/newsfirstlive-kannada/media/post_attachments/wp-content/uploads/2024/02/MODI_TN_MK_STALIN.jpg)
ಕೇಂದ್ರದ ಮೋದಿ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಗೆ ತಮಿಳುನಾಡು ರಾಜ್ಯ ಸರ್ಕಾರ ನೇರವಾಗಿಯೇ ಸೆಡ್ಡು ಹೊಡೆದಿದೆ. ತನ್ನದೇ ಆದ ರಾಜ್ಯ ಶಿಕ್ಷಣ ನೀತಿಯನ್ನು ಇಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಬಿಡುಗಡೆ ಮಾಡಿದ್ದಾರೆ. ಕೊಟ್ಟೂರುಪುರಂನ ಅನ್ನಾ ಸೆಂಟಿನಾರಿ ಲೈಬ್ರರಿ ಅಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಶಿಕ್ಷಣ ನೀತಿಯನ್ನು ಸಿಎಂ ಎಂ.ಕೆ.ಸ್ಟಾಲಿನ್ ಬಿಡುಗಡೆ ಮಾಡಿದ್ದರು. ರಾಜ್ಯ ಶಿಕ್ಷಣ ನೀತಿಯು ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಗೆ ಪರ್ಯಾಯವಾಗಿದೆ. ಈ ಮೂಲಕ ತಮಿಳುನಾಡು ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪಾಲಿಸಲ್ಲ, ಅದನ್ನು ಅಳವಡಿಸಿಕೊಳ್ಳಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ. ರಾಜ್ಯ ಶಿಕ್ಷಣ ನೀತಿಯಲ್ಲಿ 2 ಭಾಷಾ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ. ತಮಿಳು ಮತ್ತು ಇಂಗ್ಲೀಷ್ ಭಾಷಾ ನೀತಿಯನ್ನು ತಮಿಳು ನಾಡು ರಾಜ್ಯ ಸರ್ಕಾರ ಅಳವಡಿಸಿಕೊಳ್ಳಲಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳುವಂತೆ ಶಿಫಾರಸ್ಸು ಮಾಡಲಾಗಿತ್ತು. ಸ್ನಾತಕ ಪದವಿ ಕೋರ್ಸ್ ಗಳಿಗೆ 11 ಮತ್ತು 12ನೇ ತರಗತಿಯ ಒಟ್ಟಾರೆ ಅಂಕಗಳನ್ನು ಪರಿಗಣಿಸುವಂತೆ ರಾಜ್ಯ ಶಿಕ್ಷಣ ನೀತಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಹೀಗಾಗಿ ಸ್ನಾತಕ ಪದವಿ ಕೋರ್ಸ್ ಗಳಿಗೆ ವಿಶೇಷವಾಗಿ ಆರ್ಟ್ಸ್ , ಸೈನ್ಸ್ ಪದವಿ ಕೋರ್ಸ್ ಗಳಲ್ಲಿ ಕಾಮನ್ ಎಂಟ್ರೆನ್ಸ್ ಪರೀಕ್ಷೆ ಇರಲ್ಲ.
ತಮಿಳುನಾಡು ರಾಜ್ಯ ಸರ್ಕಾರವು 2022 ರಲ್ಲಿ ನಿವೃತ್ತ ನ್ಯಾಯಮೂರ್ತಿ ಮುರುಗೇಶನ್ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ನೀತಿಯ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು 14 ಮಂದಿ ಸಮಿತಿ ರಚಿಸಿತ್ತು. ಕಳೆದ ವರ್ಷದ ಜುಲೈನಲ್ಲಿ ಸಮಿತಿಯು ಸಿಎಂ ಎಂ.ಕೆ.ಸ್ಟಾಲಿನ್ ಗೆ ತನ್ನ ವರದಿ ನೀಡಿತ್ತು. ಈ ವರದಿಯನ್ನು ಇಂದು ಸಿಎಂ ಎಂ.ಕೆ.ಸ್ಟಾಲಿನ್ ಬಿಡುಗಡೆ ಮಾಡಿದ್ದಾರೆ.
ಇನ್ನೂ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ 3,5, 8 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಪ್ರಸ್ತಾಪಿಸಲಾಗಿತ್ತು. ಅದನ್ನು ತಮಿಳುನಾಡು ರಾಜ್ಯ ಶಿಕ್ಷಣ ನೀತಿಯೂ ತಿರಸ್ಕರಿಸಿದೆ. 3 ಮತ್ತು 5, 8 ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ಸಾಮಾಜಿಕ ನ್ಯಾಯದ ವಿರೋಧಿ. ಹೆಚ್ಚಿನ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ. ಶಿಕ್ಷಣದ ವಾಣಿಜ್ಯೀಕರಣಕ್ಕೆ ಕಾರಣವಾಗುತ್ತೆ ಎಂದು ತಮಿಳುನಾಡು ರಾಜ್ಯ ಶಿಕ್ಷಣ ನೀತಿ ಹೇಳಿದೆ.
