/newsfirstlive-kannada/media/media_files/2025/09/06/tata-motors-cars02-2025-09-06-12-47-45.jpg)
ಟಾಟಾ ಕಂಪನಿಯ ಕಾರ್ ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ!
ಜಿಎಸ್‌ಟಿ ಕಡಿತದ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ಟಾಟಾ ಮೋಟಾರ್ಸ್ ನಿರ್ಧರಿಸಿದೆ. ಪ್ರಯಾಣಿಕರ ವಾಹನಗಳ ಬೆಲೆಯನ್ನು 65,000 ರೂ.ಗಳಿಂದ 1.45 ಲಕ್ಷ ರೂ.ಗಳವರೆಗೆ ಇಳಿಕೆ ಮಾಡುವುದಾಗಿ ಘೋಷಿಸಿದೆ.
ಟಾಟಾ ಮೋಟಾರ್ಸ್ ತನ್ನ ಸಣ್ಣ ಕಾರು ಟಿಯಾಗೊ ಬೆಲೆಯಲ್ಲಿ 75,000 ರೂ. ಟಿಗೋರ್ ಬೆಲೆಯಲ್ಲಿ 80,000 ರೂ. ಮತ್ತು ಆಲ್ಟ್ರೋಜ್ ಬೆಲೆಯಲ್ಲಿ 1.10 ಲಕ್ಷ ರೂ.ಗಳ ಇಳಿಕೆ ಮಾಡಲಿದೆ ಎಂದು ಹೇಳಿದೆ.
ಇದೇ ರೀತಿ, ಕಾಂಪ್ಯಾಕ್ಟ್ ಎಸ್‌ಯುವಿ ಪಂಚ್ ಬೆಲೆಯಲ್ಲಿ 85,000 ರೂ. ಮತ್ತು ನೆಕ್ಸಾನ್ ಬೆಲೆಯಲ್ಲಿ 1.55 ಲಕ್ಷ ರೂ.ಗಳಷ್ಟು ಇಳಿಕೆ ಕಾಣಲಿದೆ.
ಮಧ್ಯಮ ಗಾತ್ರದ ಮಾದರಿ ಕರ್ವ್ ಕಾರಿನ ಬೆಲೆಯಲ್ಲಿಯೂ 65,000 ರೂ.ಗಳ ಇಳಿಕೆ ಕಾಣಲಿದೆ ಎಂದು ಟಾಟಾ ಮೋಟಾರ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಕಂಪನಿಯ ಪ್ರೀಮಿಯಂ ಎಸ್‌ಯುವಿಗಳಾದ ಹ್ಯಾರಿಯರ್ ಮತ್ತು ಸಫಾರಿ ಬೆಲೆಯಲ್ಲಿ ಕ್ರಮವಾಗಿ 1.40 ಲಕ್ಷ ಮತ್ತು 1.45 ಲಕ್ಷ ರೂ.ಗಳ ಇಳಿಕೆ ಕಾಣಲಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.
Full GST benefit = full joy of saving!
— Tata Motors Cars (@TataMotors_Cars) September 6, 2025
From 22nd Sept, Tata Motors cars & SUVs come home with up to ₹1.55 Lakh savings.
Book yours early - the festive season rush is on the way!#TataMotors#GSTPriceDrop#TheDriveThatMatterspic.twitter.com/xDqShudO0z
ಪ್ರಧಾನ ಮಂತ್ರಿಯವರ ದೃಷ್ಟಿಕೋನ, ಮಾನ್ಯ ಹಣಕಾಸು ಸಚಿವರ ಉದ್ದೇಶ ಮತ್ತು ನಮ್ಮ ಗ್ರಾಹಕ ಮೊದಲು ಎಂಬ ತತ್ವಕ್ಕೆ ಅನುಗುಣವಾಗಿ, ಟಾಟಾ ಮೋಟಾರ್ಸ್ ಜಿಎಸ್‌ಟಿ ಕಡಿತದ ಸಂಪೂರ್ಣ ಪ್ರಯೋಜನವನ್ನು ನಮ್ಮ ಗ್ರಾಹಕರಿಗೆ ವರ್ಗಾಯಿಸುವ ಮೂಲಕ ಈ ಸುಧಾರಣೆಯ ಉದ್ದೇಶ ಮತ್ತು ಚೈತನ್ಯವನ್ನು ಸಂಪೂರ್ಣವಾಗಿ ಗೌರವಿಸುತ್ತದೆ" ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಎಂ.ಡಿ. ಶೈಲೇಶ್ ಚಂದ್ರ ಹೇಳಿದ್ದಾರೆ.
ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈಗಾಗಲೇ 1200 ಸಿಸಿ ಮತ್ತು 4,000 ಮಿಲಿಮೀಟರ್ ವರೆಗಿನ ಪೆಟ್ರೋಲ್, ಸಿಎನ್‌ಜಿ, ಎಲ್‌ಪಿಜಿ ಕಾರ್ ಗಳ ಮೇಲಿನ ಜಿಎಸ್‌ಟಿ ಯನ್ನು ಶೇ.28 ರಿಂದ ಶೇ.18ಕ್ಕೆ ಇಳಿಕೆ ಮಾಡಲಾಗಿದೆ.
ಇನ್ನೂ 1,500 ಸಿಸಿ ಹಾಗೂ 4000 ಮಿಲಿಮೀಟರ್ ಉದ್ದದ ಡೀಸೆಲ್ ಕಾರ್ ಗಳ ಮೇಲಿನ ಜಿಎಸ್‌ಟಿಯನ್ನು ಶೇ.28 ರಿಂದ ಶೇ.18 ಕ್ಕೆ ಇಳಿಕೆ ಮಾಡಲಾಗಿದೆ.
ಇನ್ನೂ 1200 ಸಿಸಿ ಗಿಂತ ಹೆಚ್ಚಿನ ಸಿಸಿ ಪೆಟ್ರೋಲ್ ಕಾರ್ ಹಾಗೂ 1500 ಸಿಸಿ ಗಿಂತ ಹೆಚ್ಚಿನ ಡೀಸೆಲ್ ಕಾರ್ ಗಳ ಮೇಲೆ ಶೇ.40 ರಷ್ಟು ಜಿಎಸ್‌ಟಿ ವಿಧಿಸಲು ಜಿಎಸ್‌ಟಿ ಕೌನ್ಸಿಲ್ ಒಪ್ಪಿಗೆ ನೀಡಿದೆ.
ಹೀಗಾಗಿ 1200 ಸಿಸಿ ಯೊಳಗಿನ ಪೆಟ್ರೋಲ್ ಕಾರ್ ಗಳ ಬೆಲೆ ಭಾರಿ ಅಗ್ಗವಾಗುತ್ತಿದೆ. ಇದರ ಲಾಭವನ್ನು ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರಿಗೆ ವರ್ಗಾಯಿಸಲು ಬೆಲೆ ಕಡಿತವನ್ನು ಘೋಷಿಸಿದೆ.
ಜಿಎಸ್‌ಟಿ ಕೌನ್ಸಿಲ್ ತೀರ್ಮಾನದ ಪರಿಣಾಮವಾಗಿ ಕಾರ್ ಷೋರೂಮುಗಳು ಸದ್ಯ ಗ್ರಾಹಕರಿಲ್ಲದೇ ಖಾಲಿ ಹೊಡೆಯುತ್ತಿವೆ. ಗ್ರಾಹಕರು ಸೆಪ್ಟೆಂಬರ್ 22 ರವರೆಗೆ ತಮ್ಮ ಕಾರ್ ಖರೀದಿಯನ್ನು ಮುಂದೂಡಿದ್ದಾರೆ.
ಸೆಪ್ಟೆಂಬರ್ 22 ರ ನಂತರ ಈ ಬೆಲೆ ಇಳಿಕೆಯು ಜಾರಿಯಾಗಲಿದೆ. ಹೀಗಾಗಿ ಕಾರ್ ಪ್ರಿಯರು ಸೆಪ್ಟೆಂಬರ್ 22 ರ ನಂತರ ಟಾಟಾ ಮೋಟಾರ್ಸ್ ಖರೀದಿಸಿ ಈ ಬೆಲೆ ಇಳಿಕೆಯ ಲಾಭವನ್ನು ಪಡೆಯಬಹುದು. ಕುಟುಂಬ ಸಮೇತ ಕಾರ್ ನಲ್ಲಿ ಓಡಾಡಲು ಈಗ ಕಾರ್ ಖರೀದಿಸುವುದೇ ಸರಿಯಾದ ನಿರ್ಧಾರ. ಹಿಂದೆಂದೂ ಈ ಮಟ್ಟಿಗಿನ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ಸಿಕ್ಕಿರಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.