/newsfirstlive-kannada/media/media_files/2025/08/30/hassan-sp-sujitha-2025-08-30-16-04-45.jpg)
ಜೈಲು ಪಾಲಾದ ನಟೋರಿಯಸ್ ರೌಡಿ ಯಾಚೇನಹಳ್ಳಿ ಚೇತು, ಹಾಸನ ಎಸ್ಪಿ ಸುಜಿತಾ
4 ಕೊಲೆ..11 ಹಾಫ್ ಮರ್ಡರ್..ಕುಖ್ಯಾತ ರೌಡಿ ಜೈಲುಪಾಲು! - ಗುರು ಹತ್ಯೆಗೇ ಮುಹೂರ್ತ ಇಟ್ಟಿದ್ದ ಶಿಷ್ಯನ ಮುಗಿಸಿತ್ತು ಗ್ಯಾಂಗ್! - ಯಾರೀ ಯಾಚೇನಹಳ್ಳಿ ಚೇತು? ಪೊಲೀಸ್ ಸುಪ್ರೀಂ ಮೆಟ್ಟಿಲೇರಿದ್ದೇಕೆ?
ಒಂದು ಕೊಲೆ ಮಾಡಿನೇ ಬಚಾವ್ ಆಗೋದೇ ಕಷ್ಟ..ಅಂಥದ್ದರಲ್ಲಿ ನಾಲ್ಕಾರು ಕೊಲೆ ಆರೋಪಗಳು..ಹತ್ತಾರು ಕೊಲೆ ಯತ್ನಗಳು..ರಾಬರಿ, ಸುಲಿಗೆ ಎಲ್ಲಾ ಮಾಡ್ಕೊಂಡೇ ಜೈಲಿಗೆ ಹೋಗೋದು..ಬೇಲ್ ತಗೊಂಡ್ ಬರೋದು..ಇಷ್ಟೇ ಆಗಿತ್ತು ಅವನ ಬದುಕು..ಆದ್ರೆ, ಅದೆಷ್ಟೇ ಆಟಾಟೋಪಗಳನ್ನ ಆಡಿದ್ರೂ ಕಾನೂನಿನ ಸುಳಿಯಿಂದ ಪಾರಾಗೋದಕ್ಕೆ ಸಾಧ್ಯವೇ ಇಲ್ಲ ಅನ್ನೋ ಸಂದೇಶವನ್ನ ಲೋಕಲ್ ಗೂಂಡಾ ಒಬ್ಬನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸಾರಿದೆ..ದರ್ಶನ್ ಪ್ರಕರಣದಲ್ಲಾದ ಹಾಗೇನೇ ಹೈಕೋರ್ಟ್ ತೀರ್ಪನ್ನ ರದ್ದು ಮಾಡಿರೋ ಸುಪ್ರೀಂ ಕೋರ್ಟ್ ಅವನ ಪಾಪಕೃತ್ಯಗಳಿಗೆ ಜೈಲು ಸೇರುವಂತೆ ಮಾಡಿದೆ..
ಕೆಜಿಎಫ್ ಸಿನಿಮಾದ ರಾಕಿಭಾಯ್ ರೇಂಜಿಗೆ ಬಿಲ್ಡಪ್ ಕೊಡ್ತಿರೋ ಇವನೇ ಗನ್ನಿಂದ ಓಪನ್ ಫೈರ್ ಮಾಡಿದ ಸೀನ್ನಲ್ಲಿದ್ದದ್ದು..ನೀವ್ ಇಷ್ಟೆಲ್ಲಾ ನೋಡಿದ್ಮೇಲೆ ನಾವ್ ನಿಮಗೆ ಇವನ ಬಗ್ಗೆ ಜಾಸ್ತಿ ಹೇಳೋದೇ ಬೇಡ..ಇವನೊಬ್ಬ ಭೂಗತ ಜಗತ್ತಿನ ಸದಸ್ಯ ಅನ್ನೋದು ಈಸಿಯಾಗಿಯೇ ಗೊತ್ತಾಗಿಬಿಡುತ್ತೆ. ಇವ್ನು ಭೂಗತ ಜಗತ್ತಿನ ಸದಸ್ಯ ಹೌದು..ಆದ್ರೆ, ಅಂತಿಂಥಾ ಸದಸ್ಯ ಅಲ್ಲ..ಇಡೀ ಹಾಸನ ಜಿಲ್ಲೆ ಕಂಡ ಭಯಾನಕ ರೌಡಿಶೀಟರ್..ರಕ್ತನೇ ಇವನ ಲ್ಯಾಂಡ್ಮಾರ್ಕು..ಕೊಲೆ, ಸುಲಿಗೆಯೇ ಬ್ಯುಸಿನೆಸ್ಸು...ಇವನೆಷ್ಟು ಭಯಾನಕ ಅನ್ನೋದಕ್ಕೆ ಇವನ ಹಿಸ್ಟರಿನ ಎಳೆ ಎಳೆಯಾಗಿ ನಿಮಗೆ ಹೇಳ್ತೀವಿ..ಇವನ ಆಟಾಟೋಪಕ್ಕೆ ಬ್ರೇಕ್ ಹಾಕ್ಲೇಬೇಕು ಅಂತಾ ಪೊಲೀಸರು ಸುಪ್ರೀಂ ಕೋರ್ಟಿನತನಕ ಹೋಗಿದ್ದರು ಅಂದ್ರೆ ನೀವು ನಂಬಲೇಬೇಕು
ನಟೋರಿಯಸ್ ರೌಡಿಶೀಟರ್ ಚೇತು ಸರೆಂಡರ್!
