ಯಾವುದನ್ನೇ ಆಗಲಿ ಆರೋಪ ಮಾಡುವುದು ಸುಲಭ. ಆದರೆ ಅದನ್ನು ಪ್ರೂ ಮಾಡೋದು ಮುಖ್ಯ. ಯಾರೋ ಒಬ್ಬರು ಹೇಳಿದ ತಕ್ಷಣ ಅದನ್ನು ನಿಜ ಆಗಬೇಕು ಅಂತ ಏನೂ ಇಲ್ಲ. ತನಿಖೆ ಮಾಡುತ್ತಿದ್ದಾರೆ ಜವಾಬ್ದಾರಿ ಇರುವಂತವರು ಎಸ್​ಐಟಿ ತನಿಖೆ ಮಾಡುತ್ತಿದೆ. ಎಲ್ಲ ಮಾಹಿತಿ ಬಂದ ಮೇಲೆ ಅವರು ಏನು ಅಂತ ಹೇಳುತ್ತಾರೆ. ಆ ವರೆಗೆ ಕಾಯಬೇಕು. ಇದರ ನಡುವೆ ನಾವೇ ಒಬ್ಬೊಬ್ಬರು ಒಂದೊಂದು ಐಡಿಯಾ, ಥಿಯರಿ, ಜರ್ಜ್​​ಮೆಂಟ್​ ಕೊಡಬಾರದು ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಶೋಧ ಕಾರ್ಯ; ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದು ಏನು?
ಧರ್ಮಸ್ಥಳದಲ್ಲಿ ಮಹಿಳೆಯರು ಹಾಗೂ ಯುವತಿಯರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ತನಿಖೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
Subscribe to our Newsletter!
Be the first to get exclusive offers and the latest news
Advertisment