ಮಸ್ಥಳಕ್ಕೆ ಹೋಗಿ ಕ್ಷಮೆ ಕೇಳುತ್ತೇನೆ.  ವೀರೇಂದ್ರ ಹೆಗ್ಗಡೆಯವರ ಹತ್ತಿರ ಹೋಗಿ ಕ್ಷಮೆ ಕೇಳುತ್ತೇನೆ.  ಯಾವಾಗ ಹೋಗ್ಬೇಕೆಂದು ಇನ್ನೂ ನಿರ್ಧಾರ ಮಾಡಿಲ್ಲ.  ಕ್ಷಮೆ ಕೂಡ ಚಿಕ್ಕದು, ಕ್ಷಮಿಸಿದ್ರೆ ಸಾಕು ಎಂದು ಸುಜಾತ ಭಟ್ ಹೇಳಿದ್ದಾರೆ. 

sujatha(2)



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Sujata bhat
Advertisment