ಹಾಸನ ಕಂಡ ಕುಖ್ಯಾತ ಕ್ರಿಮಿನಲ್ಗೆ ಮತ್ತೆ ಜೈಲು!
ಚೇತು..ಅಲಿಯಾಸ್ ಯಾಚೇನಹಳ್ಳಿ ಚೇತು..ಹಾಸನ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ನಟೋರಿಯಸ್ ರೌಡಿಶೀಟರ್ ಚೇತನ್ ಕೊನೆಗೂ ನ್ಯಾಯಾಲಯಕ್ಕೆ ಸರೆಂಡರ್ ಆಗಿದ್ದಾನೆ..ಈ ಹಿಂದೆ 2023ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಹಾಗೂ ಗೂಂಡಾ ಕಾಯ್ದೆಯಡಿ ಚೇತನ್ ಮೇಲೆ ಕೇಸ್ ದಾಖಲಾಗಿತ್ತು.ಪ್ರಕರಣದ ವಿಚಾರಣೆ ನಡೆಸಿದ್ದ ಚನ್ನರಾಯಪಟ್ಟಣದ ಸೆಷನ್ಸ್ ಕೊರ್ಟ್ ಚೇತನ್ ಹಾಗೂ ಇತರೆ 22 ಆರೋಪಿಗಳ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸಿತ್ತು..ಕೆಳ ನ್ಯಾಯಾಲಯ ಶಿಕ್ಷೆ ವಿಧಿಸಿರೋದನ್ನ ಪ್ರಶ್ನಿಸಿ ಚೇತನ್ ಮಾತ್ರ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದ, ಚೇತನ್ ಮೇಲ್ಮನವಿಯನ್ನ ಮಾನ್ಯ ಮಾಡಿದ್ದ ಹೈಕೋರ್ಟ್ ಆವತ್ತು ಜೀವಾವಧಿ ಶಿಕ್ಷೆಯನ್ನ ಅಮಾನತಿನಲ್ಲಿಟ್ಟಿತ್ತು...ಜಾಮೀನು ಕೊಟ್ಟಿತ್ತು..ಆದ್ರೆ, ಹಾಸನ ಎಸ್ಪಿ ಮೊಹಮ್ಮದ್ ಸುಜಿತಾ ಹಾಗೂ ಚನ್ನರಾಯಪಟ್ಟಣ ಪೊಲೀಸರು ಚೇತನ್ನನ್ನ ಬೇಲ್ ಮೇಲೆ ಆರಾಮಾಗಿ ಅಬ್ಬರ ಮಾಡ್ಕೊಂಡು ಇರೋದಕ್ಕೆ ಬಿಡಲಿಲ್ಲ..ಹೇಗಾದ್ರೂ ಮಾಡಿ ಇವನು ಮಾಡಿರೋ ಪಾಪ ಕೃತ್ಯಗಳಿಗೆ ಶಿಕ್ಷೆ ಕೊಡಿಸಲೇಬೇಕು ಅಂತಾ ಟೊಂಕ ಕಟ್ಟಿದ್ದರು..ಚೇತನ್ಗೆ ಸಿಕ್ಕ ಜಾಮೀನಿನ ವಿರುದ್ಧ ಸುಪ್ರೀಂ ಕೋರ್ಟ್ಗ ಮೇಲ್ಮನವಿ ಸಲ್ಲಿಸಿದ್ದರು..