Advertisment

ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತ: ಬಾಲಕ ಸೇರಿ ಅಜ್ಜ, ಅಜ್ಜಿ ದಾರುಣ ಸಾವು

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಜ್ಜ, ಅಜ್ಜಿ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಬೈಕ್ , ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

author-image
Chandramohan
bike and lorry accident03

ಹುಲಿಯೂರುದುರ್ಗ ಬಳಿ ಸಂಭವಿಸಿದ ಬೈಕ್- ಲಾರಿ ಅಪಘಾತ

Advertisment
  • ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ
  • ಲಾರಿಗೆ ಬೈಕ್ ಡಿಕ್ಕಿ ಹೊಡೆದು ಮೂವರು ಸಾವು
  • ಹುಚ್ಚೇಗೌಡ, ನಿಂಗಮ್ಮ, ಮೊಮ್ಮಗ ಪ್ರೀತಮ್ ದಾರುಣ ಅಂತ್ಯ
  • ರಸ್ತೆ ಕಾಮಗಾರಿ ಕಾರಣದಿಂದ ಒನ್ ವೇ ಮಾಡಿದ್ದ ರಸ್ತೆಯಲ್ಲಿ ಅಪಘಾತ

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.  ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ  ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಬಳಿ ಭೀಕರ ರಸ್ತೆ ಅಪಘಾತ ಮೂವರನ್ನು ಬಲಿ ಪಡೆದಿದೆ. 
ಹುಚ್ಚೇಗೌಡ (60), ಮೊಮ್ಮಗ ಪ್ರೀತಮ್ (11) ನಿಂಗಮ್ಮ(55) ಮೃತ ದುರ್ದೈವಿಗಳು. ರಾಜ್ಯ ಹೆದ್ದಾರಿ 85ರ ಬಳಿಯ ಸುಗ್ಗನಹಳ್ಳಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.  ಮೃತರೆಲ್ಲರೂ ಉಂಗ್ರ ಗ್ರಾಮದವರು.. ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ  ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು.. ಬೈಕ್ ನಲ್ಲಿ ಹುಚ್ಚೇಗೌಡ, ನಿಂಗಮ್ಮ ದಂಪತಿ ತಮ್ಮ ಮೊಮ್ಮಗ ಪ್ರೀತಮ್ ನನ್ನು ಕೂರಿಸಿಕೊಂಡು ಹೋಗುತ್ತಿದ್ದರು.  ಈ ವೇಳೆ ಎದುರಿಗೆ ಬಂದ ಲಾರಿಗೆ  ಹುಚ್ಚೇಗೌಡರ ಬೈಕ್ ಡಿಕ್ಕಿ ಹೊಡೆದಿದೆ.  ಸ್ಥಳದಲ್ಲೇ ಹುಚ್ಚೇಗೌಡ, ಪ್ರೀತಮ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನಿಂಗಮ್ಮ ಸಾವನ್ನಪ್ಪಿದ್ದಾರೆ. ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. 

Advertisment

bike and lorry accident02




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

BIKE AND LORRY ACCIDENT AT KUNIGAL
Advertisment
Advertisment
Advertisment