/newsfirstlive-kannada/media/media_files/2026/01/14/tata-mumbai-marathoon-hasina-2026-01-14-15-27-11.jpg)
43 ವರ್ಷದ ಓಟಗಾರ್ತಿ ಹಾಗೂ ಕೋಚ್ ಆಗಿರುವ ಹಸೀನಾ ಥೆಮಾಲಿ ಅವರು ಟಾಟಾ ಮುಂಬೈ ಮ್ಯಾರಥಾನ್ (TMM) 2026ರಲ್ಲಿ ಮೊದಲ ಬಾರಿಗೆ ನಿಧಿ ಸಂಗ್ರಹಕರಾಗಿ ಭಾಗವಹಿಸಿ ₹5,01,001 ಮೊತ್ತವನ್ನು ಸಂಗ್ರಹಿಸಿದ್ದಾರೆ. 95 ದಾನಿಗಳ ಬೆಂಬಲದೊಂದಿಗೆ ನಡೆದ ಈ ನಿಧಿ ಸಂಗ್ರಹ ಅಭಿಯಾನವು ಕರ್ನಾಟಕದಲ್ಲಿ ಪ್ಯಾಲಿಯೇಟಿವ್ ಕೇರ್ ಸೇವೆಗಳ ಬಲವರ್ಧನೆಗೆ ಮಹತ್ವದ ಕೊಡುಗೆಯಾಗಿದೆ. ಈ ನಿಧಿ ಸಂಗ್ರಹವು ಅಂತಿಮ ಹಂತದ ಕ್ಯಾನ್ಸರ್ ರೋಗಿಗಳಿಗೆ ಉಚಿತ ಹಾಗೂ ಮಾನವೀಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಹಸೀನಾ ಅವರು ಕ್ಯಾನ್ಸರ್ ರೋಗಿಗಳಿಗೆ ಸಮಗ್ರ ಪ್ಯಾಲಿಯೇಟಿವ್ ಮತ್ತು ಹಾಸ್ಪಟಲ್ ಕೇರ್ ಸೇವೆಗಳನ್ನು ಒದಗಿಸುವ ತಪಸ್ಯಾ ಫೌಂಡೇಶನ್ ಪರವಾಗಿ ನಿಧಿ ಸಂಗ್ರಹಿಸುತ್ತಿದ್ದಾರೆ. ಸಂಗ್ರಹಿಸಲಾದ ನಿಧಿಯನ್ನು ಮಂಗಳೂರಿನಲ್ಲಿ ಸಂಸ್ಥೆಯ ಮೊದಲ ವಿಶ್ವಮಟ್ಟದ ಪ್ಯಾಲಿಯೇಟಿವ್ ಕೇರ್ ಕೇಂದ್ರ ನಿರ್ಮಾಣಕ್ಕೆ ಬಳಸಲಾಗುತ್ತದೆ.
ಅನುಭವಿ ಓಟಗಾರ್ತಿ ಹಾಗೂ ಕೋಚ್ ಆಗಿರುವ ಹಸೀನಾ, ಟಾಟಾ ಮುಂಬೈ ಮ್ಯಾರಥಾನ್ ಮೂಲಕ ತಮ್ಮ ಜೀವನದ ಮೊದಲ ನಿಧಿ ಸಂಗ್ರಹ ಯಾತ್ರೆಯನ್ನು ಕೈಗೊಂಡಿದ್ದಾರೆ. ಪ್ಯಾಲಿಯೇಟಿವ್ ಕೇರ್ ಕ್ಷೇತ್ರದಲ್ಲಿ ತಪಸ್ಯಾ ಫೌಂಡೇಶನ್‌ನ ಬದ್ಧತೆಯೇ ಅವರ ಈ ಸಹಭಾಗಿತ್ವಕ್ಕೆ ಪ್ರಮುಖ ಪ್ರೇರಣೆಯಾಗಿದೆ.
ಈ ಕುರಿತು ಮಾತನಾಡಿದ ಹಸೀನಾ ಅವರು, ಟಾಟಾ ಮುಂಬೈ ಮ್ಯಾರಥಾನ್‌ನಿಂದ ನಿಧಿ ಸಂಗ್ರಹದ ವಿಚಾರ ಬಂದಾಗ ಇದು ಸುಲಭವಾಗಿರುತ್ತದೆ ಎಂದು ಭಾವಿಸಿದ್ದೆ. ಆದರೆ ಜನರಿಗೆ ಈ ವಿಷಯವನ್ನು ತಿಳಿಸುವುದು ಹಾಗೂ ಅವರ ನಂಬಿಕೆ ಗಳಿಸುವುದು ಕಷ್ಟಕರವಾಗಿತ್ತು. ಕೇವಲ ವೈಯಕ್ತಿಕ ಸಾಧನೆಗಳ ಹಿಂದೆ ಓಡುವುದನ್ನು ಮೀರಿಸಿ, ಕ್ರೀಡೆಯನ್ನು ಒಂದು ಉದ್ದೇಶಕ್ಕಾಗಿ ಬಳಸಬೇಕು ಎಂಬ ಆಸೆ ನನಗಿತ್ತು. ಈ ಪ್ರಯಾಣ ನನಗೆ ಅತ್ಯಂತ ಸಂತಸ ಮತ್ತು ತೃಪ್ತಿಯನ್ನು ನೀಡಿದೆ ಎಂದು ಹೇಳಿದರು.
ಹಸೀನಾಗೆ ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಭಾಗವಹಿಸುವುದು ಕೇವಲ ದೈಹಿಕ ಸವಾಲಿನ ವಿಷಯವಲ್ಲ. ಇದು ಪ್ಯಾಲಿಯೇಟಿವ್ ಕೇರ್‌ನ ಮಹತ್ವದ ಕುರಿತು ಜಾಗೃತಿ ಮೂಡಿಸುವ ವೇದಿಕೆಯಾಗಿದೆ. ತಮ್ಮ ನಿಧಿ ಸಂಗ್ರಹ ಯತ್ನದ ಮೂಲಕ, ಅಂತಿಮ ಹಂತದ ಆರೈಕೆಯಲ್ಲಿ ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ನೆರವಾಗುವ ಆಶಯವನ್ನು ಅವರು ಹೊಂದಿದ್ದಾರೆ.
/filters:format(webp)/newsfirstlive-kannada/media/media_files/2026/01/14/tata-mumbai-marathoon-hasina-1-2026-01-14-15-27-35.jpg)
ಹಸೀನಾ ಅವರ ಪ್ರಯಾಣವು ಭಾರತದ ರನ್ನಿಂಗ್ ಸಮುದಾಯದಲ್ಲಿ ಹೆಚ್ಚುತ್ತಿರುವ ಹೊಸ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ. ಓಟಗಾರರು ಮತ್ತು ಕೋಚ್‌ಗಳು ಟಾಟಾ ಮುಂಬೈ ಮ್ಯಾರಥಾನ್‌ನಂತಹ ದೊಡ್ಡ ಮಟ್ಟದ ಕ್ರೀಡಾ ವೇದಿಕೆಗಳನ್ನು ಬಳಸಿಕೊಂಡು ಸಾಮಾಜಿಕ ಪರಿಣಾಮವನ್ನು ಸೃಷ್ಟಿಸುತ್ತಿದ್ದು, ವೈಯಕ್ತಿಕ ಆಸಕ್ತಿಯನ್ನು ಸಮಾಜಕ್ಕೆ ಅರ್ಥಪೂರ್ಣ ಬೆಂಬಲವಾಗಿ ರೂಪಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us