ಸುಪ್ರೀಂ ಕೋರ್ಟ್ನಲ್ಲಿ ಪೊಲೀಸರ ವಾದವನ್ನ ಪುರಸ್ಕರಿಸಿದ ನ್ಯಾಯಾಲಯ ಚೇತುಗೆ ಹೈಕೋರ್ಟ್ ಕೊಟ್ಟಿದ್ದ ಜಾಮೀನನ್ನ ರದ್ದು ಮಾಡಿತ್ತು. 7 ದಿನಗಳ ಒಳಗೆ ಶರಣಾಗುವಂತೆ ನ್ಯಾಯಮೂರ್ತಿಗಳು ಚೇತನ್ಗೆ ಸೂಚನೆ ಕೊಟ್ಟಿದ್ರು. ಸುಪ್ರೀಂಕೋರ್ಟ್ ಆದೇಶದಂತೆ ನಟೋರಿಯಸ್ ರೌಡಿ ಯಾಚೇನಹಳ್ಳಿ ಚೇತನ್ ಚನ್ನರಾಯಪಟ್ಟಣ ತಾಲೂಕಿನ ಕೋರ್ಟ್ಗೆ ಬಂದು ಸರೆಂಡರ್ ಆಗಿದ್ದಾನೆ..ಈ ಮೂಲಕ ಹಾಸನ ಕಂಡ ಕುಖ್ಯಾತ ರೌಡಿ ಶೀಟರ್ ಮತ್ತೆ ಜೈಲುಪಾಲಾಗಿದ್ದಾನೆ..
1 ಡಬಲ್ ಮರ್ಡರ್, 4 ಕೊಲೆ, 11 ಹಾಫ್ ಮರ್ಡರ್!
ತನ್ನದೇ ಪಟಾಲಂ ಕಟ್ಟಿಕೊಂಡು ಮೆರೆಯುತ್ತಿದ್ದ ರೌಡಿಶೀಟರ್!
ಈ ಯಾಚೇನಹಳ್ಳಿ ಚೇತನ್ ಅದೆಷ್ಟು ನಟೋರಿಯಸ್ ಅನ್ನೋದನ್ನ ಅವನ ವಿಡಿಯೋಗಳನ್ನ ನೊಡಿದ್ರೇನೇ ಗೊತ್ತಾಗುತ್ತೆ..ಹಾಸನ ಜಿಲ್ಲೆಯಲ್ಲಿ ಹವಾ ಮೇಂಟೇನ್ ಮಾಡ್ಬೇಕು, ಆ ಹವಾದಿಂದಲೇ ಹಣನೂ ಮಾಡ್ಬೇಕು ಅನ್ನೋ ಕ್ರಿಮಿನಲ್ ಗುರಿಗಳನ್ನ ಇಟ್ಕೊಂಡಿದ್ದ ಈತನ ಮೇಲೆ ಇರೋ ಪ್ರಕರಣಗಳು ಒಂದಲ್ಲ..ಎರಡಲ್ಲ.ಇವನ ಮೇಲೆ ಒಂದು ಜೋಡಿಕೊಲೆಯ ಕೇಸ್ ಇದೆ. 4 ಮರ್ಡರ್ ಕೇಸ್ ಇದೆ. 11 ಹಾಫ್ ಮರ್ಡರ್ ಪ್ರಕರಣಗಳಿವೆ. ಕೊಲೆ ಸುಲಿಗೆ ದರೋಡೆ ಎಲ್ಲಾ ಸೇರಿ ಬರೋಬ್ಬರಿ 26 ಪ್ರಕರಣಗಳು ಇವನ ಮೇಲಿತ್ತು ಅಂದ್ರೆ ಇವನೆಂಥಾ ನಟೋರಿಯಸ್ ಅನ್ನೋದನ್ನ ಅರ್ಥ ಮಾಡ್ಕೊಳ್ಳಿ. ಇಂಥವನ ಮೇಲೆ ಹಾಸನ ಪೊಲೀಸರು ಗೂಂಡಾ ಕಾಯ್ದೆ ಕೂಡ ಹಾಕಿದ್ದರು. ಎಷ್ಟೇ ವಾರ್ನಿಂಗ್ ಮಾಡಿದ್ರೂ ಇವನು ಜಿಲ್ಲೆಯಲ್ಲಿ ತನ್ನ ಉಪಟಳವನ್ನ ನಿಲ್ಲಿಸಿರಲಿಲ್ಲ..ಮೆರೆದಿದ್ದೇ ಮೆರೆದಿದ್ದು..ಸಿಟಿಯಲ್ಲಿ ನಡೀತಿದ್ದ ಮೇಜರ್ ಕ್ರೈಂಗಳಲ್ಲಿ ಇವನ ಪಾತ್ರ ಇದ್ದೇ ಇರ್ತಿತ್ತು ಅನ್ನೋದು ಪೊಲೀಸರೇ ಹೇಳುವ ಮಾತು