மாநில பள்ளிக்கல்வி கொள்கை - 2025 வெளியிட்டதில் பெரும் மகிழ்ச்சியடைகிறேன்; தமிழ்நாட்டின் முற்போக்கு சிந்தனைகயை அடிப்படையாக வைத்து, எதிர்காலத்துக்கு தேவையான தொலைநோக்கு பார்வையோடு இதனை உருவாக்கி இருக்கிறோம்!
— DMK IT WING (@DMKITwing) August 8, 2025
- மாண்புமிகு முதலமைச்சர் திரு @mkstalin அவர்கள்#DMK4TNpic.twitter.com/0OzvF9MWu8
ಜಸ್ಟೀಸ್ ಮುರುಗೇಶನ್ ಸಮಿತಿಯು ವಿಜ್ಞಾನ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಇಂಗ್ಲೀಷ್‌ಗೆ ಹೆಚ್ಚಿನ ಒತ್ತು ನೀಡುವಂತೆ ಶಿಫಾರಸ್ಸು ಮಾಡಿದೆ. ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಇವುಗಳ ಬಗ್ಗೆ ಹೆಚ್ಚಿನ ಹಣ ಹೂಡಿಕೆ ಮಾಡಬೇಕೆಂದು ಶಿಫಾರಸ್ಸು ಮಾಡಿದೆ. ಸದ್ಯ ಶಿಕ್ಷಣ ವಿಷಯವು ಸಮವರ್ತಿ ಪಟ್ಟಿಯಲ್ಲಿದೆ. ಅದನ್ನು ಮತ್ತೆ ರಾಜ್ಯ ಪಟ್ಟಿಗೆ ತರಬೇಕೆಂದು ಶಿಫಾರಸ್ಸು ಮಾಡಿದೆ. ಇದರಿಂದ ಶಿಕ್ಷಣದ ನೀತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳೇ ಏಕಪಕ್ಷೀಯ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತೆ.
தமிழ்நாட்டில் ஒன்றிய அரசின் புதிய கல்வி கொள்கையை செயல்படுத்த மாட்டோம் என இன்னொரு வாழும் பெரியாராக போர் முரசு கொட்டியவர்தான் நம் மாண்புமிகு முதலமைச்சர் அவர்கள். கல்விக்கு ஏற்படும் எல்லா தடைகளையும் மாண்புமிகு முதலமைச்சர் தகர்த்தெறிவார்.
— DMK IT WING (@DMKITwing) August 8, 2025
- மாண்புமிகு துணை முதலமைச்சர் திரு… pic.twitter.com/UsErSo2RTs
ತಮಿಳುನಾಡಿ ನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ತಮಿಳುನಾಡು ಪಾಲಿನ ಹಣ ಬಿಡುಗಡೆ ಮಾಡುತ್ತಿಲ್ಲ ಎಂಬ ಗಂಭೀರ ಆರೋಪ ಇದೆ. ಸಮಗ್ರ ಶಿಕ್ಷಣ ಸ್ಕೀಮ್ ನಡಿ ಕೇಂದ್ರ ಸರ್ಕಾರವು ತಮಿಳುನಾಡಿಗೆ 2,152 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡದೇ ತಡೆ ಹಿಡಿದಿದೆ. ಎನ್‌ಇಪಿ ಅನ್ನು ಜಾರಿ ಮಾಡದೇ ಇರೋದಕ್ಕೆ ಫಂಡ್ ಬಿಡುಗಡೆ ಮಾಡಿಲ್ಲ ಎಂದು ತಮಿಳುನಾಡು ರಾಜ್ಯ ಸರ್ಕಾರ ಆರೋಪಿಸಿದೆ.
ನೀಟ್ ಪರೀಕ್ಷೆಯನ್ನು ಅಳವಡಿಸಿಕೊಂಡ ರಾಜ್ಯ ಸರ್ಕಾರಗಳಿಗೆ ಮಾತ್ರವೇ ಫಂಡ್ ಅನ್ನು ಬಿಡುಗಡೆ ಮಾಡಲಾಗುತ್ತೆ ಎಂದು ಕೇಂದ್ರದ ಶಿಕ್ಷಣ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಇನ್ನೂ ಇಂದಿನ ರಾಜ್ಯ ಶಿಕ್ಷಣ ನೀತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಉದಯನಿಧಿ ಸ್ಟಾಲಿನ್ ಕೇಂದ್ರ ಸರ್ಕಾರವು ನಮಗೆ 1 ಸಾವಿರ ಕೋಟಿ ರೂಪಾಯಿ ನೀಡಿದರೂ ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲ್ಲ. ತಮಿಳುನಾಡು ರಾಜ್ಯವು ಯಾವುದೇ ವಿಧದ ಹೇರಿಕೆಯನ್ನು ಇಷ್ಟಪಡಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