ಇಷ್ಟೇ ಅಲ್ಲ..ಯಾಚೇನಹಳ್ಳಿ ಚೇತನ್ ಅಂದ್ರೆ ಸಾಕು ಜನ ಭಯಬೀಳೋದು ಅಂದ್ರೆ ಇವ್ನಿಗೆ ತುಂಬಾನೇ ಕಿಕ್ ಕೊಡ್ತಿತ್ತು..ಹಾಗೇ ಭಯ ಬೀಳಿಸಿ ಬೀಳಿಸಿಯೇ ಹಲವರ ಬಳಿ ಲಕ್ಷ ಲಕ್ಷ ಹಣ ಸುಲಿಗೆ ಕೂಡ ಮಾಡ್ತಿದ್ನಂತೆ..ಆ ಹಣದಿಂದಾನೆ ತನ್ನದೇ ಒಂದು ಗ್ಯಾಂಗ್ ಕಟ್ಕೊಂಡ್ ಮೆರೀತಿದ್ದ ಚೇತನ್ ಸೋಷಿಯಲ್ ಮೀಡಿಯಾದಲ್ಲಿ ತನ್ನ ಅಬ್ಬರಗಳನ್ನೆಲ್ಲಾ ಅಪ್ಡೇಟ್ ಮಾಡ್ತಾನೇ ಇದ್ದ...
ತಾನು ನಡೆದಿದ್ದೇ ದಾರಿ ತನ್ನದೇ ಪಟಾಲಂ ಕಟ್ಕೊಂಡು ಹವಾ ಮೇಂಟೇನ್ ಮಾಡ್ತಿದ್ದ ಈ ನಟೋರಿಯಸ್ಗೆ ಸುಪ್ರೀಂ ಕೋರ್ಟ್ ಸೂಪರ್ ಡೂಪರ್ ಶಾಕ್ ಕೊಟ್ಟಿದೆ..ಅಂದಹಾಗೇ, ಚೇತನ್ ಹಲವು ಪ್ರಕರಣಗಳನ್ನ ಎದುರಿಸುತ್ತಿದ್ದನಾದ್ರೂ ಇವನು ಇವತ್ತು ಜೈಲು ಸೇರುವಂತೆ ಮಾಡಿದ್ದು, ಅದೊಂದು ಪ್ರಕರಣ..ಒಂದೇ ಒಂದು ಕೊಲೆ ಪ್ರಕರಣ.
ರೌಡಿ ಯಾಚೇನಹಳ್ಳಿ ಚೇತು
ರೌಡಿಶೀಟರ್ ಮಾಸ್ತಿಗೌಡನ ಅಟ್ಟಾಡಿಸಿ ಕೊಂದಿದ್ದರು!
ಆ ಕೊಲೆ ಕಂಡ ಇಡೀ ಹಾಸನ ಜಿಲ್ಲೆ ಬೆಚ್ಚಿಬಿದ್ದಿತ್ತು..!
ಒಬ್ಬ ವ್ಯಕ್ತಿಯನ್ನ ಅದೇಗೆ ಅಟ್ಟಾಡಿಸಿ ಕುರಿ ಕತ್ತರಿಸಿದ ಹಾಗೇ ಕತ್ತರಿಸಿ ಹಾಕ್ತಾರೆ ಅಂತಾ.. ಅಂದಹಾಗೇ, ಆ ಭಯಾನಕ ಹತ್ಯೆ ಕಂಡು ಆವತ್ತು ಇಡೀ ಹಾಸನ ಜಿಲ್ಲೆ ಬೆಚ್ಚಿಬಿದ್ದಿತ್ತು..ಆವತ್ತು ಹಂತಕರ ಮಚ್ಚಿಗೆ ಬಲಿಯಾದವನು ಬೇರಾರೂ ಅಲ್ಲ, ಹಾಸನ ಜಿಲ್ಲೆಯ ಮತ್ತೊಬ್ಬ ಕುಖ್ಯಾತ ರೌಡಿಶೀಟರ್ ಆಗಿದ್ದ ಮಾಸ್ತಿಗೌಡ ಅಲಿಯಾಸ್ ಮಾಸ್ತಿ..
ಅದು 2023 ಜುಲೈ 4ನೇ ತಾರೀಖು..ತನ್ನ ಸ್ವಗ್ರಾಮ ಹೊನ್ನಮಾರನಹಳ್ಳಿಯಲ್ಲಿ ಮನೆ ಕಟ್ಟೋದಕ್ಕೆ ಟೈಲ್ಸ್ ಖರೀದಿ ಮಾಡೋದಕ್ಕೆ ಮಾಸ್ತಿಗೌಡ ಚನ್ನರಾಯಪಟ್ಟಣಕ್ಕೆ ಬಂದಿದ್ದ..ಚನ್ನರಾಯಪಟ್ಟಣದ ಧನಲಕ್ಷ್ಮಿ ಚಿತ್ರಮಂದಿರದ ಬಳಿ ಅವನು ಬರ್ತಿದ್ದಂತೆ ಅಲ್ಲಿ ಹಂತಕರ ಪಡೆ ಹೊಂಚು ಹಾಕಿ ಕುಳಿತಿತ್ತು..ಆ ಗ್ಯಾಂಗ್‌ನಲ್ಲಿದ್ದ ಹುಲಿವಾಲ ಚೇತು, ಮಂಡ್ಯ ಶಿವು, ರಾಕಿ ಅನ್ನೋ ಪಾತಕಿಗಳು ಹಾಡಹಗಲೇ ಮಾಸ್ತಿಗೌಡನನ್ನ ಅಟ್ಟಾಡಿಸಿ ಮಚ್ಚು ಲಾಂಗುಗಳಿಂದ ಕೊಚ್ಚಿ ಕೊಲೆಗೈದಿದ್ದರು. ಬಳಿಕ ಇನ್ನೋವಾ ಕಾರಿನಲ್ಲಿ ಪರಾರಿಯಾಗಿದ್ದರು. ಸಿನಿಮೀಯ ರೀತಿಯಲ್ಲಿ ನಡೆದಿದ್ದ ಈ ಹತ್ಯೆ ಸಹಜವಾಗಿಯೇ ಮಹಿಳೆಯರು, ಮಕ್ಕಳಾದಿಯಾಗಿ ಜನರಲ್ಲಿ ಭಾರಿ ಭಯ ಹುಟ್ಟಿಸಿತ್ತು. ಅಂದು ಎಸ್ಪಿ ಆಗಿದ್ದ ಹರಿರಾಂ ಶಂಕರ್ ಕೊಲೆಗಡುಕರ ಪತ್ತೆಗಾಗಿ ವಿಶೇಷ ತಂಡವನ್ನೂ ರಚನೆ ಮಾಡಿದ್ದರು. ಆಗ ನಗರ ಠಾಣೆ ಇನ್ಸ್‌ಪೆಕ್ಟರ್ ಆಗಿದ್ದ ಕೆ.ಎಂ.ವಸಂತ್ ತನಿಖಾಧಿಕಾರಿಯಾಗಿದ್ದರು..ಅದ್ಯಾವಾಗ ಪೊಲೀಸರು ತಮ್ಮನ್ನ ಹುಡುಕಾಡ್ತಿದ್ದಾರೆ ಅಂತಾ ಗೊತ್ತಾಯ್ತೋ, ಹತ್ಯೆ ಮಾಡಿದ ಮೂವರು ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಶರಣಾಗಿಬಿಟ್ಟಿದ್ರು..ಶರಣಾಗೋ ಮುಂಚೆ ಒಂದು ವಿಡಿಯೋ ಕೂಡ ರಿಲೀಸ್ ಮಾಡಿದ್ದರು.
ಕೊಲೆಯಾದ ಮಾಸ್ತಿಗೌಡ.
ರೌಡಿಶೀಟರ್ ಯಾಚೇನಹಳ್ಳಿ ಚೇತು ವಿಚಾರವಾಗಿ ನಡೆದ ಕೊಲೆ ಕೇಸ್ನಲ್ಲಿ ಪೊಲೀಸರು ನಮ್ಮನ್ನ ಹುಡುಕ್ತಿದ್ದಾರೆ. ಹಾಗಾಗಿ, ನಾವು ಸರೆಂಡರ್ ಆಗ್ತಿದ್ದೀವಿ. ಆದರೆ ಹಾಸನದಲ್ಲಿ ನಡೆದ ಮಾಸ್ತಿಗೌಡನ ಕೊಲೆ ಬಗ್ಗೆ ನಮಗೆ ಏನೇನೂ ಗೊತ್ತಿಲ್ಲ ಅಂತಾ ಆರೋಪಿಗಳು ವಿಡಿಯೋ ಮೂಲಕ ಹೇಳಿಕೆ ನೀಡಿ ಸರೆಂಡರ್ ಆಗಿದ್ದರು..ಬಳಿಕ ಪ್ರಕರಣದ ತನಿಖೆ ನಡೆಸಿದ್ದ ಪೊಲೀಶರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಕೂಡ ಸಲ್ಲಿಸಿದ್ದರು. ಅಂದಹಾಗೇ ಆವತ್ತು ಮಾಸ್ತಿಗೌಡನ ಹತ್ಯೆ ಮಾಡಿದವರ ಟೀಮ್ನಲ್ಲಿ ಈ ಯಾಚೇನಹಳ್ಳಿ ಚೇತನ್ ಇರಲಿಲ್ಲ..ಪ್ರಕರಣವೊಂದರಲ್ಲಿ ಕಲಬುರಗಿ ಜೈಲು ಸೇರಿದ್ದ..ಕಲಬುರಗಿ ಜೈಲಿನಲ್ಲಿ ಇದ್ದುಕೊಂಡೇ ಮಾಸ್ತಿಗೌಡನ ಹತ್ಯೆಗೆ ತನ್ನ ಹುಡುಗರಿಗ ಸುಪಾರಿ ಕೊಟ್ಟಿದ್ದ..
ಮಾಸ್ತಿಗೌಡನ ಕೊಲೆ ಕೇಸ್ನ ವಿಚಾರಣೆ ನಡೆಸಿದ್ದ ಚನ್ನರಾಯಪಟ್ಟಣದ ನ್ಯಾಯಾಲಯ, ಚೇತನ್ನ ಹಿಸ್ಟರಿಯನ್ನೂ ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.. ಆ ತೀರ್ಪಿನ ವಿರುದ್ಧವೇ ಚೇತನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ ಶಿಕ್ಷೆಯನ್ನ ಅಮಾನತಿನಲ್ಲಿಟ್ಟಿದ್ದು. ಬಟ್, ಹಾಸನ ಜಿಲ್ಲಾ ಪೊಲೀಸರು ಇಂತಹ ಸಮಾಜಘಾತುಕರು ಹೊರಗೇ ಇದ್ರೇ ಸಮಾಜದ ಸ್ವಾಸ್ಥ್ಯ ಖಂಡಿತ ಹಾಳಾಗುತ್ತೆ ಅನ್ನೋದನ್ನ ಅರಿತುಕೊಂಡಿದ್ರು ಅನ್ಸುತ್ತೆ..ಆ ಕಾರಣದಿಂದಾನೇ ಮಾಸ್ತಿಗೌಡ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ಚೇತನ್ ಅಲಿಯಾಸ್ ಯಾಚೇನಹಳ್ಳಿ ಚೇತು ಮತ್ತೆ ಜೈಲು ಪಾಲಾಗುವಂತೆ ಮಾಡಿದ್ದಾರೆ..
ಆವತ್ತು ಅದ್ಯಾವ ಮಾಸ್ತಿಗೌಡನನ್ನ ಚೇತು ಹತ್ಯೆ ಮಾಡಿಸಿದನಲ್ಲಾ, ಮಾಸ್ತಿಗೌಡ ಏನೂ ಚೇತುವಿಗೆ ಆಜನ್ಮ ಶತ್ರುಆಗಿರಲಿಲ್ಲ..ಬದಲಾಗಿ ಒಂದು ಕಾಲದಲ್ಲಿ ಇಬ್ಬರೂ ಗುರುಶಿಷ್ಯರಂತಿದ್ದವರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.